Site icon Vistara News

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಭದ್ರತೆಗೆ ಸೇನೆ, ಅರೆಸೇನಾ ಪಡೆ ನಿಯೋಜನೆ, ಮರಳಿದ ಕರ್ಫ್ಯೂ

Violence again in Manipur; army, paramilitary forces deployed

ಗುವಾಹಟಿ: ಎರಡು ವಾರಗಳ ಹಿಂದೆ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur) ಮತ್ತೆ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಾಗಿ ಸೇನಾ ಮತ್ತು ಅರೆ ಸೇನಾ ಪಡೆಗಳನ್ನು ಹಿಂಸಾಗ್ರಸ್ತ ಪ್ರದೇಶಕ್ಕೆ ನಿಯೋಜಿಸಲಾಗಿದೆ.

ಮಣಿಪುರದ ರಾಜಧಾನಿ ಇಂಪಾಲ್‌ನ ನ್ಯೂಚಾಕಾನ್ ಪ್ರದೇಶದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಸೋಮವಾರ ಹಿಂಸಾಚಾರ ಸಂಭವಿಸಿದೆ. ಈ ಪ್ರದೇಶದಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಮುಂದಾಗಿವೆ. ಈ ಮೊದಲು ಕರ್ಫ್ಯೂ ಸಂಜೆ ನಾಲ್ಕು ಗಂಟೆಯವರೆಗೆ ಸಡಿಲ ಮಾಡಲಾಗಿತ್ತು. ಆದರೆ, ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕರ್ಫ್ಯೂ ಹೇರಲಾಗಿದೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಸುಟ್ಟು ಬೂದಿಯಾಗುತ್ತಿರುವ ಶಾಲೆಗಳು, ಚರ್ಚ್​​ಗಳು; ಐಟಿ ಅಧಿಕಾರಿಯ ಹತ್ಯೆ

ಎರಡು ವಾರಗಳ ಹಿಂದೆ ಸಂಭವಿಸಿದ ಹಿಂಸಾಚಾರದಲ್ಲಿ ಸುಮಾರು 7500 ಜನರು ಸಂತ್ರಸ್ತರಾಗಿದ್ದರು. ಅವರನ್ನು ಸುರಕ್ಷಿತ ಸ್ಥಳಾಂತರ ಮಾಡಲಾಗಿತ್ತು. ಬಹುಸಂಖ್ಯಾತ ಮೈತೈ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡೆ ಮಾಡಲು ವಿವಿಧ ಬುಡಕಟ್ಟು ಸಮುದಾಯವರ ಪ್ರಬಲ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಮೈತೈ ಮತ್ತು ಆಲ್ ಟ್ರೈಬಲ್ ಸ್ಟುಡೆಂಟ್ಸ್ ಯುನಿಯನ್ ನಡುವಿನ ಸಂಘರ್ಷವೇ ಮಣಿಪುರದ ಹಿಂಸಾಚಾರಕ್ಕೆ ಕಾರಣವಾಗಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version