Site icon Vistara News

Viral News:‌ 18ನೇ ವಯಸ್ಸಿಗೆ ಡಾಕ್ಟರ್‌, 22ಕ್ಕೆ ಡಿ.ಸಿ; ಎಲ್ಲ ಬಿಟ್ಟು 26 ಸಾವಿರ ಕೋಟಿ ರೂ. ಕಂಪನಿ ಕಟ್ಟಿದ; ಇದು ಸೈನಿ ಕತೆ

Roman Saini Success Story

Viral News: A man passed medical entrance at 16, cracked UPSC at 22, Built Rs 26000 crore firm

ನವದೆಹಲಿ: ಸರ್ಕಾರಿ ನೌಕರಿ ಸಿಕ್ಕರೆ ಜೀವನ ಸೆಟಲ್‌ ಆಯಿತು ಎನ್ನುವವರಿದ್ದಾರೆ. ಇನ್ನು ವೈದ್ಯರಾಗಲು, ಐಎಎಸ್‌ ಪಾಸಾಗಲು ಹಗಲು-ಕಷ್ಟಪಡುವವರಿದ್ದಾರೆ. ಒಮ್ಮೆ ವೈದ್ಯರಾದರೆ ಅಥವಾ ಐಎಎಸ್‌ ಪಾಸಾದರೆ, ಅದರಲ್ಲೇ ಇಡೀ ಜೀವನ ಕಳೆಯುತ್ತಾರೆ. ಆದರೆ, ರಾಜಸ್ಥಾನದ ರೋಮನ್‌ ಸೈನಿ ಎಂಬ ವ್ಯಕ್ತಿಯು 16ನೇ ವಯಸ್ಸಿಗೆ ಮೆಡಿಕಲ್‌ ಎಕ್ಸಾಮ್‌ ಪಾಸಾಗಿ ವೈದ್ಯನಾದ. ಅಷ್ಟೇ ಅಲ್ಲ, 22ನೇ ವಯಸ್ಸಿಗೆ ಐಎಎಸ್‌ ಪಾಸಾಗಿ ಉನ್ನತ ಹುದ್ದೆಗೆ ಗಿಟ್ಟಿಸಿಕೊಂಡ. ಆದರೆ, ಎರಡೂ ಬಿಟ್ಟ ಈ ವ್ಯಕ್ತಿಯು 26 ಸಾವಿರ ಕೋಟಿ ರೂ. ಮೌಲ್ಯದ ಬೃಹತ್‌ ಕಂಪನಿ (Viral News) ಕಟ್ಟಿದ್ದಾರೆ. ಆ ಮೂಲಕ ಮನಸ್ಸೊಂದಿದ್ದರೆ ಸಾಕು, ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು, ರಾಜಸ್ಥಾನದ ರೋಮನ್‌ ಸೈನಿ ಅವರು ದೇಶದ ಕುಶಾಗ್ರಮತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು 16ನೇ ವಯಸ್ಸಿಗೆ ಏಮ್ಸ್‌ ಪ್ರವೇಶ ಪರೀಕ್ಷೆ ಪಾಸಾಗಿ, ಎಂಬಿಬಿಎಸ್‌ ಪದವಿ ಪಡೆದರು. ಪದವಿ ಬಳಿಕ ಆರು ತಿಂಗಳು ಏಮ್ಸ್‌ನಲ್ಲಿ ಕೆಲಸ ಮಾಡಿದರು. ಆದರೆ ಈ ಕೆಲಸ ಅವರಿಗೆ ಬೋರ್‌ ಆಯಿತು. ಐಎಎಸ್‌ ಅಧ್ಯಯನ ಮಾಡಲು ಆರಂಭಿಸಿದರು. ಕೇವಲ 22ನೇ ವಯಸ್ಸಿಗೆ ಅವರು ಐಎಎಸ್‌ ಪಾಸಾಗಿ, ಮಧ್ಯಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯಾರಂಭಿಸಿದರು. ಆದರೆ, ಅಷ್ಟಕ್ಕೂ ಸುಮ್ಮನಾಗದ ರೋಮನ್‌ ಸೈನಿ, ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದರು.

ಕಂಪನಿ ಕಟ್ಟಿದ ರೋಮನ್‌ ಸೈನಿ

ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ರೋಮನ್‌ ಸೈನಿ, ಗೆಳೆಯ ಗೌರವ್‌ ಮುಂಜಾಲ್‌ ಜತೆಗೂಡಿ ಅನ್‌ಅಕಾಡೆಮಿ (Unacademy) ಎಂಬ ಆನ್‌ಲೈನ್‌ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅನ್‌ಅಕಾಡೆಮಿಯಿಂದ ಲಕ್ಷಾಂತರ ಜನ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಐಎಎಸ್‌ ಪರೀಕ್ಷೆಗೆ ತರಬೇತಿ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು ಎಂಬ ಮನಸ್ಥಿತಿ ಬದಲಾಗಿ, ಅನ್‌ಅಕಾಡೆಮಿ ಮೂಲಕ ತರಬೇತಿ ಪಡೆಯಲು ಸಾಧ್ಯವಾಗಿದೆ.

ಇದನ್ನೂ ಓದಿ: MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್

ರೋಮನ್‌ ಸೈನಿ ಹಾಗೂ ಗೌರವ್‌ ಮುಂಜಾಲ್‌ ಕಟ್ಟಿದ ಅನ್‌ಅಕಾಡೆಮಿ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದೆ. ಇವರ ಸಂಸ್ಥೆಯ ಮೌಲ್ಯವು 26 ಸಾವಿರ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಆ ಮೂಲಕ ಜೀವನದಲ್ಲಿ ಸರ್ಕಾರಿ ಉದ್ಯೋಗ ಪಡೆದರೆ ಮಾತ್ರ ಯಶಸ್ಸು ಅಲ್ಲ, ಡಾಕ್ಟರ್‌ ಆದರೆ ಮಾತ್ರ ಜೀವನ ಸಾರ್ಥಕ ಅಲ್ಲ. ಉದ್ಯಮದ ಮೂಲಕವೂ ಲಕ್ಷಾಂತರ ಜನರಿಗೆ ದಾರಿದೀಪವಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Exit mobile version