Site icon Vistara News

Viral News : ಕಚ್ಚಾ ಬಾದಾಮ್‌ ಗಾಯಕನಿಗೆ ಮೋಸ; ಕಾಪಿರೈಟ್ಸ್‌ ವಿಚಾರದಲ್ಲಿ ದೂರು ದಾಖಲಿಸಿದ ಭುಬನ್‌

#image_title

ಕೋಲ್ಕೊತಾ: ಕಚ್ಚಾ ಬಾದಾಮ್‌ ಹಾಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಈ ಒಂದೇ ಒಂದು ಹಾಡಿನ ಮೂಲಕ ಪಶ್ಚಿಮ ಬಂಗಾಳದ ಭುಬನ್‌ ಬಡ್ಯಕರ್‌ ರಾತ್ರೋರಾತ್ರಿ ಪ್ರಸಿದ್ಧರಾದರು. ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ಟ್ರೆಂಡ್‌ ಆಗಿತ್ತು ಈ ಹಾಡು. ಆದರೆ ಇದೀಗ ಅದೇ ಭುಬನ್‌ ಅವರಿಗೆ ಮೋಸ ಮಾಡಲಾಗಿದೆ. ಅವರದೇ ಹಾಡಿನ ಕಾಪಿರೈಟ್ಸ್‌ ಅನ್ನು ಇನ್ಯಾರೋ ಕದ್ದಿರುವುದಾಗಿ (Viral News) ಹೇಳಲಾಗಿದೆ.

ಇದನ್ನೂ ಓದಿ: Siddaramaiah: 500 ರೂಪಾಯಿ ಕೊಟ್ಟು ಸಮಾವೇಶಕ್ಕೆ ಕರೆಸಿ; ಹೆಬ್ಬಾಳ್ಕರ್‌ಗೆ ಸಿದ್ದರಾಮಯ್ಯ ಹೇಳಿದ ವಿಡಿಯೊ ವೈರಲ್‌
ಹೌದು. ಇದೇ ವಿಚಾರದಲ್ಲಿ ಭುಬನ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಅವರ ಇನ್ನೊಂದು ಹಾಡಿಗೆ ಮತ್ತಿನ್ಯಾರೋ ಕಾಪಿರೈಟ್ಸ್‌ ಮಾಡಿಸಿಕೊಂಡಿದ್ದಾರಂತೆ. ಆ ಹಾಡನ್ನು ಭುಬನ್‌ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವುದಕ್ಕೂ ಮೊದಲು ಗೋಪಾಲ್‌ ಹೆಸರಿನ ವ್ಯಕ್ತಿಯೊಬ್ಬರು ಭುಬನ್‌ ಬಳಿ ಬಂದಿದ್ದು, 3 ಲಕ್ಷ ರೂ. ಕೊಟ್ಟು ಪೇಪರ್‌ ಒಂದರ ಮೇಲೆ ಸಹಿ ಹಾಕಿಸಿಕೊಂಡು ಹೋಗಿದ್ದರಂತೆ. ಓದು ಬರಹ ಬಾರ್‌ ಭುಬನ್‌ ಅದರಲ್ಲಿ ಏನಿದೆ ಎನ್ನುವುದನ್ನು ನೋಡದೆ ಸಹಿ ಹಾಕಿಕೊಟ್ಟಿದ್ದಾರಂತೆ.


ಆದರೆ ಇದೀಗ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಿದಾಗ ಕಾಪಿರೈಟ್ಸ್‌ ಉಲ್ಲಂಘನೆಯಾಗಿರುವುದಾಗಿ ಬಂದಿದೆ. ತಮ್ಮದೇ ಹಾಡಿಗೆ ಈ ರೀತಿ ಬಂದಿರುವುದರಿಂದಾಗಿ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕಿದೆ.

Exit mobile version