Site icon Vistara News

Viral Video : ರೈಲ್ವೆ ಹಳಿಯ ಮೇಲೆ ಮಲಗಿದ್ದವನನ್ನು ಎಬ್ಬಿಸಿ ರೈಲು ಮುಂದಕ್ಕೆ ತೆಗೆದುಕೊಂಡ ಹೋದ ಲೋಕೋ ಪೈಲೆಟ್‌

Viral Video

ಪ್ರಯಾಗ್‌ರಾಜ್‌: ಭಾರತದಲ್ಲಿ ಚಿತ್ರವಿಚಿತ್ರ ಜನರಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಗೋಳು. ಅಂತೆಯೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬ್ಯುಸಿಯಾಗಿರುವ ರೈಲ್ವೆ ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನ ವಿಡಿಯೊ ವೈರಲ್ ಆಗಿದೆ. ಯಾಕೆಂದರೆ ರೈಲ್ವೆ ಚಾಲಕನೇ ರೈಲು ನಿಲ್ಲಿಸಿ ಆತನನ್ನು ಎಬ್ಬಿಸಿ ರೈಲನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವ್ಯಕ್ತಿಯು ಛತ್ರಿಯನ್ನು ಹಿಡಿದುಕೊಂಡು ಟ್ರ್ಯಾಕ್‌ನಲ್ಲಿ ಆರಾಮವಾಗಿ ನಿದ್ರೆಗೆ ಜಾರಿದ್ದ (Viral Video). ರೈಲು ಶೀಘ್ರದಲ್ಲೇ ಈ ವ್ಯಕ್ತಿ ವಿಶ್ರಾಂತಿ ಪಡೆಯುತ್ತಿದ್ದ ಟ್ರ್ಯಾಕ್ ಸಮೀಪಿಸಿದರೂ ಆತನಿಗೆ ಗೊತ್ತೇ ಆಗಿರಲಿಲ್ಲ. ಮತ್ತು ವೇಗವಾಗಿ ಚಲಿಸುವ ರೈಲಿನ ಅಡಿಗೆ ಸಿಲುಕದೇ ಆ ವ್ಯಕ್ತಿ ಬಚಾವಾಗಿರುವುದೇ ದೊಡ್ಡ ಪವಾಡ ಎಂಬುದರಲ್ಲಿ ಎರಡು ಮಾತಿಲ್ಲ.

ಲೋಕೋ ಪೈಲಟ್‌‌ ಜಾಗರೂಕತೆಯಿಂದಾಗಿ ವ್ಯಕ್ತಿಯನ್ನು ರಕ್ಷಿಸಿ ರೈಲು ಹಳಿಗಳಿಂದ ಹೊರಗೆ ಕಳುಹಿಸಿದ್ದಾರೆ. ವರದಿಗಳ ಪ್ರಕಾರ ಈ ವ್ಯಕ್ತಿ ರೈಲು ಹಳಿಯ ಮೇಲೆ ಮಲಗಿರುವುದನ್ನು ನೋಡಿದ ಕೂಡಲೇ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ದೊಡ್ಡ ಸೌಂಡ್‌ನ ಹಾರ್ನ್ ಹೊಡೆದರೂ ಆತನಿಗೆ ಎಚ್ಚರವಾಗಿರಲಿಲ್ಲ. ನಂತರ ವ್ಯಕ್ತಿಯನ್ನು ಹಳಿಗಳಿಂದ ಹೊರಕ್ಕೆ ಹೋಗಲು ಹೇಳಿದ ಬಳಿಕ ರೈಲು ಸಂಚಾರ ಮುಂದುವರಿಯಿತು.

ಉತ್ತರ ರೈಲ್ವೆ ಲಕ್ನೋ ವಿಭಾಗದ ಪ್ರಯಾಗ್ರಾಜ್ ಜಿಲ್ಲೆಯ ಮೌ ಐಮಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಾರ್ನ್ ಮಾಡಿದರೂ ನಿದ್ರೆಯಲ್ಲಿದ್ದ ವ್ಯಕ್ತಿ ಎದ್ದಿಲ್ಲ ಎಂಬುದೇ ಅಚ್ಚರಿ. ಆದಾಗ್ಯೂ ಲೋಕೋ ಪೈಲಟ್ ಎಚ್ಚರಿಕೆಯಿಂದ ಆತನ ಪ್ರಾಣ ಕಾಪಾಡಿದ್ದಾರೆ.

ಇದನ್ನೂ ಓದಿ: Narendra Modi : ಪಾಕಿಸ್ತಾನದ ವಾಯಮಾರ್ಗ ಬಳಸಿ ಪೋಲೆಂಡ್‌ನಿಂದ ಭಾರತಕ್ಕೆ ಮರಳಿದ್ದ ಪ್ರಧಾನಿ ಮೋದಿ

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಲೋಕೋ ಪೈಲಟ್ ತೆಗೆದುಕೊಂಡ ಪ್ರಯತ್ನಗಳನ್ನು ಜನರು ಶ್ಲಾಘಿಸಿದ್ದಾರೆ. “ಅಂತಹ ಲೋಕೋ ಪೈಲಟ್‌ಗೆ ನನ್ನ ನಮನಗಳು. ರೈಲನ್ನು ನಿಲ್ಲಿಸಿ, ನಂತರ ಆ ವ್ಯಕ್ತಿಯನ್ನು ಎಬ್ಬಿಸಿ ಎತ್ತಿ ಹಳಿಯಿಂದ ಹೊರಕ್ಕೆ ಕಳುಹಿಸಿದ್ದು ಉತ್ತಮ ಕೆಲಸ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ರೈಲ್ವೆ ಹಳಿಗಳ ಮೇಲೆ ಮಲಗಿದ್ದ ವ್ಯಕ್ತಿಯ ಅಜಾಗರೂಕ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಕೆಲವರು ಆತ ಅನಾಥ ಎಂದು ಹೇಳಿದ್ದಾರೆ. ಯಾವ ಪರಿಸ್ಥಿತಿಯು ಅವರನ್ನು ಹಳಿಗಳ ಮೇಲೆ ವಿಶ್ರಾಂತಿ ಪಡೆಯಲು ಪ್ರೇರೇಪಿಸಿತು ಎಂದು ಕೆಲವರು ಪ್ರಶ್ನಿಸಿದ್ದಾರೆ.

Exit mobile version