Site icon Vistara News

Viral Video: ಎಂಪೈರ್‌ ಹೋಟೆಲ್‌ನಲ್ಲಿ 1 ರೂಪಾಯಿಗೆ ಬಿರಿಯಾನಿ ಆಫರ್‌, ಜನರಿಂದ ನೂಕುನುಗ್ಗಲು, ಗಲಾಟೆ

Viral Video: 1 Rupee Chicken Biryani

Viral Video: 1 Rupee Chicken Biryani Sparks Chaos In Telangana

ಹೈದರಾಬಾದ್:‌ ದೇಶದಲ್ಲಿ ಉಚಿತವಾಗಿ ಸಿಕ್ಕರೆ ನನಗೂ ಇರಲಿ, ನಮ್ಮ ಅಪ್ಪನಿಗೂ ಇರಲಿ ಎಂಬ ಜನರಿದ್ದಾರೆ. ಹಾಗಾಗಿಯೇ, ರಾಜಕೀಯ ಪಕ್ಷಗಳು ಜನರಿಗೆ ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಿಸುತ್ತವೆ. ಇದೇ ರೀತಿ, ತೆಲಂಗಾಣದ ಹೋಟೆಲ್‌ ಮಾಲೀಕರೊಬ್ಬರು ಒಂದು ರೂಪಾಯಿಗೆ ಒಂದು ಪ್ಲೇಟ್‌ ಬಿರಿಯಾನಿ ಕೊಡುವುದಾಗಿ ಆಫರ್‌ ನೀಡಿದ್ದು ಅವರಿಗೇ ಈಗ (Viral Video) ಮುಳುವಾಗಿದೆ.

ಹೌದು, ತೆಲಂಗಾಣದ ಕರೀಮ್‌ನಗರದಲ್ಲಿ ಹೊಸದಾಗಿ ಹೋಟೆಲ್‌ ಶುರು ಮಾಡಿದ ಮಾಲೀಕರೊಬ್ಬರು ಜನರನ್ನು ಸೆಳೆಯಲು ತಂತ್ರ ರೂಪಿಸಿದ್ದಾರೆ. ಶುಕ್ರವಾರ ಎಂಪೈರ್ ಹೋಟೆಲ್‌ ಆರಂಭವಾಗಿದ್ದು, ಹೋಟೆಲ್‌ಗೆ ಆಗಮಿಸುವ ಮೊದಲು 100 ಮಂದಿಗೆ 1 ರೂಪಾಯಿಗೆ 1 ಪ್ಲೇಟ್‌ ಬಿರಿಯಾನಿ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಜನ ಬೆಳಗ್ಗೆಯಿಂದಲೇ ಹೋಟೆಲ್‌ಗೆ ನೂರಾರು ಜನ ಮುಗಿಬಿದ್ದಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಇಲ್ಲಿದೆ ನೋಡಿ ವೈರಲ್‌

ಮೊದಲ ನೂರು ಜನರಿಗೆ ಮಾತ್ರ ಒಂದು ರೂಪಾಯಿಗೆ ಬಿರಿಯಾನಿ ನೀಡುವುದಾಗಿ ಹೋಟೆಲ್‌ ಮಾಲೀಕರು ಘೋಷಿಸಿದ ಕಾರಣ ನೂಕುನುಗ್ಗಲು ಮಾಡಿದ್ದಾರೆ. ನಾ ಮುಂದು, ತಾಮುಂದು ಎಂದು ಹೋಟೆಲ್‌ ಕೌಂಟರ್‌ಗೆ ನುಗ್ಗಿದ್ದಾರೆ. ಇದೇ ವೇಳೆ ಗಲಾಟೆಯೂ ಆಗಿದೆ ಎಂದು ತಿಳಿದುಬಂದಿದೆ. ಕೊನೆಗೆ, ಕೈಗೆ ಸಿಕ್ಕಟ್ಟು ಬಿರಿಯಾನಿ ತಿಂದು ಎಲ್ಲರೂ ಸಮಾಧಾನಪಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral News : ಮಹಾರಾಷ್ಟ್ರದ ಶಾಲೆಯಾದರೂ ಕನ್ನಡದಲ್ಲಿಯೇ ವರ್ಗಾವಣೆ ಪತ್ರ ಬರೆದ ಶಿಕ್ಷಕ! ಎಲ್ಲೆಡೆ ವೈರಲ್‌

ದೇಶದಲ್ಲಿ ಈಗಾಗಲೇ ಮಾಲ್‌ಗಳು, ಸ್ವಿಗ್ಗಿ, ಜೊಮ್ಯಾಟೊದಂತಹ ಆನ್‌ಲೈನ್‌ ಪೂರೈಕೆದಾರರು ಜನರಿಗೆ ರಿಯಾಯಿತಿ ಕೊಟ್ಟು ಗ್ರಾಹಕರನ್ನು ಸೆಳೆದಿದ್ದಾರೆ. ರಿಯಾಯಿತಿ ದರದಲ್ಲಿ ಕೆಲವೊಮ್ಮೆ ಮೋಸಗಳೂ ನಡೆಯುತ್ತವೆ. ಆದರೆ, ತೆಲಂಗಾಣ ಹೋಟೆಲ್‌ ಮಾಲೀಕರು ರಿಯಾಯಿತಿ ನೀಡಿ, ಜನರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಸಂಕಷ್ಟ ಅನುಭವಿಸಿದ್ದಾರೆ. ಹೋಟೆಲ್‌ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹೆಣಗಾಡಿದ್ದಾರೆ.

Exit mobile version