Site icon Vistara News

Anand Mahindra: ನಟ ರಾಮ್‌ ಚರಣ್‌ ಜತೆ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್‌ ಮಹೀಂದ್ರಾ, ವಿಡಿಯೊ ವೈರಲ್‌

Anand Mahindra Dance

#image_title

ಹೈದರಾಬಾದ್‌: ಎಸ್‌.ಎಸ್‌.ರಾಮಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದ ನಾಟು ನಾಡು ಹಾಡು, ಮನಮೋಹಕ ನೃತ್ಯ ಯಾರಿಗೆ ಇಷ್ಟವಿಲ್ಲ ಹೇಳಿ. ದೇಶದಲ್ಲಿ ಖ್ಯಾತಿಯಾಗಿ, ಅಂತಾರಾಷ್ಟ್ರೀಯ ಮಟ್ಟದ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಪಡೆದು ಈಗ ಆಸ್ಕರ್‌ಗೂ ಹಾಡು ನಾಮಿನೇಟ್‌ ಆಗಿದೆ. ಇಂತಹ ಪ್ರಸಿದ್ಧ ಹಾಡಿಗೆ ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ (Anand Mahindra) ಅವರು ನಟ ರಾಮ್‌ ಚರಣ್‌ ಜತೆಗೂಡಿ ಹೆಜ್ಜೆಹಾಕಿದ್ದು, ವಿಡಿಯೊ ಈಗ ವೈರಲ್‌ ಆಗಿದೆ.

ಆನಂದ್‌ ಮಹೀಂದ್ರಾ ಅವರು ಹೈದರಾಬಾದ್‌ಗೆ ಭೇಟಿ ನೀಡಿದ್ದು, ಹೈದರಾಬಾದ್ ಇಪ್ರಿಕ್ಸ್‌ಗೆ ತೆರಳಿದ್ದರು. ಇದೇ ವೇಳೆ ರಾಮ್‌ ಚರಣ್‌ ಅವರನ್ನು ಭೇಟಿಯಾದ ಆನಂದ್‌ ಮಹೀಂದ್ರಾ ಅವರಿಗೆ ರಾಮ್‌ ಚರಣ್‌ ಅವರು ನಾಟು ನಾಟು ಹಾಡಿನ ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ. ಇಬ್ಬರೂ ನೃತ್ಯ ಮಾಡಿದ ವಿಡಿಯೊ ವೈರಲ್‌ ಆಗಿದೆ.

ಇದನ್ನೂ ಓದಿ: MM Keeravaani: ‘ಆಸ್ಕರ್‌ ಗೆದ್ದೇ ಗೆಲ್ಲುತ್ತೇವೆ’, ನಾಟು ನಾಟು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ವಿಶ್ವಾಸ

ನೃತ್ಯ ಮಾಡಿದ ವಿಡಿಯೊವನ್ನು ಆನಂದ್‌ ಮಹೀಂದ್ರಾ ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಹೈದರಾಬಾದ್‌ ಇಪ್ರಿಕ್ಸ್‌ಗೆ ಭೇಟಿ ನೀಡಿದ್ದು ಹೆಚ್ಚೇ ಲಾಭವಾಯಿತು. ನಟ ರಾಮ್‌ ಚರಣ್‌ ಅವರು ನನಗೆ ನೃತ್ಯ ಕಲಿಸಿದರು. ಆಸ್ಕರ್‌ ಪ್ರಶಸ್ತಿ ನಿಮಗೇ ಸಿಗಲಿ ಗೆಳೆಯ” ಎಂದು ಹೇಳಿದ್ದಾರೆ.

Exit mobile version