ನವದೆಹಲಿ: ರಾಜಕಾರಣಿಗಳ ಉಡುಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಅದೇ ರೀತಿ ಇದೀಗ ವಿದೇಶಾಂಗ ಸಚಿವರಾಗಿರುವ ಎಸ್. ಜೈಶಂಕರ್ ಅವರ ಉಡುಗೆ ತೊಡುಗೆ ಚರ್ಚೆಗೆ (Viral News) ಗ್ರಾಸವಾಗಿದೆ.
ಎಸ್. ಜೈಂಕರ್ ಅವರು ಮೂರು ದಿನಗಳ ಸ್ವಿಡನ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಅಲ್ಲಿನ ರಕ್ಷಣಾ ಸಚಿವರಾದ ಪಾಲ್ ಜಾನ್ಸನ್ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗಿನ ಫೋಟೋವನ್ನೂ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಇಬ್ಬರೂ ಸಚಿವರು ಫಾರ್ಮಲ್ ಉಡುಗೆಯಲ್ಲಿರುವುದನ್ನು ಕಾಣಬಹುದಾಗಿದೆ. ಆ ಫೋಟೋವನ್ನು ಹಂಚಿಕೊಂಡಿರುವ ಜೈಶಂಕರ್, “ಸ್ವಿಡನ್‌ನ ರಕ್ಷಣಾ ಸಚಿವರಾದ ಪಾಲ್ ಜಾನ್ಸನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಪ್ರಾದೇಶಿಕ ಮತ್ತು ಜಾಗತಿಕ ಸುರಕ್ಷತೆಯ ಬಗ್ಗೆ ಹಲವಾರು ಚರ್ಚೆ ಮಾಡಿದೆವು” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ಉದ್ಯಮದ ಪ್ರಚಾರಕನಂತೆ ಬಂದಿದ್ದರು; ಪಾಕ್ ಸಚಿವ ಹೊರಟ ಬೆನ್ನಲ್ಲೇ ಸಚಿವ ಎಸ್.ಜೈಶಂಕರ್ ವ್ಯಂಗ್ಯ
ಈ ಫೋಟೋದಲ್ಲಿ ಅನೇಕರ ಕಣ್ಣಿಗೆ ವಿಶೇಷವಾಗಿ ಕಂಡಿರುವುದು ಜೈಶಂಕರ್ ಅವರು ತೊಟ್ಟಿರುವ ಸನ್‌ಗ್ಲಾಸ್. ಹೊಳೆಯುವ ಸನ್‌ಗ್ಲಾಸ್ ಹಾಕಿಕೊಂಡ ಶಂಕರ್ ಅವರು ಯಾವ ಹೀರೋಗಿಂತ ಕಡಿಮೆ ಕಾಣುತ್ತಿಲ್ಲ ಎನ್ನುವುದು ಅನೇಕರ ಮಾತಾಗಿದೆ. “ನಮ್ಮ ರಾಕಿಂಗ್ ವಿದೇಶಾಂಗ ಸಚಿವರು”, “ಟಾಮ್ ಕ್ರೂಸ್ ಮತ್ತು ಬ್ರಾಡ್ ಪಿಟ್‌ಗೆ ಕಾಂಪಿಟೇಷನ್ ಇವರು” ಎನ್ನುವಂತಹ ಹಲವಾರು ಕಮೆಂಟ್‌ಗಳು ಸಚಿವರ ಪೋಸ್ಟ್‌ಗೆ ಹರಿದುಬಂದಿವೆ. ಹಾಗೆಯೇ “ಕಿಲ್ಲರ್‌ಲುಕ್”, “ಮೆನ್ ಇನ್ ಬ್ಲ್ಯಾ ಕ್ ” ಎನ್ನುವಂತಹ ಕಮೆಂಟ್‌ಗಳೂ ಬಂದಿವೆ.