Site icon Vistara News

Viral Video: ಓಡುವ ಬೈಕ್‌ ಮೇಲೆಯೇ ಜೋಡಿ ರೊಮ್ಯಾನ್ಸ್;‌ ಮನೆಯಲ್ಲಿ ಏನು ಮಾಡುತ್ತೀರಿ ಅಂದ್ರು ಆಡಿಯನ್ಸ್

Viral Video: Couple Romance On Bike

Viral Video: Couple Romancing On Bike On Ghaziabad Highway, Internet Outraged

ಲಖನೌ: ಇದು ಸಾಮಾಜಿಕ ಜಾಲತಾಣಗಳ ಯುಗ. ಜನರು ಮಾಡುವ ಹುಚ್ಚಾಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕಾಲ. ಮೆಟ್ರೋದಲ್ಲಿಯೇ ಚಕ್ಕಂದವಾಡಿದ್ದು, ಪ್ರಿಯತಮೆ ಜತೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದು ಸೇರಿ ಎಲ್ಲ ದೃಶ್ಯಗಳು ಸೆರೆಯಾಗಿ, ಅವು ವೈರಲ್‌ ಆಗುತ್ತವೆ. ಹೀಗೆ, ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಯುವ ಜೋಡಿಯೊಂದು ಚಲಿಸುತ್ತಿದ್ದ ಬೈಕ್‌ ಮೇಲೆಯೇ ಸರಸವಾಡುವ ಮೂಲಕ ಹುಚ್ಚಾಟವಾಡಿದೆ. ಈ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ಘಾಜಿಯಾಬಾದ್‌ನಲ್ಲಿ ಜೋಡಿಯೊಂದು ವೇಗವಾಗಿ ಚಲಿಸುತ್ತಿದ್ದ ಬೈಕ್‌ ಮೇಲೆಯೇ ಸರಸವಾಡಿದೆ. ಯುವಕ ಬೈಕ್‌ ಓಡಿಸುತ್ತಿದ್ದರೆ, ಆತನ ತೊಡೆಯ ಮೇಲೆ ಕುಳಿತ ಯುವತಿಯು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಆಕೆ ತಬ್ಬಿಕೊಂಡಿದ್ದಕ್ಕೋ ಏನೋ, ಯುವಕನಿಗೆ ಇನ್ನಷ್ಟು ಉತ್ಸಾಹ ಬಂದು, ಆತ ಬೈಕ್‌ಅನ್ನು ಮತ್ತಷ್ಟು ವೇಗವಾಗಿ ಓಡಿಸಿದ್ದಾನೆ. ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬರು ಈ ಜೋಡಿಯ ಹುಚ್ಚಾಟವನ್ನು ವಿಡಿಯೊ ಮಾಡಿ, ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಘಾಜಿಯಾಬಾದ್‌ನ ಇಂದಿರಾಪುರಂ ಬಳಿಯ ಎನ್‌ಎಚ್‌-9ರಲ್ಲಿ ಯುವ ಜೋಡಿಯು ಇಂತಹ ಉದ್ಧಟತನದ ವರ್ತನೆ ತೋರಿದೆ. ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಹೆಚ್ಚಿನ ವಾಹನ ದಟ್ಟಣೆ ಇರುತ್ತದೆ. ಇಂತಹ ರಸ್ತೆಯ ಮೇಲೆ ಬೈಕ್‌ ಚಲಾಯಿಸುವಾಗ ಇಂತಹ ಹುಚ್ಚಾಟಗಳನ್ನು ಮಾಡಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಹುಚ್ಚು ಸಾಹಸ ಮಾಡಿದ ಜೋಡಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Viral Video: ಹುಲಿಯ ಕಿವಿಗೆ ಮಸಾಜ್‌ ಮಾಡಿದರೆ ಏನಾಗುತ್ತೆ? ವೈರಲ್‌ ವಿಡಿಯೊ ಇಲ್ಲಿದೆ ನೋಡಿ

ವಿಡಿಯೊ ವೈರಲ್‌ ಆಗತ್ತಲೇ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ. “ಎಲ್ಲವನ್ನೂ ಬೈಕ್‌ ಮೇಲೆಯೇ ಮಾಡುವಿರಾದರೆ, ಮನೆಯಲ್ಲಿ ಏನು ಮಾಡುತ್ತೀರಿ” ಎಂದು ಒಬ್ಬರು ಪ್ರಶ್ನಿಸಿದ್ದಾರೆ. “ನಿಯಮಗಳನ್ನು ಗಾಳಿಗೆ ತೂರಿ, ಅವರು ಅನುಭವಿಸಿದ ಖುಷಿ ನೋಡಿ” ಎಂದು ಮತ್ತೊಬ್ಬ ಕಿಡಿಗೇಡಿತನದ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಘಾಜಿಯಾಬಾದ್‌ ಸಂಚಾರ ಪೊಲೀಸರು ಬೈಕ್‌ ಸವಾರನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version