ನವದೆಹಲಿ: ಇದೇನಿದ್ದರೂ ಇನ್‌ಸ್ಟಾಗ್ರಾಂ ರೀಲ್ಸ್, ಫೇಸ್‌ಬುಕ್ ವಿಡಿಯೊಗಳ ಯುಗ. ಮಳೆ ಬರಲಿ, ಬಿಸಿಲಿರಲಿ, ಸುಂದರ ತಾಣಕ್ಕೇ ಹೋಗಲಿ, ತುಂಬ ಚಳಿಯೇ ಇರಲಿ, ಯುವಕ-ಯುವತಿಯರು ರೀಲ್ಸ್ ಮಾಡಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿರಿಬಿಡುತ್ತಾರೆ. ಇನ್ನು ಯುವತಿಯರಂತೂ ಹಾಡು, ನೃತ್ಯದ ಮೂಲಕ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಫೇಮಸ್ ಆಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಯುವತಿಯೊಬ್ಬಳು ಜಿಟಿ ಜಿಟಿ ಮಳೆಯಲ್ಲಿ, ಮಳೆ ಬಂದು ನಿಂತ ನೀರಿನಲ್ಲಿ ಡಾನ್ಸ್ (Viral Video) ಮಾಡಿದ್ದಾಳೆ. ಆಕೆಯ ವಿಡಿಯೊ ಈಗ ವೈರಲ್ ಆಗಿದೆ.
ಹೌದು, ಮಳೆ ಬಂದು ರಸ್ತೆ ಮೇಲೆ ನೀರು ನಿಂತಿದೆ. ಜಿಟಿ ಜಿಟಿ ಮಳೆಯೂ ಬರುತ್ತಿದೆ. ಇದನ್ನು ಗಮನಿಸಿದ ಯುವತಿಯೊಬ್ಬಳು ಆ ಮಳೆ ನೀರಿನಲ್ಲೇ “ಮನ್ ಮಸ್ತ್ ಮಗನ್ ಹೋ ಜಾಯೇನಾ, ರಂಗ್ ರೂಪ್ ರತನ್ ಖೋ ಜಾಯೇನಾ” ಎಂಬ ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾಳೆ. ಹಿಂದಿನಿಂದ ವಾಹನಗಳು ರಭಸವಾಗಿ ಹೋದ ಕಾರಣ ಆಕೆಗೆ ನೀರು ಸಿಡಿದರೂ, ಯುವತಿ ಮಾತ್ರ ನಗುತ್ತ ಡಾನ್ಸ್ ಮಾಡಿದ್ದಾಳೆ.
ಮಳೆ ನೀರಲ್ಲಿ ಯುವತಿ ಡಾನ್ಸ್
ಯುವತಿಯ ವಿಡಿಯೊ ವೈರಲ್ ಆಗುತ್ತಲೇ ಒಂದಷ್ಟು ಜನ ಮಸ್ತ್ ಡಾನ್ಸ್ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಒಂದಷ್ಟು ಜನ ಮಂಗಳಾರತಿ ಮಾಡಿದ್ದಾರೆ. ‘ಸೂಪರ್ ಡಾನ್ಸ್’ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದರೆ, ‘ರಸ್ತೆ ಮಧ್ಯೆ, ನೀರಿನಲ್ಲಿ ನಿಂತು ಹೀಗೆ ಡಾನ್ಸ್ ಮಾಡುವ ಶೋಕಿ ಏಕೆ? ಹಿಂದಿನಿಂದ ಬಂದು ವಾಹನ ಡಿಕ್ಕಿಯಾದರೆ ಏನು ಮಾಡುತ್ತೀರಿ’ ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ. ಹೆಚ್ಚಿನ ಜನ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಪಿಯಾನೋ ನುಡಿಸಿದ ಲಸಿತ್ ಮಾಲಿಂಗ; ವಿಡಿಯೊ ವೈರಲ್
ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ದಂಪತಿಯು ರೀಲ್ಸ್ ಮಾಡುವಾಗ ಅಲೆಯ ರಭಸಕ್ಕೆ ಮಹಿಳೆಯೊಬ್ಬರು ಕೊಚ್ಚಿಹೋಗಿದ್ದಾರೆ. ಕರ್ನಾಟಕದಲ್ಲೂ ಯುವಕನೊಬ್ಬ ವಿಡಿಯೊ ರೆಕಾರ್ಡ್ ಮಾಡುವಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಹೀಗಿರುವಾಗ, ರಸ್ತೆ ಮಧ್ಯೆ ರೀಲ್ಸ್ ಮಾಡುವುದು ಅಪಾಯಕಾರಿಯೇ. ಮನೆಯಲ್ಲಿ, ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ರೀಲ್ಸ್ ಮಾಡುವುದು, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಒಳಿತು.