ಜೈಪುರ: ಗಂಡ-ಹೆಂಡತಿ ಪರಸ್ಪರ ವಿಚ್ಛೇದನ ಪಡೆದ ಬಳಿಕವೂ ಮಾಜಿ ಗಂಡನ ಮೇಲೆ ಹೆಂಡತಿ, ಮಾಜಿ ಪತ್ನಿ ಮೇಲೆ ಗಂಡನು ಅಪಪ್ರಚಾರ ಸೇರಿ ಹಲವು ರೀತಿಯಲ್ಲಿ ಹೆಸರು ಕೆಡಿಸಲು ಯತ್ನಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು, ಕೆಲವು ಗಂಡಸರು ಜೀವನಾಂಶ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುವ ಮೂಲಕ ಮಾಜಿ ಪತ್ನಿಯನ್ನು ಸತಾಯಿಸುತ್ತಾರೆ. ಆದರೆ, ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಗೆ 55 ಸಾವಿರ ರೂಪಾಯಿಯನ್ನು ಒಂದು ರೂಪಾಯಿ ಹಾಗೂ ಎರಡು ರೂಪಾಯಿ ಕಾಯಿನ್‌ಗಳಲ್ಲಿ ನೀಡುವ ಮೂಲಕ ಹೀಗೂ ಸತಾಯಿಸಬಹುದು ಎಂಬುದನ್ನು (Viral News) ತೋರಿಸಿಕೊಟ್ಟಿದ್ದಾನೆ.
ಹೌದು, ಜೈಪುರ ನಿವಾಸಿಯಾದ ದಶರಥ ಕುಮವತ್ ಎಂಬ ವ್ಯಕ್ತಿಯು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಇವರು ಪತ್ನಿಗೆ ಮಾಸಿಕ 5 ಸಾವಿರ ರೂಪಾಯಿ ಜೀವನಾಂಶ ನೀಡಬೇಕು. ಅದರಂತೆ, 11 ತಿಂಗಳ ಪರಿಹಾರ ಮೊತ್ತವಾದ 5 ಸಾವಿರ ರೂಪಾಯಿಯನ್ನು ದಶರಥ ಕುಮವತ್ ಅವರು ಒಂದು ಹಾಗೂ ಎರಡು ರೂ. ಕಾಯಿನ್‌ಗಳಲ್ಲಿ ನೀಡಿದ್ದಾರೆ. ಇದರಿಂದ ಬೇಸತ್ತ ಮಹಿಳೆಯು ಜೈಪುರ ಕೋರ್ಟ್ ಮೊರೆ ಹೋಗಿದ್ದಾರೆ. ಈಗ ನ್ಯಾಯಾಲಯವೂ, ದಶರಥ ಕುಮವತ್ ಅವರ ಪರವಾಗಿ ತೀರ್ಪು ನೀಡಿದೆ.
“55 ಸಾವಿರ ರೂಪಾಯಿಯನ್ನು ಒಂದು ಹಾಗೂ ಎರಡು ರೂ. ಕಾಯಿನ್‌ಗಳಲ್ಲಿ ನೀಡಿದರೆ ನನಗೆ ಎಣಿಸಲು, ಖರ್ಚು ಮಾಡಲು ತೊಂದರೆಯಾಗುತ್ತದೆ. ಇದರಿಂದ ಮಾನಸಿಕ ಹಿಂಸೆಯಾಗುತ್ತದೆ” ಎಂದು ಮಹಿಳೆಯು ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಲಯವು ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿ, ಒಂದು ಹಾಗೂ ಎರಡು ರೂ. ಕಾಯಿನ್‌ಗಳಲ್ಲಿ 55 ಸಾವಿರ ರೂ. ಜೀವನಾಶ ನೀಡಲು ದಶರಥ ಅವರಿಗೆ ಕೋರ್ಟ್ ಆದೇಶಿಸಿತು.
ಇದನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!
ಕೆಲ ನಿಯಮ ರೂಪಿಸಿದ ಕೋರ್ಟ್
ದಶರಥ ಕುಮವತ್ ಅವರು ರಾಶಿಗಟ್ಟಲೆ ಹಣವನ್ನು ತಂದು ನೀಡುವಂತಿಲ್ಲ ಎಂದು ಕೂಡ ಕೋರ್ಟ್ ಆದೇಶಿಸಿದೆ. ದಶರಥ ಕುಮವತ್ ಅವರೇ ಕಾಯಿನ್‌ಗಳನ್ನು ಎಣಿಸಿ, ಒಂದು ಸಾವಿರ ರೂಪಾಯಿ ಮೌಲ್ಯದ ಕಾಯಿನ್‌ಗಳನ್ನು ಪ್ರತ್ಯೇಕವಾಗಿ ಪ್ಯಾಕೇಟ್‌ಗಳಲ್ಲಿ ವಿಂಗಡಿಸಿ, ಕೋರ್ಟ್‌ನಲ್ಲೇ ಮಹಿಳೆಗೆ ನೀಡಬೇಕು. ಜೂನ್ 26ರಂದು ಕೋರ್ಟ್ ಮುಂದಿನ ವಿಚಾರಣೆ ನಡೆಸುವ ವೇಳೆ ಹಣ ಸಿದ್ಧವಿರಬೇಕು ಎಂದು ಸೂಚಿಸಿದೆ. ಕಾಯಿನ್‌ಗಳಲ್ಲಿ ಜೀವನಾಂಶ ನೀಡುವುದು ಮಾತ್ರವಲ್ಲ, ಕಳೆದ 11 ತಿಂಗಳಿಂದ ಮಾಜಿ ಪತ್ನಿಗೆ ಜೀವನಾಂಶ ನೀಡದೆ ದಶರಥ ಕುಮವತ್ ಅವರು ಸತಾಯಿಸಿದ್ದರು. ಇದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.