Site icon Vistara News

ಕೇಂದ್ರದ ಹುದ್ದೆಗೆ ವೀರಪ್ಪನ್ ಕಾರ್ಯಾಚರಣೆ ಸಾರಥಿ ವಿಜಯ್‌ ಕುಮಾರ್‌ ರಾಜೀನಾಮೆ, ಕಾರಣ ಏನು?

K Vijay Kumar

ನವದೆಹಲಿ: ದಂತಚೋರ ವೀರಪ್ಪನ್‌ ಹತ್ಯೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ, ದಕ್ಷ ಐಪಿಎಸ್‌ ಅಧಿಕಾರಿ ಎಂದೇ ಖ್ಯಾತಿಯಾಗಿದ್ದ ಕೆ.ವಿಜಯ್‌ ಕುಮಾರ್‌ ಅವರು ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರಾದರೂ ನಿಖರ ಕಾರಣ ತಿಳಿದುಬಂದಿಲ್ಲ.

ಕೆ. ವಿಜಯ್‌ ಕುಮಾರ್‌ ಅವರು ದೆಹಲಿಯಿಂದ ಚೆನ್ನೈಗೆ ಶಿಫ್ಟ್‌ ಆಗಿದ್ದಾರೆ. ಹಾಗಾಗಿಯೇ, ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಅವರು ಕೂಡ “ನಾನು ಚೆನ್ನೈಗೆ ಶಿಫ್ಟ್‌ ಆಗಿದ್ದೇನೆ. ವೈಯಕ್ತಿಕ ಕಾರಣಗಳಿಂದಾಗಿ ಕೇಂದ್ರ ಗೃಹ ಸಚಿವಾಲಯದ ಹುದ್ದೆಯಲ್ಲಿ ಮುಂದುವರಿಯಲು ಆಗುತ್ತಿಲ್ಲ” ಎಂದು ತಿಳಿಸಿದ್ದಾರೆ. ಸೇವಾವಧಿಯಲ್ಲಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರಿಗೆ ಧನ್ಯವಾದ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಾಣಾಕ್ಷ ಅಧಿಕಾರಿ

ಇವರು ೧೯೭೫ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆಗಿದ್ದಾರೆ. ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗುವ ಮೂಲಕ ವಿಜಯ್‌ ಕುಮಾರ್‌ ಅವರು ಚಾಣಾಕ್ಷ ಅಧಿಕಾರಿ ಎನಿಸಿದ್ದರು. ಅದರಲ್ಲೂ, ದಂತಚೋರ ವೀರಪ್ಪನ್‌ನನ್ನು ಹಿಡಿಯಲು ಕಾರ್ಯಾಚರಣೆ ಕೈಗೊಂಡಾಗ ಇವರು ತಮಿಳುನಾಡು ವಿಶೇಷ ಕಾರ್ಯಪಡೆ (STF) ಮುಖ್ಯಸ್ಥರಾಗಿದ್ದರು. ಕಾರ್ಯಾಚರಣೆಯ ಸಾರಥ್ಯ ವಹಿಸಿಕೊಂಡು, ಯಶಸ್ವಿಯಾಗಿದ್ದಾರೆ. ಅಲ್ಲದೆ, ಎಡಪಂಥೀಯ ತೀವ್ರವಾದ, ಜಮ್ಮು-ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲೂ ಇವರ ಪಾತ್ರ ಹಿರಿದಾಗಿತ್ತು.

ಇದನ್ನೂ ಓದಿ | ದಲಿತನೆಂಬ ಕಾರಣಕ್ಕೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ; ರಾಜೀನಾಮೆ ಸಲ್ಲಿಸಿದ ಉತ್ತರ ಪ್ರದೇಶ ಸಚಿವ

Exit mobile version