ನವದೆಹಲಿ: ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾದರೆ ಅದು ಬಡತನಕ್ಕೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ನಿಟ್ಟಿನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಆದರೆ ಕೆಲವರು ಇದಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಅದರಲ್ಲೂ ಮುಸ್ಲಿಮ್ ಸಮುದಾಯದವರು ಈ ವಿಚಾರದಲ್ಲಿ ಸಂಪೂರ್ಣವಾಗಿ ಹಾದಿ ತಪ್ಪುತ್ತಿದ್ದಾರೆ. ಮಕ್ಕಳನ್ನು ದೇವರು ಕೊಡುವುದು ಎಂದು ಸಬೂಬು ನೀಡುತ್ತಾತೆ. ಈ ಕಾರಣಕ್ಕೆ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದ್ಯಾವುದೂ ಅರಿವಿಲ್ಲದ ಅವರು ಸರ್ಕಾರವನ್ನು ದೂರಲು ಆರಂಭಿಸುತ್ತಾರೆ. ಅಂತೆಯೇ 7 ಮಕ್ಕಳನ್ನು ಹೊಂದಿರುವ ಮುಸ್ಲಿಂ ಮಹಿಳೆಯೊಬ್ಬಳು “ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ. ಹಾಗಾಗಿ ರಾಹುಲ್ ಗಾಂಧಿ (Rahul Gandhi) ಪ್ರಧಾನಿಯಾಗಬೇಕು” ಎಂದು ಹೇಳಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ( Viral Video) ಆಗಿದೆ. ಜನರು ಕೂಡಾ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳೆಯು ದೇವರು ನಮಗೆ 7 ಮಕ್ಕಳನ್ನು ಕರುಣಿಸಿದ್ದಾನೆ. ಆದರೆ ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ. ಹಾಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಬೇಕು. ಇದರಿಂದ ಬಡತನ ದೂರವಾಗುತ್ತದೆ ಎಂದು ರಾಹುಲ್ ಗಾಂಧಿ ಪರ ಬೆಂಬಲ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವಿವಾದ ಹುಟ್ಟುಹಾಕಿದೆ.
ಈ ವಿಡಿಯೋಗೆ 37.9k ವೀವ್ಸ್ ಸಿಕ್ಕಿದ್ದು, ಸುಮಾರು 3000 ಲೈಕ್ಸ್ ಬಂದಿದೆ. 1000ಕ್ಕೂ ಹೆಚ್ಚು ಈ ವಿಡಿಯೋ ಮರುಪೋಸ್ಟ್ ಆಗಿದೆ. ಹಾಗೇ ಆಕೆಗೆ 7 ಮಂದಿ ಮಕ್ಕಳನ್ನು ದೇವರು ಕೊಟ್ಟಿದ್ದಾನೆ ಎಂದ ಮೇಲೆ ಆಕೆಯ ಬಡತನಕ್ಕೆ ದೇವರೇ ಕಾರಣನಾಗುತ್ತಾನೆ ಹೊರತು ಪ್ರಧಾನಿ ಮೋದಿಯವರು ಹೇಗೆ ಕಾರಣವಾಗುತ್ತಾರೆ ಎಂದು ಜನರು ವ್ಯಂಗ್ಯಮಾಡಿದ್ದಾರೆ. ಹಾಗೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳು ಪಡಿತರ ಚೀಟಿಗೆ ಅರ್ಹತೆ ಹೊಂದಿರಬಾರದು ಎಂದು ಹಲವರು ವಾದಿಸಿದ್ದಾರೆ. ಇದು ಟೀಕೆಗೆ ಕಾರಣವಾಗಿದೆ.
7 kids are given by Allah but Modi is responsible for Poverty, Rahul should be PM pic.twitter.com/S24wX1Ly0l
— Megh Updates 🚨™ (@MeghUpdates) April 19, 2024
ಈ ಹಿಂದೆ ಏಪ್ರಿಲ್ 17ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ರಾಹುಲ್ ಗಾಂಧಿ ಬಡತನ ನಿರ್ಮೂಲನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಡತನವನ್ನು ತಕ್ಷಣವೇ ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ, ಸಂಘಟಿತ ಪ್ರಯತ್ನಗಳು ಅದನ್ನು ಗಮನಾರ್ಹವಾಗಿ ನಿವಾರಿಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರ ಬಡತನ ನಿರ್ಮೂಲನೆಯ ಪ್ರತಿಜ್ಞೆಯನ್ನು ಲೇವಡಿ ಮಾಡಿದ್ದರು.
ಇದನ್ನೂ ಓದಿ: Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿಯವರು ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿಯವರ ಘೋಷಣೆಯನ್ನು ಲೇವಡಿ ಮಾಡಿದ್ದಾರೆ. ಮತ್ತು ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಪಕ್ಷವು ನೀಡಿರುವ ದೀರ್ಘಾವಾಧಿಯ ಭರವಸೆಗಳನ್ನು ಎತ್ತಿ ಹಿಡಿದ ಅವರು, ಕಾಂಗ್ರೆಸ್ ನವರ ಘೋಷಣೆ ನಗೆಪಾಟಲಿಗೀಡಾಗಿದೆ ಎಂದು ವ್ಯಂಗ್ಯವಾಡಿದ್ದರು.