Site icon Vistara News

Viral Video: ಮಹಿಳೆಯ ಕಸದ ಚೀಲ ಒಯ್ಯಲು ನೆರವಾದ ಶ್ವಾನ, ‘ಸಾಕು’ನಾಯಿ ಪ್ರೀತಿಗೆ ‘ಸಾಕು’ ಎಂಬುದೆಲ್ಲಿ?

Dog Helps Woman

Viral Video: A Dog Helps woman carry scrap bag

ನವದೆಹಲಿ: ಸಾಕು ನಾಯಿ ಎಂಬ ಪ್ರೀತಿಗೆ, ಅದು ತೋರುವ ಮಮತೆಗೆ, ಮೊಗೆಮೊಗೆದು ಕೊಡುವ ವಿಶ್ವಾಸಕ್ಕೆ ‘ಸಾಕು’ ಎಂಬುದೇ ಇರುವುದಿಲ್ಲ. ಹಾಗಾಗಿಯೇ, ನಾಯಿಯನ್ನು ಮನೆಯ ಮಗನಂತೆ, ಮಗಳಂತೆ ಸಾಕುವವರ ಸಂಖ್ಯೆ ಹೆಚ್ಚಿದೆ. ನಾಯಿಯ ಜತೆ ತಮಾಷೆ ಮಾಡುವ, ಅದರ ಜತೆ ಪ್ರೀತಿಯಿಂದ ಜಗಳ ಆಡುವವರೂ ಇದ್ದಾರೆ. ಒಟ್ಟಿನಲ್ಲಿ ಶ್ವಾನವನ್ನು ಪ್ರಾಣಿಯಂತೆ ನೋಡದೆ, ಸ್ನೇಹಿನಂತೆ ನೋಡಿಕೊಳ್ಳುತ್ತಾರೆ. ಮನಸ್ಸಿಗೆ ನೋವಾದಾಗ ಅದನ್ನೂ ನಾಯಿ ಜತೆ ಹಂಚಿಕೊಳ್ಳುತ್ತಾರೆ. ಅದು ಕೂಡ ನಮಗೆ ನಿಯತ್ತಾಗಿ ಇರುವ ಮೂಲಕ, ಪ್ರೀತಿ (Pet Lovers) ತೋರುವ ಮೂಲಕ ಸಾಂತ್ವನ ಹೇಳುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಸಾಕುನಾಯಿಯು ಮಹಿಳೆಯೊಬ್ಬರು ಕಸದ ಚೀಲವನ್ನು ತೆಗೆದುಕೊಂಡು ಹೋಗಲು ನೆರವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ವೈರಲ್‌ ಆಗಿದೆ.

ಮಹಿಳೆಯೊಬ್ಬರು ರಸ್ತೆಯಲ್ಲಿ ಎರಡು ಕಸದ ಚೀಲಗಳನ್ನು ಹೊತ್ತುಕೊಂಡು ಹೋಗಲು ಕಷ್ಟಪಡುತ್ತಿರುತ್ತಾರೆ. ಅವರಿಗೆ ವಯಸ್ಸಾದ ಕಾರಣ ಎರಡು ಭಾರದ ಚೀಲಗಳನ್ನು ತೆಗೆದುಕೊಂಡು ಹೋಗಲು ಆಗುವುದಿಲ್ಲ. ಆಗ ಅವರು ಸಾಕಿದ ನಾಯಿಯು ಒಂದು ಚೀಲವನ್ನು ಎಳೆದುಕೊಂಡು ಹೋಗುವ ಮೂಲಕ ತನಗೆ ಅನ್ನ ಹಾಕುವ ಮಾತೆಗೆ ಸಹಾಯ ಮಾಡಿದೆ. ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಪೋಸ್ಟ್‌ ಮಾಡಿದ್ದು, ಇದುವರೆಗೆ ಸುಮಾರು 15 ಲಕ್ಷ ಜನ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ.

ವೈರಲ್‌ ವಿಡಿಯೊ ನೋಡಿ

ಇದನ್ನೂ ಓದಿ: S Jaishankar: ಫ್ಯಾನ್ಸಿ ಶರ್ಟ್‌ ಧರಿಸಿ ಅಮೆರಿಕ ಸಚಿವ ಬ್ಲಿಂಕನ್‌ ಜತೆ ಜೈಶಂಕರ್‌ ಮಿಂಚಿಂಗ್;‌ ಫೋಟೊ ವೈರಲ್

ವೈರಲ್‌ ಆದ ವಿಡಿಯೊಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. “ಶ್ವಾನಗಳ ಪ್ರೀತಿಯೇ ಅಂಥಾದ್ದು, ಅವು ನಮಗೆ ಸಹಾಯವನ್ನೂ ಮಾಡುತ್ತವೆ” ಎಂದು ಶ್ವಾನ ಪ್ರೇಮಿಯೊಬ್ಬರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. “ಶ್ವಾನಗಳು ಮನುಷ್ಯನ ಆತ್ಮೀಯ ಗೆಳೆಯರು ಎಂಬುದಾಗಿ ನಾನು ಯಾವಾಗಲೂ ಯೋಚಿಸುತ್ತೇನೆ. ಯೋಚಿಸಿದಾಗೆಲ್ಲ ಅದು ನಿಜ ಎನಿಸುತ್ತದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. “ವಿಡಿಯೊ ನೋಡಿದ ಬಳಿಕ ನಾನೂ ಒಂದು ಶ್ವಾನವನ್ನು ಸಾಕಬೇಕು ಎಂದುಕೊಂಡಿದ್ದೇನೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ವಿಡಿಯೊ ನೋಡಿದ ಜನ ಭಾವುಕರಾಗಿದ್ದಾರೆ.

Exit mobile version