ನವದೆಹಲಿ: ನೀವು ಹಾಗೆ ಸುಮ್ಮನೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುತ್ತೀರಿ. ಯಾವುದೇ ಯೋಚನೆಯಲ್ಲಿಯೋ, ಹಾಡು ಕೇಳುತ್ತಲೋ, ಹಾಡುತ್ತಲೋ ತೆರಳುತ್ತೀರಿ. ಆಗ, ಧುತ್ತನೆ ಮುಂದಿನ ಎರಡು (Front Wheels) ಚಕ್ರಗಳಿಲ್ಲದ ಲಾರಿಯೊಂದು ವೇಗವಾಗಿ ಬರುತ್ತಿರುವುದು ಕಾಣುತ್ತದೆ. ಆಗ, ಖಂಡಿತವಾಗಿಯೂ ಎದೆ ಝಲ್ ಎನ್ನುತ್ತದೆ. ಇದೆಲ್ಲ ಹಾರರ್ ಸಿನಿಮಾದ ಕಲ್ಪನೆ ಎಂದು ಅನಿಸಬಹುದು. ಆದರೆ, ಇದು ನಿಜ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ, ವೈರಲ್ ಆದ ಈ ವಿಡಿಯೊ (Viral Video) ಸಾಕ್ಷಿಯಾಗಿದೆ.
ಹೌದು, ಫ್ರಂಟ್ ವ್ಹೀಲ್ಗಳೇ ಇಲ್ಲದ ಟ್ರಕ್ಅನ್ನು ಚಾಲಕನು ವೇಗವಾಗಿ ಚಲಾಯಿಸುತ್ತಿರುವ ವಿಡಿಯೊ ಈಗ ವೈರಲ್ ಆಗಿದೆ. ಸುಕ್ಷಮ್ ಶರ್ಮಾ ಎಂಬುವರು ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದು, ಸಾವಿರಾರು ಜನ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.
“ಇದು ಭಾರತದ ಚಾಲಕನ ನಿಜವಾದ ಶಕ್ತಿ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದರೆ, “ಇಂತಹದ್ದೆಲ್ಲ ಭಾರತದಲ್ಲಿ ಮಾತ್ರ ಘಟಿಸಲು ಸಾಧ್ಯ” ಎಂದು ಮತ್ತೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, “ಯು-ಟರ್ನ್ ಹೇಗೆ ತೆಗೆದುಕೊಳ್ಳುತ್ತೀಯಾ ಅಣ್ಣ” ಎಂದು ಪ್ರಶ್ನಿಸಿದ್ದಾರೆ. ಹೀಗೆ, ನೂರಾರು ಜನ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅಂದಹಾಗೆ, ಈ ವಿಡಿಯೊವನ್ನು 40 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಇದನ್ನೂ ಓದಿ | IND VS SL | ಚಿರತೆ ವೇಗದಲ್ಲಿ ಜಿಗಿದು ಕ್ಯಾಚ್ ಹಿಡಿದ ಇಶಾನ್ ಕಿಶನ್; ವಿಡಿಯೊ ವೈರಲ್!