Site icon Vistara News

Viral Video | ಭೂಲ್ ಭುಲಯ್ಯಾ ಸಿನಿಮಾದ ‘ಮಂಜುಲಿಕಾ’ ಡ್ರೆಸ್‌ನಲ್ಲಿ ಜನರನ್ನು ಹೆದರಿಸಿದ ಯುವತಿ! ನೆಟ್ಟಿಗರು ಏನಂದ್ರು?

Manjulika Viral Video

ನವದೆಹಲಿ: ಬಾಲಿವುಡ್‌ ಸಿನಿಮಾ ಭೂಲ್ ಭುಲಯ್ಯಾ ಸಿನಿಮಾ ನೋಡಿದವರಿಗೆ ಬೆಚ್ಚಿ ಬೀಳಿಸುವ ಮಂಜುಲಿಕಾ ಪಾತ್ರದ ಬಗ್ಗೆ ಗೊತ್ತೇ ಇರುತ್ತದೆ. ಅದೇ ಮಂಜುಲಿಕಾ ನಿಜವಾಗಿಯೂ ರಸ್ತೆಗೆ ಬಂದರೆ, ಜನರ ಗತಿ ಏನಾಗಬೇಡ? ರಾಜಸ್ಥಾನದ ಭರತಪುರದಲ್ಲಿ ಯುವತಿಯೊಬ್ಬಳು ಮಂಜುಲಿಕಾ ಪಾತ್ರದ ರೀತಿಯ ಡ್ರೆಸ್ ಮಾಡಿಕೊಂಡು, ರಸ್ತೆಗಿಳಿದು ಜನರನ್ನು ಹೆದರಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Video).

ಯುವತಿಯೊಬ್ಬಳು ಉದ್ದನೆಯ ಕೂದಲಿನ ವಿಗ್ ಮತ್ತು ದೇಹಕ್ಕೆ ಬಿಳಿ ಹಾಳೆಯನ್ನು ಸುತ್ತಿಕೊಂಡಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ರಾಜಸ್ಥಾನದ ಭರತ್‌ಪುರದ ಹವೇಲಿಯೊಂದರಲ್ಲಿ ಈ ಮಂಜುಲಿಕಾ ಸುತ್ತಾಡುತ್ತಾ ಜನರನ್ನು ಹೆದರಿಸಲು ಯತ್ನಿಸಿದ್ದಾಳೆ. ಹುಡುಗಿ ಎಲ್ಲಿಂದಲೋ ಜಿಗಿಯುತ್ತಿರುವುದನ್ನು ಕಂಡು ಜನರು ಜೋರಾಗಿ ಕಿರುಚುವುದನ್ನು ವಿಡಿಯೋದಲ್ಲಿ ಕೇಳಬಹುದು.

ಪ್ರಿಶಾ ಎಂಬಾಕೆ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮಂಜುಲಿಕಾ ರೀತಿ ಡ್ರೆಸ್ ಮಾಡಿಕೊಂಡು, ಭರತ್‌ಪುರದ ಜನರನ್ನು ಹೆದರಿಸಿದೆ. ಆಗ ಜನರು ಹೇಗೆ ಹೆದರಿದರು ನೋಡಿ… ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್‌ಗೆ ಅನೇಕರು ಪರ ವಿರೋಧ ಕಮೆಂಟ್ ಮಾಡಿದ್ದಾರೆ. ಈವರೆಗೆ ಸಾವಿರಾರು ಜನರು ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ | Bhool Bhulaiyaa- 2 | ನೆಟ್‌ಫ್ಲಿಕ್ಸ್‌ನಲ್ಲಿ ʻಗ್ಲೋಬಲ್‌ ಬ್ಲಾಕ್‌ಬಸ್ಟರ್‌ʼ ಖ್ಯಾತಿ ಪಡೆದ ಭೂಲ್‌ ಭುಲಯ್ಯಾ- 2

Exit mobile version