Site icon Vistara News

Viral Video: ಪ್ರಾಣಕ್ಕಿಂತ ಪ್ರಯಾಣವೇ ಮುಖ್ಯ, ಚಲಿಸುವ ರೈಲಿಗೆ ನೇತಾಡಿದ ಯುವಕನ ವಿಡಿಯೊ ವೈರಲ್

Man Hangs To Runnig Train

Viral Video: Mumbai Man Hangs Outside Overcrowded Local Train

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈ ಲೋಕಲ್‌ ರೈಲುಗಳಲ್ಲಿ ಓಡಾಡಲು ಕೂಡ ತುಂಬ ಧೈರ್ಯ ಬೇಕು. ನೂರಾರು ಜನ ಏಕಕಾಲಕ್ಕೆ ಇಳಿಯುವವರ ಮಧ್ಯೆ, ನೂಕುನುಗ್ಗಲು ಮಾಡಿಕೊಂಡು, ತಳ್ಳಾಡಿಕೊಂಡು, ಕೆಲವೊಂದು ಸಲ ರೈಲು ಚಲಿಸುವಾಗಲೇ ಹತ್ತಿಕೊಂಡು ಹೋಗದಿದ್ದರೆ ರೈಲು ಹತ್ತಲು ಆಗುವುದಿಲ್ಲ. ಮತ್ತೊಂದು ರೈಲಿಗೆ ಕಾದರೂ ಇದೇ ಹಣೆಬರಹ. ಇದನ್ನು ಮನಗಂಡ ವ್ಯಕ್ತಿಯೊಬ್ಬ ಪ್ರಾಣವನ್ನೇ ಪಣಕ್ಕಿಟ್ಟು ಚಲಿಸುವ ರೈಲಿಗೆ ನೇತಾಡಿಕೊಂಡೇ ಹೋದ ವಿಡಿಯೊ (Viral Video) ವೈರಲ್‌ ಆಗಿದೆ.

ಹೌದು, ಯುವಕನೊಬ್ಬ ಮುಂಬೈ ರೈಲು ಹತ್ತಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾನೆ. ಜನ ನೂಕುನುಗ್ಗಲು ಮಾಡಿಕೊಂಡು, ರೈಲು ಹತ್ತಿದವರು ಮುಂದಕ್ಕೆ ಹಾಗೂ ಪಕ್ಕಕ್ಕೆ ಸರಿಯದೆ ನಿಂತಿದ್ದಾರೆ. ರೈಲು ಮಿಸ್‌ ಆದರೆ ಮತ್ತೆಲ್ಲಿ ಕಾಯಬೇಕು ಎಂದುಕೊಂಡ ಯುವಕನು ರೈಲಿನ ಬಾಗಿಲಿನಲ್ಲಿ ಐದಾರು ಜನ ನಿಂತರೂ ನೇತಾಡಿಕೊಂಡು ಹೋಗಿದ್ದಾನೆ. ಈತನ ಸಾಹಸದ ವಿಡಿಯೊ ಭಯಂಕರ ವೈರಲ್‌ ಆಗಿದ್ದು, ಜನ ಹತ್ತಾರು ರೀತಿ ಪ್ರತಿಕ್ರಿಯಿಸಿದ್ದಾರೆ.

ರೈಲಿನ ಬಾಗಿಲ ಬಳಿ ಇರುವ ಹಿಡಿಕೆಗಳನ್ನು ಹಿಡಿದು ಯುವಕನು ನೇತಾಡುತ್ತಲೇ ರೈಲು ನಿಧಾನವಾಗಿ ಚಲಿಸುತ್ತದೆ. ಬಾಗಿಲಿನಲ್ಲಿರುವವರು ಕೂಡ ಒಳಗೆ ಹೋಗದೆ, ಅವರು ಕೂಡ ನೇತಾಡಿಕೊಂಡೇ ಇದ್ದ ಕಾರಣ ಯುವಕನು ಜೀವಭಯ ಬಿಟ್ಟು ನೇತಾಡಿದ್ದಾನೆ. ರೈಲು ವೇಗ ಪಡೆದುಕೊಂಡರೂ ಆತ ಸಾವರಿಸಿಕೊಳ್ಳುತ್ತ ಬಾಗಿಲ ಬಳಿಯೇ ನೇತಾಡಿದ ವಿಡಿಯೊ ನೋಡಿದವರಿಗೇ ಭಯ ಹುಟ್ಟಿಸುವಂತಿದೆ.

ಇದನ್ನೂ ಓದಿ: Viral Video : ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ನಲ್ಲಿ ಭರ್ಜರಿ ನಿದ್ದೆ ಹೊಡೆದ ನಾಯಿ! ವೈರಲ್‌ ಆಯ್ತು ವಿಡಿಯೊ

ವೈರಲ್‌ ಭಯಾನಿ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವಕನ ವಿಡಿಯೊ ಅಪ್‌ಲೋಡ್‌ ಮಾಡಲಾಗಿದೆ. “ಅಷ್ಟೊಂದು ಅವಸರ ಬೇಡ” ಎಂಬ ಒಕ್ಕಣೆಯನ್ನೂ ಬರೆಯಲಾಗಿದೆ. ಇನ್ನು ವಿಡಿಯೊ ನೋಡಿದ ಜನರು ಕೂಡ ಪ್ರತಿಕ್ರಿಯಿಸಿದ್ದಾರೆ. “ಜೀವನವನ್ನೇ ಪಣಕ್ಕಿಟ್ಟು ಹೀಗೆ ಪ್ರಯಾಣಿಸದಿರಿ. ಮನೆಯಲ್ಲಿ ಕುಟುಂಬಸ್ಥರು ಕಾಯುತ್ತಿರುತ್ತಾರೆ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಮುಂಬೈನಲ್ಲಿ ಇದು ಸಾಮಾನ್ಯ ಜನರ ಪಾಡು. ಸರ್ಕಾರಗಳು ಇದಕ್ಕಾಗಿ ಯಾವ ಪರಿಹಾರವನ್ನೂ ಕಂಡುಕೊಳ್ಳುವುದಿಲ್ಲ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನೂರಾರು ಜನ ಯುವಕನಿಗೆ ಎಚ್ಚರಿಸಿದ್ದಾರೆ, ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version