Site icon Vistara News

Madan Das Devi: ಮೋದಿ ಗುಜರಾತ್‌ ಸಿಎಂ ಆಗುವ ನಿರ್ಧಾರದ ಹಿಂದಿದ್ದ ಆರೆಸ್ಸೆಸ್‌ ನಾಯಕ ಮದನ್‌ ದಾಸ್‌ ದೇವಿ ಇನ್ನಿಲ್ಲ

Madan Das Devi Dies

Veteran RSS functionary Madan Das Devi Dies; PM Narendra Modi Tributes

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಏಳಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಮದನ್‌ ದಾಸ್‌ ದೇವಿ (81) (Madan Das Devi) ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಸೋಮವಾರ (ಜುಲೈ 24) ಬೆಳಗಿನ ಜಾವ 5 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

“ಆರ್‌ಎಸ್‌ಎಸ್‌ ಪ್ರಚಾರಕರು, ಮಾಜಿ ಸಹಸರಕಾರ್ಯವಾಹ, ಎಬಿವಿಪಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮದನ್‌ ದಾಸ್‌ ದೇವಿ ಅವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಕೇಶವ ಕೃಪಾದಲ್ಲಿ ಸೋಮವಾರ ಮಧ್ಯಾಹ್ನ 1.30ರಿಂದ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ (ಜುಲೈ 25) ಬೆಳಗ್ಗೆ 11 ಗಂಟೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ” ಎಂದು ಮಾಹಿತಿ ನೀಡಿದೆ.

ನರೇಂದ್ರ ಮೋದಿ ಸಂತಾಪ

ಮದನ್‌ ದಾಸ್‌ ದೇವಿ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. “ಮದನ್‌ ದಾಸ್‌ ದೇವಿ ಅವರ ಅಗಲಿಕೆಯ ಸುದ್ದಿ ತಿಳಿದು ಅಪಾರ ನೋವುಂಟಾಗಿದೆ. ಅವರು ಇಡೀ ಜೀವನವನ್ನು ರಾಷ್ಟ್ರಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅವರಿಂದ ನಾನು ತುಂಬ ಕಲಿತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Digvijaya Singh: ಆರೆಸ್ಸೆಸ್‌ ಮಾಜಿ ಮುಖ್ಯಸ್ಥ ಗುರೂಜಿ ವಿರುದ್ಧ ಟ್ವೀಟ್; ದಿಗ್ವಿಜಯ್ ಸಿಂಗ್ ವಿರುದ್ಧ ಕೇಸ್ ದಾಖಲು

ಮೋದಿ ಏಳಿಗೆಯ ಶಕ್ತಿ ಮದನ್‌ ದಾಸ್‌ ದೇವಿ

ಪ್ರಧಾನಿ ನರೇಂದ್ರ ಮೋದಿ ಅವರ ಏಳಿಗೆಯ ಹಿಂದಿರುವವರಲ್ಲಿ ಮದನ್‌ ದಾಸ್‌ ದೇವಿ ಕೂಡ ಒಬ್ಬರು ಎಂದು ತಿಳಿದುಬಂದಿದೆ. ಅದರಲ್ಲೂ, ಆರ್‌ಎಸ್‌ಎಸ್‌ ಸಂಘಟನಾ ಕಾರ್ಯದಲ್ಲಿ ತೊಡಗಿದ್ದ ಮೋದಿ ಅವರನ್ನು ಗುಜರಾತ್‌ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ನಿರ್ಧಾರದ ಹಿಂದೆ ಇವರ ಪಾತ್ರವೂ ಇದೆ. ಮೋದಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ ಕುರಿತು ಇದಕ್ಕೂ ಮೊದಲು ಮಾತನಾಡಿದ್ದ ಮದನ್‌ ದಾಸ್‌ ದೇವಿ, “ಆರ್‌ಎಸ್‌ಎಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿದ್ದ ನರೇಂದ್ರ ಮೋದಿ ಅವರನ್ನು ಗುಜರಾತ್‌ ಸಿಎಂ ಆಯ್ಕೆ ಮಾಡಿದೆವು” ಎಂದು ಮದನ್‌ ದಾಸ್‌ ದೇವಿ ಎಂದು ತಿಳಿಸಿದ್ದರು.

Exit mobile version