Site icon Vistara News

Viral News: ಈತನಿಗೆ 43 ಲಕ್ಷ ರೂ. ಸಂಬಳ! ಆದರೂ, ಉಚಿತ ಊಟ ನೀಡುವ ಕಂಪನಿ ಬೇಕಂತೆ!

Viral News, his salary is Rs 43 lakhs but seeks Companies With Free Food

ನವದೆಹಲಿ: ವರ್ಷಕ್ಕೆ 43 ಲಕ್ಷ ರೂ. ಪ್ಯಾಕೇಜ್‌ (Salary Package) ಪಡೆಯುವ ಉದ್ಯೋಗಿಯೊಬ್ಬರು ಕಂಪನಿಯಿಂದ ಉಚಿತ ಊಟಕ್ಕೆ ಬೇಡಿಕೆ (Free Meals) ಇಟ್ಟಿರುವುದು ಭಾರೀ ವೈರಲ್ ಆಗಿದೆ. ಹೌದು, ಇದು ನಿಜ, ಗ್ರೇಪ್‌ವೈನ್ (Grapevine) ಕಂಪನಿಯ ಉದ್ಯೋಗಿಯೊಬ್ಬರ ಈ ಬೇಡಿಕೆಯು ಸೋಷಿಯಲ್ ಮೀಡಿಯಾ (Social Media) ಗಮನ ಸೆಳೆದಿದ್ದು ಮಾತ್ರವಲ್ಲದೇ, ಕಂಪನಿಯ ಸಂಸ್ಥಾಪಕ ಸೌಮಿಲ್ ತ್ರಿಪಾಠಿ ಅವರಿಗೂ ತಲುಪಿದೆ. ಅವರು ಈ ಕುರಿತು ತಮ್ಮ ಅನಿಸಿಕೆಯನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿಕೊಂಡಿದ್ದಾರೆ(Viral News).

ಉದ್ಯೋಗಿ ಪೋಸ್ಟ್ ಷೇರ್ ಮಾಡಿ, ಅತ್ಯುತ್ತಮ ಊಟ ಮತ್ತು ನಾಲ್ಕು ಹೊತ್ತು ಉಚಿತವಾಗಿ ಊಟ ನೀಡುವ ಕಂಪನಿಗಳಿಗೆ ಸೇರಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ. ಗೂಗಲ್ ಸಂದರ್ಶನಕ್ಕಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ನಾನು ಗಮನಿಸಬಹುದಾದ ಇನ್ನು ಬೇರೆ ಯಾವುದಾದರೂ ಕಂಪನಿಗಳಿವೆಯೇ ಎಂದು ಬರೆದುಕೊಂಡಿದ್ದಾರೆ.

ಉದ್ಯೋಗಿಯ ಪೋಸ್ಟ್‌‌ನ ಸ್ಕ್ರೀನ್ ಶಾಟ್‌ ಅನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿರುವ ಗ್ರೇಪ್‌ವೈನ್ ಕಂಪನಿಯು ಸಂಸ್ಥಾಪಕ ಸೌಮಿಲ್ ತ್ರಿಪಾಠಿ ಅವರು, ಉಚಿತ ಊಟಕ್ಕಾಗಿ ಬೇರೆ ಕಂಪನಿ ಸೇರಲು ಮುಂದಾಗುತ್ತಿರುವ ಉದ್ಯೋಗಿಯ ಸಂಬಳ ವರ್ಷಕ್ಕೆ 43 ಲಕ್ಷ ಹಾಗೂ ನಾಲ್ಕುವರೆ ವರ್ಷ ಅನುಭವವಿದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ. ಅಲ್ಲದೇ, ಈ ಉದ್ಯೋಗಿಯು ಜಿಮ್‌ಗೆ ಹೋಗುತ್ತಿದ್ದು, ಉತ್ತಮ ಊಟಕ್ಕೆ ಆದ್ಯತೆ ನೀಡುತ್ತಾನೆ. ಹಾಗಾಗಿಯೇ ಅವರು ತಮ್ಮ ಎಲ್ಲ ನಾಲ್ಕೂ ಊಟಗಳನ್ನು ಸ್ಪಾನ್ಸರ್ ಮಾಡುವ ಕಂಪನಿಯನ್ನು ಹುಡುಕುತ್ತಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಆದ್ಯತೆಗಳು ಮತ್ತು ಭವಿಷ್ಯದ ಆಯ್ಕೆಗಳ ಬಗ್ಗೆ ತುಂಬಾ ಸ್ಪಷ್ಟತೆ ಹೊಂದಿರುವ ಜನರನ್ನು ನಾನು ಅಪರೂಪವಾಗಿ ನೋಡುತ್ತೇನೆ, ಅವರ ಮುಂದಿನ ಕೆಲಸವನ್ನು ಪಡೆಯಲು ಅವರ ಕಾರಣ ಸರಳವಾಗಿದೆ: ಉತ್ತಮ ಆಹಾರ ಸಂಪೂರ್ಣ ಚರ್ಚೆಯು ತುಂಬಾ ಒಳ್ಳೆಯದು ಎಂದು ಕಂಪನಿಯ ಸಂಸ್ಥಾಪಕ ಸೌಮಿಲ್ ತ್ರಿಪಾಠಿ ಹೇಳಿದ್ದಾರೆ.

ತ್ರಿಪಾಠಿ ಅವರು ಷೇರ್ ಮಾಡಿರುವ ಪೋಸ್ಟ್‌ಗೆ 77 ಸಾವಿರಕ್ಕೂ ಅಧಿಕ ವೀಕ್ಷಣೆ ಬಂದಿದೆ ಮತ್ತು ಹಲವಾರು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ವ್ಯಕ್ತಿಯ ಪ್ರಸ್ತುತ ಸಂಬಳ ಮತ್ತು ಅವನ/ಅವಳ ಕಾಳಜಿಯು ನನ್ನ ಜೀವನದ ಆಯ್ಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತಿದೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು, ಆತ ಜೋಮಾಟ್ ಸೇರಿಕೊಳ್ಳುವುದು ಉತ್ತಮ, ಉಚಿತ ಆಹಾರ ಸಿಗಬಹುದು ಎಂದು ಹೇಳಿದ್ದಾರೆ. ಮತ್ತೆ ಕೆಲವುರ, ಇಷ್ಟು ದೊಡ್ಡ ಮೊತ್ತದ ಸ್ಯಾಲರಿಯನ್ನು ತೆಗೆದುಕೊಳ್ಳುವ ಹೊರತಾಗಿಯೂ ಆತ ತನ್ನ ಆಹಾರವನ್ನು ನಿಭಾಯಿಸುತ್ತಿಲ್ಲ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಮೃಗಾಲಯದ ಸಿಂಹದ ಜತೆ ಸೆಲ್ಫಿ ತೆಗೆಯಲು ಹೋಗಿ ಸ್ಮಶಾನ ಪಾಲಾದ!

Exit mobile version