ಗುವಾಹಟಿ: ಹೊಸ ವರ್ಷಾಚರಣೆ (New Year Celebration) ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮಣಿಪರದಲ್ಲಿ ನಡೆದಿದೆ(4 Shot Dead In Manipur). ಮೈತೈ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷದಿಂದಾಗಿ ಕಳೆದ ಆರೇಳು ತಿಂಗಳಿಂದ ಮಣಿಪುರ ಹಿಂಸಾಚಾರದಿಂದ ತತ್ತರಿಸಿದೆ. ಈಗ ನಡೆದಿರುವ ಹತ್ಯೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಹೊಸ ಹಿಂಸಾಚಾರದ ಬಳಿಕ ರಾಜ್ಯದ ಐದು ಜಿಲ್ಲೆಗಳಲ್ಲಿ ಸಂಪೂರ್ಣ ಕರ್ಫ್ಯೂ (Curfew Impose) ಹೇರಲಾಗಿದೆ. ಈ ದಾಳಿಯಿಂದ ರೊಚ್ಚಿಗೆದ್ದ ಸ್ಥಳೀಯರು ಬಂದೂಕುಧಾರಿಗಳ ವಾಹನಗಳಿಗೆ ಬೆಂಕಿ ಹೆಚ್ಚಿದ್ದಾರೆಂದು ವರದಿಯಾಗಿದೆ.
ತಂಡವು ಬಂದೂಕುಗಳೊಂದಿಗೆ ಇಲ್ಲಿಗೆ ಬಂದಿತು. ತಮಗೆ ಪರಿಚಯವಿರುವವರ ಜತೆ ಮಾತನಾಡುತ್ತಿದ್ದರು ಮತ್ತು ಆಗ ಅವರ ಮಧ್ಯೆ ಜಗಳ ಶುರುವಾಯಿತು. ಜಗಳ ತಾರಕ್ಕೇರುತ್ತಿದ್ದಂತೆ ಎಲ್ಲರ ಮೇಲೂ ಗುಂಡು ಹಾರಿಸಲು ಆರಂಭಿಸಿದರು ಎಂದು ಸ್ಥಳೀಯ ಹೇಳಿದ್ದಾರೆ. ಈ ವೇಳೆ, ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ ಬಹಳಷ್ಟು ಮಂದಿಗೆ ಗಾಯಗಳಾಗಿವೆ.
ಈ ಘಟನೆ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು, ಹಿಂಸಾಚಾರವನ್ನು ಖಂಡಿಸಿದ್ದು, ಶಾಂತಿಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಅಮಾಯಕರ ಹತ್ಯೆಯ ಬಗ್ಗೆ ನಾನು ನನ್ನ ಅಪಾರ ದುಃಖವನ್ನು ವ್ಯಕ್ತಪಡಿಸುತ್ತೇನೆ. ನಾವು ಅಪರಾಧಿಗಳನ್ನು ಹಿಡಿಯಲು ಪೊಲೀಸ್ ತಂಡಗಳನ್ನು ಸಜ್ಜುಗೊಳಿಸಿದ್ದೇವೆ. ನಾನು ಕೈ ಮುಗಿದು ಕೇಳುತ್ತೇನೆ, ಅಪರಾಧಿಗಳನ್ನು ಪತ್ತೆಹಚ್ಚಲು ಸರ್ಕಾರಕ್ಕೆ ಸಹಾಯ ಮಾಡಲು ಲಿಲಾಂಗ್ (ಘಟನೆ ಸಂಭವಿಸಿದ ಸ್ಥಳ) ನಿವಾಸಿಗಳಿಗೆ ಮನವಿ ಮಾಡುತ್ತೇನೆ. ಕಾನೂನಿನಡಿಯಲ್ಲಿ ನ್ಯಾಯವನ್ನು ನೀಡಲು ಸರ್ಕಾರ ತನ್ನ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಅವರು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Manipur Violence: ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಸೇನಾಧಿಕಾರಿಗೆ ಮಣಿಪುರ ಹಿಂಸಾಚಾರ ತಡೆಯುವ ಹೊಣೆ!