Site icon Vistara News

Viral Video: ಬಾಯ್‌ಫ್ರೆಂಡ್‌ ಮೇಲಿನ ಕೋಪಕ್ಕೆ 80 ಅಡಿ ವಿದ್ಯುತ್‌ ಟವರ್‌ ಹತ್ತಿದ ಯುವತಿ; ಹುಡುಗನ ಪಾಡು ಯಾರಿಗೂ ಬೇಡ

Girl Climbs Electric Tower

Viral Video: Angry at boyfriend, girl climbs 80 feet high transmission tower

ರಾಯ್‌ಪುರ: ಬಾಯ್‌ಫ್ರೆಂಡ್‌ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡರೂ ಯುವತಿ ಏನು ಮಾಡುತ್ತಾಳೆ? ಹುಡುಗ ನೂರು ಬಾರಿ ಕಾಲ್‌ ಮಾಡಿದರೂ ಸ್ವೀಕರಿಸುವುದಿಲ್ಲ, ಎರಡು ದಿನ ಮಾತು ಬಿಡುತ್ತಾಳೆ, ವಾಟ್ಸ್‌ಆ್ಯಪ್‌ನಲ್ಲಿ ಬ್ಲಾಕ್‌ ಮಾಡುತ್ತಾಳೆ. ಕೊನೆಗೆ ಬಾಯಿಗೆ ಬಂದಹಾಗೆ ಬೈದು, ಸಾರಿ ಕೇಳಿಸಿಕೊಂಡು ಲವ್‌ ಯು ಕಣೋ ಎನ್ನುತ್ತಾಳೆ. ಅಲ್ಲಿಗೆ ಕೋಳಿ ಜಗಳ ಮುಗಿಯುತ್ತದೆ. ಆದರೆ, ಛತ್ತೀಸ್‌ಗಢದಲ್ಲಿ ಯುವತಿಯೊಬ್ಬಳು ಬಾಯ್‌ಫ್ರೆಂಡ್‌ ಮೇಲೆ ಕೋಪಗೊಂಡು 80 ಅಡಿ ಎತ್ತರದ ವಿದ್ಯುತ್‌ ಟ್ರಾನ್ಸ್‌ಮಿಷನ್‌ ಟವರ್‌ ಹತ್ತಿದ್ದಾಳೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಛತ್ತೀಸ್‌ಗಢದ ಗೌರೇಲಾ ಪೆಂಡ್ರಾ ಮಾರ್ವಾಹಿ ಜಿಲ್ಲೆಯಲ್ಲಿ ಯುವತಿಯೊಬ್ಬಳು ಪ್ರಿಯತಮನ ಜತೆ ಜಗಳವಾಡಿದ್ದಾಳೆ. ಕೋಪದಲ್ಲಿ ಆತನು ನಾಲ್ಕು ಮಾತು ಬೈದಿದ್ದಾನೆ. ಇಷ್ಟಕ್ಕೇ ಕುದ್ದುಹೋದ ಆಕೆ, 80 ಅಡಿ ಎತ್ತರದ ಹೈಟೆನ್ಶನ್‌ ಟವರ್‌ ಹತ್ತಿದ್ದಾಳೆ. ಅಲ್ಲಿಂದ ಜಿಗಿದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವಕನಿಗೆ ಧಮಕಿ ಹಾಕಿದ್ದಾಳೆ. ಎಲ್ಲಿ ಇವಳು ಹೇಳಿದ ಹಾಗೆ ಮಾಡುತ್ತಾಳೋ ಎಂದು ಯುವಕನೂ ಹೈಟೆನ್ಶನ್‌ ಟವರ್‌ ಹತ್ತಿದ್ದಾನೆ.

ಯುವತಿ ಟವರ್‌ ಹತ್ತಿದ ವಿಡಿಯೊ

ಬಳಿಕ ಏನಾಯ್ತು?

ಸಾರಿ ಕಣೇ, ಇಳಿಯೇ ಮಾರಾಯ್ತಿ ಎಂದು ಯುವಕನು ಅಂಗಲಾಚಿದ್ದಾನೆ. ಆತನೂ ಟವರ್‌ ಹತ್ತಿ ಅರ್ಧ ಗಂಟೆ ಸಾರಿ ಕೇಳಿದ್ದಾನೆ. ಕೊನೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಮನವೊಲಿಸಿದ್ದಾರೆ. ಬಾಯ್‌ಫ್ರೆಂಡ್‌ ಅಲ್ಲ, ಪೊಲೀಸರು ಮನವಿ ಮಾಡಿದ್ದಕ್ಕೆ ಆಕೆ ಕೊನೆಗೆ ಟವರ್‌ನಿಂದ ಕೆಳಗೆ ಇಳಿದಿದ್ದಾಳೆ. ಪೊಲೀಸರು ಯುವಕ ಹಾಗೂ ಯುವತಿಗೆ ಬುದ್ಧಿ ಹೇಳಿ ಸುಮ್ಮನೆ ಬಿಟ್ಟಿದ್ದಾರೆ.

ಇದನ್ನೂ ಓದಿ: Viral Video: ತಂದೆ-ತಾಯಿಯನ್ನು ವಿಮಾನಕ್ಕೆ ಸ್ವಾಗತಿಸಿದ ಗಗನಸಖಿ; ಯುವತಿ ಕಣ್ಣಲ್ಲಿ ಪನ್ನೀರು

ಉದ್ಯಮಿ ಹರ್ಷ್‌ ಗೋಯಂಕಾ ಅವರು ವಿಡಿಯೊವನ್ನು ಟ್ವೀಟ್‌ ಮಾಡಿದ್ದು, ಜನ ಪ್ರತಿಕ್ರಿಯಿಸಿದ್ದಾರೆ. “ಹುಡುಗನ ಪಾಡು ಯಾರಿಗೂ ಬೇಡ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ವೈರ್‌ಗಳಲ್ಲಿ ಕರೆಂಟ್‌ ಇಲ್ಲದೆ ಇರುವುದಕ್ಕೆ ಛತ್ತೀಸ್‌ಗಢ ಸರ್ಕಾರಕ್ಕೆ ಧನ್ಯವಾದಗಳು” ಎಂದು ವ್ಯಂಗ್ಯವಾಗಿ ಕಮೆಂಟ್‌ ಮಾಡಿದ್ದಾರೆ. ಇನ್ನು ಫೋನ್‌ ಕಾಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಜಗಳವಾಗಿದೆ ಎಂದು ತಿಳಿದುಬಂದಿದೆ.

Exit mobile version