Site icon Vistara News

Video: ಡಾರ್ಜಲಿಂಗ್‌ನಲ್ಲಿ ಪಾನಿಪುರಿ ವ್ಯಾಪಾರಿಯಾದ‌ ಮಖ್ಯಮಂತ್ರಿ ಮಮತಾ ಬ್ಯಾನರ್ಜಿ

mamata banerjee

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಲ್ಲಿ ವಿಶೇಷ ಗುಣಗಳಿವೆ. ಅವರು ಪಿಯಾನೊ ನುಡಿಸಬಲ್ಲರು, ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಮೊಣಕಾಲವರೆಗೆ ಸೀರೆಯೆತ್ತಿ, ಚೂರೂ ಹೆದರದೆ ಹೆಜ್ಜೆಯನ್ನೂ ಹಾಕಬಲ್ಲರು. ಇವೆಲ್ಲವನ್ನೂ ನಾವು ನೋಡಿದ್ದೇವೆ. ಆದರೆ ಈ ಸಲ ಅವರು ಇನ್ನೂ ವಿಭಿನ್ನವಾಗಿ ಸುದ್ದಿಯಾಗಿದ್ದಾರೆ. ಡಾರ್ಜಲಿಂಗ್‌ನಲ್ಲಿ ಪಾನಿಪುರಿ ತಯಾರಿಸಿ, ಜನರಿಗೆ ನೀಡಿದ್ದಾರೆ. ಅಂದರೆ ಪಾನಿಪುರಿ ವ್ಯಾಪಾರ ಮಾಡಿದ್ದಾರೆ.

ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (GTA)ದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಮಮತಾ ಬ್ಯಾನರ್ಜಿ ಡಾರ್ಜಲಿಂಗ್‌ಗೆ ತೆರಳಿದ್ದು, ಮೂರು ದಿನ ಅಲ್ಲಿಯೇ ತಂಗಲಿದ್ದಾರೆ. ಅಲ್ಲಿನ ಮಾಲ್‌ ರಸ್ತೆಯಲ್ಲಿರುವ ಪಾನಿಪುರಿ ಸ್ಟಾಲ್‌ವೊಂದರಲ್ಲಿ ನೀವು ಮಮತಾ ಬ್ಯಾನರ್ಜಿಯನ್ನು ನೋಡಬಹುದು. ಅವರೇ ಸ್ವತಃ ಪಾನಿಪುರಿ ತಯಾರಿಸಿ ಗ್ರಾಹಕರಿಗೆ ನೀಡಿದ್ದಾರೆ. ಪುರಿ ಒಡೆದು, ಅದರಲ್ಲಿ ಮಸಾಲೆಯನ್ನು ತುಂಬಿ ಗ್ರಾಹಕರಿಗೆ ನೀಡುವ ವಿಡಿಯೋ-ಫೋಟೋಗಳು ವೈರಲ್‌ ಆಗಿವೆ. ಇವರು ಕಳೆದ ಬಾರಿ ಡಾರ್ಜಲಿಂಗ್‌ಗೆ ಹೋಗಿದ್ದಾಗ ಅಂಗಡಿಯೊಂದಕ್ಕೆ ಹೋಗಿ ಮೊಮೊ ತಯಾರಿಸುವ ಪ್ರಯತ್ನ ಮಾಡಿದ್ದರು. ಆ ವಿಡಿಯೋಗಳು ಕೂಡ ವೈರಲ್‌ ಆಗಿದ್ದವು.

ಇದನ್ನೂ ಓದಿ: video viral: ಇದೇ ತರ ಹೊಟ್ಟೆ ಬೆಳೆದ್ರೆ ಏನಾಗ್ತದೆ ನೋಡು.. ಮಮತಾ ಬ್ಯಾನರ್ಜಿ ಹೀಗೂ ಜೋಕ್‌ ಮಾಡ್ತಾರಾ?

Exit mobile version