ನವದೆಹಲಿ: ಇರುವ ಕಂಪನಿಯಲ್ಲಿ ಸಂಬಳ ಸಾಕಾಗದೆ, ಬಾಸ್‌ನ ಗೋಳು ತಡೆಯಲು ಆಗದೆ ಕಷ್ಟಪಟ್ಟು ಬೇರೊಂದು ಕಂಪನಿಯಲ್ಲಿ ಕೆಲಸ ಹುಡುಕುತ್ತಾರೆ. ಆದರೆ, ಕೆಲವೊಂದು ಸಲ ಬೇರೊಂದು ಕಂಪನಿಯಲ್ಲಿ ಕೆಲಸ ಹುಡುಕುವುದು ಎಷ್ಟು ಕಷ್ಟವೋ, ಇರುವ ಕಂಪನಿಯಲ್ಲಿ ರಾಜೀನಾಮೆ ಪತ್ರ ಬರೆಯುವುದು ಕೂಡ ಅಷ್ಟೇ ಕಷ್ಟ ಎನಿಸುತ್ತದೆ. ರಾಜೀನಾಮೆ ಪತ್ರದಲ್ಲಿ ಏನು ಬರೆಯಬೇಕು ಎಂಬ ಗೊಂದಲ ಮೂಡುತ್ತದೆ. ಆದರೆ, ಈ ಗೊಂದಲವನ್ನು ದಿನಸಿ, ಚಾಕೊಲೇಟ್, ಚಿಪ್ಸ್ ಸೇರಿ ಹಲವು ವಸ್ತುಗಳನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡುವ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Viral News) ಕಂಪನಿಯು ನಿವಾರಿಸಿದೆ.
ಹೌದು, ಲಿಟಲ್ ಹಾರ್ಟ್ಸ್, ಪರ್ಕ್, ಗುಡ್ ಡೇ, 5 ಸ್ಟಾರ್, ಜೆಮ್ಸ್ ಸೇರಿ ಹಲವು ತಿನಿಸುಗಳನ್ನು ಇಟ್ಟುಕೊಂಡೇ ಒಂದು ರಾಜೀನಾಮೆ ಪತ್ರ ಬರೆಯುವುದನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತೋರಿಸಿದೆ. ಇವಿಷ್ಟೂ ತಿಂಡಿಗಳನ್ನು ಇಟ್ಟುಕೊಂಡು ಬರೆದಿರುವ ಸೃಜನಾತ್ಮಕ ರಾಜೀನಾಮೆ ಪತ್ರವನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಟ್ವೀಟ್ (ಈಗ X) ಮಾಡಿದೆ. ಇನ್‌ಸ್ಟಾಮಾರ್ಟ್ ಬಳಸಿಕೊಂಡು ರಾಜೀನಾಮೆ ನೀಡುವುದು ಹೇಗೆ ಎಂಬ ಒಕ್ಕಣೆಯನ್ನೂ ಬರೆದಿದೆ.
ನೀವೊಂದು ಸಲ ಓದಿ
how to quit your job using Instamart 🚶♀️ pic.twitter.com/CyhSDyvWaq
— Swiggy Instamart (@SwiggyInstamart) July 24, 2023
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡುತ್ತಲೇ ಅದು ವೈರಲ್ ಆಗಿದೆ. ರಾಜೀನಾಮೆ ಪತ್ರವನ್ನು 90 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಹತ್ತಾರು ಜನ ಪ್ರತಿಕ್ರಿಯಿಸಿದ್ದಾರೆ. “ರಾಜೀನಾಮೆ ಪತ್ರವನ್ನು ಇಷ್ಟು ಕ್ರಿಯೇಟಿವ್ ಆಗಿ ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೀರಿ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಈ ಪತ್ರವನ್ನು ಓದಿಯೇ ರಾಜೀನಾಮೆ ನೀಡಬೇಕು ಎಂದು ಎನಿಸುತ್ತದೆ” ಎಂಬುದಾಗಿ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ʼಬೈ ಬೈ ಸರ್ʼ-ಮೂರೇ ಶಬ್ದದ ರಾಜೀನಾಮೆ ಪತ್ರ ನಮಗೆಲ್ಲ ಮಾದರಿಯೆಂದ ನೆಟ್ಟಿಗರು
ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಕೇವಲ ಮೂರು ಅಕ್ಷರಗಳಲ್ಲಿ ರಾಜೀನಾಮೆ ಪತ್ರ ಬರೆದಿದ್ದರು. ಮೊದಲಿಗೆ ʼಡಿಯರ್ ಸರ್ʼ ಎಂದು ಬರೆದಿದ್ದರು. ಅದರ ಕೆಳಗೆ ದೊಡ್ಡದಾಗಿ RESIGNATION LETTER ಎಂದು ಕ್ಯಾಪಿಟಲ್ ಅಕ್ಷರಗಳಲ್ಲಿ ನಮೂದಿಸಿ, ನಂತರ ʼಬೈ ಬೈ ಸರ್ʼ ಎಂದು ಬರೆದು ಕೊನೆಯಲ್ಲಿ ತನ್ನ ಸಹಿ ಹಾಕಿದ್ದರು. ಅತ್ಯಂತ ಚಿಕ್ಕದಾದ ರಾಜೀನಾಮೆ ಪತ್ರವನ್ನು ನೋಡಿದ ಅನೇಕರು ಇದು ನಿಜಕ್ಕೂ ಮಾದರಿ ರೆಸಿಗ್ನೇಶನ್ ಲೆಟರ್ ಎಂದು ಹೇಳಿದ್ದರು. ಈ ರಾಜೀನಾಮೆ ಪತ್ರವೂ ತುಂಬ ವೈರಲ್ ಆಗಿತ್ತು.