Site icon Vistara News

Himachal Pradesh: ಹಿಮಾಚಲ ಮಳೆಗೆ ಕೊಚ್ಚಿ ಹೋಯ್ತು 50 ವರ್ಷದ ಸೇತುವೆ; ಸಾವಿನ ಸಂಖ್ಯೆ 22

Bridge Swept Away In Himachal Pradesh

Viral Video: 50-year-old bridges, highway swept away amid rain fury in Himachal Pradesh

ಶಿಮ್ಲಾ: ಕಳೆದ 40 ವರ್ಷಗಳಲ್ಲೇ ಕಂಡು ಕೇಳರಿಯದ ದಾಖಲೆಯ ಮಳೆಗೆ ಉತ್ತರ ಭಾರತ ತತ್ತರಿಸಿಹೋಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಪಂಜಾಬ್‌, ಹರಿಯಾಣ, ರಾಜಸ್ಥಾನ ಸೇರಿ ಹಲವೆಡೆ ಭಾರಿ ಮಳೆಗೆ ಜನಜೀವನ ತತ್ತರಿಸಿಹೋಗಿದೆ. ಹಿಮಾಚಲ ಪ್ರದೇಶ ರಾಜ್ಯವೊಂದರಲ್ಲಿಯೇ ಭಾರಿ ಮಳೆಗೆ ಇದುವರೆಗೆ 22 ಜನ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಹಿಮಾಚಲ ಪ್ರದೇಶದಲ್ಲಿ (Himachal Pradesh) 50 ವರ್ಷದ ಹಳೆಯ ಸೇತುವೆ ಹಾಗೂ ರಾಜ್ಯ ಹೆದ್ದಾರಿಯು ಕೊಚ್ಚಿಕೊಂಡು ಹೋಗಿದ್ದು, ವಿಡಿಯೊ ವೈರಲ್‌ ಆಗಿದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ 50 ವರ್ಷದ ಸೇತುವೆಯೊಂದು ಕೊಚ್ಚಿಹೋಗಿದೆ. ಬಿಸ್ಲಾಪುರ, ಸೋಲನ್‌, ಶಿಮ್ಲಾ, ಸಿರ್ಮೌರ್‌, ಉನಾ, ಹಮೀರ್‌ಪುರ್‌, ಮಂಡಿ ಹಾಗೂ ಕುಲು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಅವಘಡಗಳು ಸಂಭವಿಸಿಎ. ಹಿಮಾಚಲ ಪ್ರದೇಶದಲ್ಲಿ ಇದುವರೆಗೆ ವರುಣನ ಆರ್ಭಟದಿಂದಾಗಿ 20 ಭೂಕುಸಿತ, 17 ಪ್ರವಾಹ ಹಾಗೂ 30 ಮನೆಗಳು ಕುಸಿದಿವೆ. ಇಂತಹ ಅವಘಡಗಳಿಂದಾಗಿ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ರಾವಿ, ಸತ್ಲುಜ್‌, ಸ್ವಾನ್‌, ಚೆನಾಬ್‌ ಸೇರಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರಮುಖ ದೇವಾಲಯಗಳು ಮುಳುಗಿವೆ. ಇದುವರೆಗೆ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಮಳೆ ನೀರಿಗೆ ಕೊಚ್ಚಿಹೋದ ವಾಹನಗಳಿಗೆ ಲೆಕ್ಕವೇ ಇಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Video Viral: ಭಾರೀ ಮಳೆಗೆ ದಿಲ್ಲಿ ರಸ್ತೆಗಳಾದವು ಕೆರೆಗಳು! ಮಳೆ ವಿಡಿಯೋ‌ಗಳು ಫುಲ್ ವೈರಲ್

ದೆಹಲಿ ರಸ್ತೆಗಳೀಗ ಕೆರೆಗಳು

ದೆಹಲಿಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ದೇಶದ ರಾಜಧಾನಿ ಮಳೆಗೆ ತತ್ತರಿಸಿದ್ದು, ಎಲ್ಲೆಂದರಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ಕೆರೆಗಳಂತಾಗಿವೆ. ಒಂದೆಡೆ ಮಳೆಯ ಹರ್ಷವಾದರೆ ಮತ್ತೊಂದೆಡೆ ಮಳೆಯಿಂದಾಗುತ್ತಿರುವ ತೊಂದರೆಯನ್ನು ಜನರು ಅನುಭವಿಸುತ್ತಿದ್ದಾರೆ.

ಈ ಮಧ್ಯೆ, ಟ್ವಿಟರ್‌ನಲ್ಲಿ ದೆಹಲಿ ಮಳೆಯ ವೈರಲ್ ವಿಡಿಯೊಗಳು ವೈರಲ್‌ ಆಗಿವೆ. ನಾನಾ ತರಹದ ವಿಡಿಯೋಗಳ ದೆಹಲಿ ಮಳೆಯ ವಿವಿಧ ಮುಖಗಳನ್ನು ತೆರೆದಿಟ್ಟಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version