Site icon Vistara News

Vijay Mallya | ಮಲ್ಯ ಸಂಪರ್ಕಕ್ಕೇ ಸಿಗುತ್ತಿಲ್ಲ, ನಾನು ವಾದ ಮಾಡಲ್ಲ, ಸುಪ್ರೀಂಗೆ ಉದ್ಯಮಿ ಪರ ವಕೀಲ ಹೇಳಿದ್ದೇನು?

Vijay Mallya back on x platform to wish dewali

ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್‌ ಮಲ್ಯರನ್ನು (Vijay Mallya) ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿರುವ ಮಧ್ಯೆಯೇ ಉದ್ಯಮಿ ಪರ ವಕೀಲರು ನನ್ನನ್ನು ಪ್ರಕರಣದಲ್ಲಿ ವಾದ ಮಂಡಿಸುವುದರಿಂದ ವಿಮುಕ್ತಿಗೊಳಿಸಿ ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮಲ್ಯ ಪರ ವಕೀಲರೇ ಕೇಸ್‌ನಿಂದ ಬಿಡುಗಡೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿರುವುದು ಅಚ್ಚರಿ ಮೂಡಿಸಿದೆ.

“ವಿಜಯ್‌ ಮಲ್ಯ ಸಂಪರ್ಕಕ್ಕೇ ಸಿಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ. ನನ್ನ ಬಳಿ ಅವರ ಇ-ಮೇಲ್‌ ಅಡ್ರೆಸ್‌ ಮಾತ್ರ ಇದೆ. ಮೇಲ್‌ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಾಗಾಗಿ, ಅವರ ಪರ ವಾದ ಮಂಡಿಸುವುದರಿಂದ ನನ್ನನ್ನು ಬಿಡುಗಡೆ ಮಾಡಬೇಕು” ಎಂದು ವಕೀಲ ಇ.ಸಿ.ಅಗರ್ವಾಲ ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಜತೆ ಉಂಟಾದ ಬಿಕ್ಕಟ್ಟಿನ ಕುರಿತು ಮಲ್ಯ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಅಗರ್ವಾಲ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, “ಪ್ರಕರಣದಿಂದ ಹಿಂದೆ ಸರಿಯಲು ಇರುವ ಪ್ರಕ್ರಿಯೆಗಳನ್ನು ಅನುಸರಿಸಿ” ಎಂದು ಸೂಚಿಸಿತು. ಭಾರತದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ವಂಚಿಸಿರುವ ವಿಜಯ್‌ ಮಲ್ಯ, ಹಲವು ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತು ಕೇಂದ್ರ ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ | ಐಪಿಎಲ್‌ನಲ್ಲಿ ಅವಕಾಶ ಕಳೆದುಕೊಂಡಿರುವ ಕ್ರಿಸ್‌ ಗೇಲ್‌ ಆರ್‌ಸಿಬಿ ಮಾಜಿ ಮಾಲೀಕ ವಿಜಯ್‌ ಮಲ್ಯ ಭೇಟಿಯಾಗಿದ್ದೇಕೆ?

Exit mobile version