Site icon Vistara News

Viral News : ರಸ್ತೆ ಮೇಲೆ ಜಗಳವಾಡಿದ್ದ ವ್ಯಕ್ತಿಗೆ ಗಿಡ ನೆಟ್ಟು ನಮಾಜ್‌ ಮಾಡಲು ಆದೇಶಿಸಿದ ನ್ಯಾಯಾಲಯ!

#image_title

ಮುಂಬೈ: ಅಪರಾಧ ಮಾಡಿದವರಿಗೆ ಶಿಕ್ಷೆ ನೀಡಲಾಗುತ್ತದೆ. ಆದರೆ ಜಗಳ, ನಿಂದನೆಯಂತಹ ಸಣ್ಣ ಪುಟ್ಟ ಅಪರಾಧ ಮಾಡುವವರಿಗೆ ನ್ಯಾಯಾಲಯ ಕರುಣೆ ತೋರಿ, ಜೈಲಿಗೆ ಹಾಕದೆಯೇ ವಿಶೇಷ ರೀತಿಯಲ್ಲಿ ಶಿಕ್ಷೆ ನೀಡುವುದುಂಟು. ಅದೇ ರೀತಿ ಇತ್ತೀಚೆಗೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಪ್ರತಿದಿನ ಗಿಡನೆಟ್ಟು, ಐದು ಬಾರಿ ನಮಾಜ್‌ ಮಾಡುವಂತೆ ನ್ಯಾಯಾಲಯ (Viral News) ಆದೇಶಿಸಿದೆ.

ಇದನ್ನೂ ಓದಿ: Agnipath scheme : ಅಗ್ನಿಪಥ್‌ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್, ನ್ಯಾಯಾಲಯ ಹೇಳಿದ್ದೇನು?
ಮಾಲೆಗಾಂವ್‌ ನಿವಾಸಿ ರೌಫ್‌ ಉಮರ್‌ ಖಾನ್‌ 2010ರ ಏಪ್ರಿಲ್‌ ತಿಂಗಳಲ್ಲಿ ತಮ್ಮ ಆಟೋವನ್ನು ನಿಂತಿದ್ದ ಬೈಕ್‌ ಒಂದಕ್ಕೆ ಗುದ್ದಿದ್ದರು. ನಂತರ ಬೈಕ್‌ ಮಾಲೀಕನ ಜತೆ ಜಗಳವಾಡಿ, ಆತನನ್ನು ಕಟುವಾಗಿ ನಿಂದಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್‌ 506 ಸೇರಿ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಉಮರ್‌ ಖಾನ್‌ಗೆ ಮಾಲೆಗಾಂವ್‌ನ ನ್ಯಾಯಾಲಯ ಶಿಕ್ಷೆಯನ್ನೂ ವಿಧಿಸಿತ್ತು. ಆದರೆ ಅಪರಾಧಿಗಳ ಪ್ರಬೋಷನ್‌ ಕಾಯ್ದೆಯನ್ನು ಪರಿಗಣಿಸಿ, ಉಮರ್‌ಗೆ ನೀಡಿದ್ದ ಶಿಕ್ಷೆಯನ್ನು ವಾಪಸು ಪಡೆಯಲಾಗಿದೆ. ಹಾಗೆಯೇ ಪ್ರತಿದಿನ ಗಿಡ ನೆಡುವಂತೆ ಮತ್ತು ದಿನಕ್ಕೆ ಐದು ಬಾರಿ ನಮಾಜ್‌ ಮಾಡುವಂತೆ ಆದೇಶಿಸಲಾಗಿದೆ. ಈ ಕಾಯ್ದೆಯಲ್ಲಿ ಅಪರಾಧಿಯ ಉತ್ತಮ ನಡತೆಯನ್ನು ಪರಿಗಣಿಸಿ ಸೂಕ್ತ ಎಚ್ಚರಿಕೆ ನೀಡಿ ಆತನನ್ನು ಬಿಡುಗಡೆ ಮಾಡಬಹುದಾಗಿದೆ.

Exit mobile version