Site icon Vistara News

DGCA Director General: ಡಿಜಿಸಿಎ ನೂತನ ಮಹಾ ನಿರ್ದೇಶಕರಾಗಿ ವಿಕ್ರಮ್‌ ದೇವ್‌ ದತ್‌ ನೇಮಕ, ಯಾರಿವರು?

Vikram Dev Dutt

ನವದೆಹಲಿ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (DGCA) ಮಹಾ ನಿರ್ದೇಶಕರಾಗಿ (DGCA Director General) ವಿಕ್ರಮ್‌ ದೇವ್‌ ದತ್‌ ಅವರನ್ನು ನೇಮಕ ಮಾಡಲು ಕೇಂದ್ರ ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಹಾಲಿ ಮಹಾ ನಿರ್ದೇಶಕ ಅರುಣ್‌ ಕುಮಾರ್‌ ಅವರು ನಿವೃತ್ತರಾಗುತ್ತಿರುವ ಕಾರಣ ನೂತನ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ವಿಕ್ರಮ್‌ ದೇವ್‌ ದತ್‌ ಅವರು ಫೆಬ್ರವರಿ 28ರಂದು ಪದಗ್ರಹಣ ಮಾಡಲಿದ್ದಾರೆ.

ಕಳೆದ ವರ್ಷ ವಿಕ್ರಮ್‌ ದೇವ್‌ ದತ್‌ ಅವರು ಏರ್‌ ಇಂಡಿಯಾ ಲಿಮಿಟೆಡ್‌ನ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಸರ್ಕಾರವೇ ಇವರನ್ನು ನೇಮಿಸಿತ್ತು. ಆದರೆ, ಕಳೆದ ವರ್ಷವೇ ಏರ್‌ ಇಂಡಿಯಾ ಲಿಮಿಟೆಡ್‌ಅನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡಲಾಯಿತು. ಈಗ ವಿಕ್ರಮ್‌ ದೇವ್‌ ದತ್‌ ಅವರನ್ನು ಡಿಜಿಸಿಎ ಡೈರೆಕ್ಟರ್‌ ಜನರಲ್‌ ಆಗಿ ನೇಮಿಸಲಾಗಿದೆ.

ವಿಕ್ರಮ್‌ ದೇವ್‌ ದತ್‌ ಅವರು 1993ನೇ ಐಎಎಸ್‌ ಬ್ಯಾಚ್‌ನ ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಹಾಗೂ ಯೂನಿಯನ್‌ ಟೆರಿಟರಿ (AGMUT) ಕೇಡರ್‌ ಅಧಿಕಾರಿಯಾಗಿದ್ದಾರೆ. ಇವರು ದೆಹಲಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಆಗಿದ್ದರು.

ಇದನ್ನೂ ಓದಿ | Pee-Gate Row: ಏರ್​ ಇಂಡಿಯಾಕ್ಕೆ 30 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ; ಪ್ಲೈಟ್​ ಕಮಾಂಡರ್​ ಲೈಸೆನ್ಸ್​ 3 ತಿಂಗಳು ರದ್ದು

Exit mobile version