Site icon Vistara News

Viral News: ಕೇರಳಕ್ಕೀಗ ಮೊದಲನೇ ತೃತೀಯ ಲಿಂಗಿ ನ್ಯಾಯವಾದಿ; ಮಾಹಿತಿ ಹಂಚಿಕೊಂಡ ಸಚಿವರು

#image_title

ತಿರುವನಂತಪುರಂ: ದೇವರ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ಇದೀಗ ತನ್ನ ಮೊದಲನೇ ತೃತೀಯ ಲಿಂಗಿ ನ್ಯಾಯವಾದಿಯನ್ನು ಕಂಡಿದೆ. ತೃತೀಯ ಲಿಂಗಿಯಾಗಿರುವ ಪದ್ಮ ಲಕ್ಷ್ಮೀ ಅವರು ಬಾರ್‌ ಕೌನ್ಸಿಲ್‌ನಲ್ಲಿ ನ್ಯಾಯವಾದಿಯಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಹೆಮ್ಮೆ (Viral News) ಪಡುವಂತಾಗಿದೆ.

ಇದನ್ನೂ ಓದಿ: Trans Couple Pregnancy: ಮಗುವಿನ ನಿರೀಕ್ಷೆಯಲ್ಲಿ ಕೇರಳದ ತೃತೀಯ ಲಿಂಗಿ ಜೋಡಿ, ಇದು ದೇಶದಲ್ಲೇ ಮೊದಲು

ಪದ್ಮ ಲಕ್ಷ್ಮೀ ಅವರು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಅವರು ಸೇರಿದಂತೆ ಒಟ್ಟು 1,500ಕ್ಕೂ ಅಧಿಕ ವಕೀಲರಿಗೆ ಭಾನುವಾರದಂದು ಬಾರ್‌ ಕೌನ್ಸಿಲ್‌ ಪ್ರಮಾಣ ಪತ್ರ ಕೊಟ್ಟಿದೆ. ಪದ್ಮಾ ಅವರ ಸಾಧನೆ ವಿಚಾರದಲ್ಲಿ ರಾಜ್ಯದ ಕಾರ್ಖಾನೆ ಸಚಿವಾಗಿರುವ ಪಿ. ರಾಜೀವ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ಜೀವನದಲ್ಲಿ ಎದುರಾದ ಎಲ್ಲ ಅಡೆತಡೆಗಳನ್ನೂ ಗೆದ್ದು ರಾಜ್ಯದ ಮೊದಲನೇ ತೃತೀಯ ಲಿಂಗಿ ವಕೀಲರಾದ ಪದ್ಮ ಲಕ್ಷ್ಮೀ ಅವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಯಾವಾಗಲೂ ಇತಿಹಾಸದಲ್ಲಿ ಕಠಿಣ ಸಾಧನೆಯಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳು ಇದ್ದೇ ಇರುತ್ತವೆ. ನಿರುತ್ಸಾಹಗೊಳಿಸುವ ಜನರೂ ಇರುತ್ತಾರೆ. ಆದರೆ ಅದೆಲ್ಲವನ್ನೂ ಮೀರಿ ಪದ್ಮ ಇಂದು ಇತಿಹಾಸದಲ್ಲಿ ತನ್ನ ಹೆಸರು ಬರೆದಿದ್ದಾರೆ. ಅವರ ಈ ಸಾಧನೆ ಇನ್ನಷ್ಟು ತೃತೀಯ ಲಿಂಗಿಗಳಿಗೆ ಸಾಧನೆ ಮಾಡುವುದಕ್ಕೆ ಸ್ಫೂರ್ತಿಯಾಗಲಿದೆ” ಎಂದು ಸಚಿವರು ಬರೆದುಕೊಂಡಿದ್ದಾರೆ.


ರಾಜೀವ್‌ ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ಈ ಬಗ್ಗೆ ಅನೇಕರು ಹಲವಾರು ರೀತಿಯಲ್ಲಿ ಚರ್ಚಿಸಲಾರಂಭಿಸಿದ್ದಾರೆ. ಸಾಧನೆ ಮಾಡಿದ ಪದ್ಮಾ ಅವರ ಬಗ್ಗೆ ಭಾರೀ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಲಾರಂಭಿಸಿದೆ.

ಇದನ್ನೂ ಓದಿ: Transgender Teacher | ತೃತೀಯ ಲಿಂಗಿ ಮೀಸಲಾತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಪೂಜಾ ಆಯ್ಕೆ
ಈ ಹಿಂದೆ ಭಾರತದ ಮೊದಲ ತೃತೀಯ ಲಿಂಗ ನ್ಯಾಯಾಧೀಶರಾಗಿ ಜೋಯಿತಾ ಮೊಂಡಲ್‌ ಅವರು ನೇಮಕಗೊಂಡಿದ್ದರು. ಅವರು 2017 ರಲ್ಲಿ ಪಶ್ಚಿಮ ಬಂಗಾಳದ ಇಸ್ಲಾಂಪುರದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. 2018 ರ ಆರಂಭದಲ್ಲಿ, ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ತೃತೀಯ ಲಿಂಗಿ ಕಾರ್ಯಕರ್ತೆ ವಿದ್ಯಾ ಕಾಂಬ್ಳೆ ಅವರನ್ನು ಸದಸ್ಯ ನ್ಯಾಯಾಧೀಶರಾಗಿ ನೇಮಿಸಲಾಯಿತು.

Exit mobile version