Site icon Vistara News

Viral Video: ವಂದೇ ಭಾರತ್ ರೈಲಿನಡಿ ಸಿಲುಕಿದರೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

Viral Video

ಮುಂಬಯಿ: ರೈಲು ಅಪಘಾತದಿಂದ (rail accident) ಪ್ರಾಣಿಗಳು ಮಾತ್ರವಲ್ಲ ಮನುಷ್ಯರೂ ಸಾವನ್ನಪ್ಪುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಂತೂ ದೇಶದಾದ್ಯಂತ ವೇಗವಾಗಿ ಬರುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Express trains) ಹಸುಗಳು ಢಿಕ್ಕಿ ಹೊಡೆದು ಮೃತಪಡುತ್ತಿರುವ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ (Viral Video) ಆಗುತ್ತಿರುತ್ತದೆ.

ವೇಗವಾಗಿ ಬರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಡಿಕ್ಕಿಯಾಗಿ ಹಲವು ಹಸುಗಳು ಸಾವನ್ನಪ್ಪಿವೆ. ಆದರೆ ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋಮೋಟಿವ್ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ ಹಸುವನ್ನು ರಕ್ಷಿಸಿದಘಟನೆ ನಡೆದಿದೆ. ಇದರ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಂದೇ ಭಾರತ್ ರೈಲಿನ ಕೆಳಗೆ ಹಸು ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ರೈಲು ಹಳಿಯ ಮೇಲೆ ಹಸುವನ್ನು ಗುರುತಿಸಿ ಪ್ರಾಣಿಯನ್ನು ರಕ್ಷಿಸಲು ತುರ್ತು ಬ್ರೇಕ್ ಹಾಕಿದರು ಎನ್ನಲಾಗಿದೆ.


ರೈಲಿನಡಿ ಸಿಲುಕಿಕೊಂಡಿತ್ತು

ಲೋಕೋ ಪೈಲಟ್ ಬ್ರೇಕ್ ಹಾಕುವಷ್ಟರಲ್ಲಿ ಹಸುವಿನ ಅರ್ಧ ಭಾಗ ರೈಲಿನ ಕೆಳಗೆ ಸಿಲುಕಿಕೊಂಡಿತ್ತು. ರೈಲಿನ ಮುಂಭಾಗದ ಭಾಗವು ಹಸುವಿನ ಮೇಲೆ ಬಿದ್ದಾಗ ಹಸು ನೋವಿನಿಂದ ಕೂಗಿತ್ತು.

ಅನಂತರ ಚಾಲಕ ರೈಲನ್ನು ಹಿಮ್ಮುಖ ದಿಕ್ಕಿನಲ್ಲಿ ಚಲಿಸಿ ಹಸುವನ್ನು ರಕ್ಷಿಸಿದರು. ಬಳಿಕ ಹಸು ಎದ್ದು ಟ್ರ್ಯಾಕ್‌ನಿಂದ ಹೊರನಡೆದಿದೆ. ಹಸುವಿಗೆ ಯಾವುದೇ ಗಾಯವಾಗಿಲ್ಲ. ಸಕಾಲಕ್ಕೆ ಲೋಕೋ ಪೈಲೆಟ್ ಬ್ರೇಕ್ ಹಾಕಿದ್ದರಿಂದ ಹಸು ಪ್ರಾಣಾಪಾಯದಿಂದ ಪಾರಾಗಿದೆ.


ಚಾಲಕನ ಚಾಲಾಕಿತನಕ್ಕೆ ಶ್ಲಾಘನೆ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು ಚಾಲಕನಿಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಹರಿದು ಬರುತ್ತಿವೆ.

ಇದನ್ನೂ ಓದಿ: Viral Video: ಬಸ್‌, ರೈಲಿನಲ್ಲಿ ಮಾತ್ರ ಅಲ್ಲ.. ಫ್ಲೈಟ್‌ನಲ್ಲೂ ನಡೆಯುತ್ತೆ ಸೀಟಿಗಾಗಿ ಮಾರಾಮಾರಿ

ತಡವಾದ ರೈಲು, ಬಾಗಿಲುಗಳ ದೋಷಗಳು

ಅಹಮದಾಬಾದ್- ಮುಂಬಯಿ ವಂದೇ ಭಾರತ್‌ನ ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ರೈಲಿನಲ್ಲಿರುವ ಸಮಸ್ಯೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ಘಟನೆಯೊಂದರಲ್ಲಿ ಕಾನ್ಪುರದಿಂದ ದೆಹಲಿ ಕಡೆಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಹಸು ಸಾವನ್ನಪ್ಪಿತ್ತು. ರೈಲಿನ ಚಾಲಕ ತುರ್ತು ಬ್ರೇಕ್‌ಗಳನ್ನು ಹಾಕಿದ್ದನು, ಆದರೆ, ಹಸುವಿನ ಮೃತ ದೇಹ ರೈಲಿನಲ್ಲಿ ಸಿಲುಕಿಕೊಂಡಿತು. ರೈಲಿನಿಂದ ಪ್ರಾಣಿಯ ಅವಶೇಷಗಳನ್ನು ತೆಗೆದುಹಾಕಲು ರೈಲನ್ನು ಹತ್ತು ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ದೆಹಲಿ- ಹೌರಾ ಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ರೈಲನ್ನು ಅಚಲ್ದಾ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ.

Exit mobile version