Site icon Vistara News

Viral Video: ಬಿಜೆಪಿ ‘ಭ್ರಷ್ಟಾಚಾರ’ ಪಟ್ಟಿ ಓದಲು ತಡಕಾಡಿದ ಪ್ರಿಯಾಂಕಾ ವಾದ್ರಾ; ಅಂಕಿ-ಅಂಶ ಹೇಳುವಾಗಲೂ ಎಡವಟ್ಟು

Priyanka Vadra Failed To Read BJP Scam List

Viral Video: Priyanka Gandhi's Failed Attempt To Read Out BJP's scam List In MP

ಭೋಪಾಲ್‌: ಅದು ರಾಜಕಾರಣಿಗಳು ಆದರೂ ಅಷ್ಟೇ, ಸಾಮಾನ್ಯ ಜನರಾದರೂ ಅಷ್ಟೇ, ಮಾತನಾಡುವಾಗ ಕೆಲವೊಮ್ಮೆ ಕೆಲವೊಂದು ಪದಗಳನ್ನು ಉಚ್ಚಾರ ಮಾಡಲು ಆಗುವುದಿಲ್ಲ. ಇನ್ನೂ ಕೆಲವೊಂದು ಹೆಸರುಗಳನ್ನು ಹೇಳಲು ನಾಲಗೆ ಸಹಕರಿಸುವುದಿಲ್ಲ. ಆದರೆ, ಯಾವಾಗಲೂ ವೈರಲ್‌ ಆಗುವುದು, ಟೀಕೆಗೆ ಗುರಿಯಾಗುವುದು ಮಾತ್ರ ರಾಜಕಾರಣಿಗಳು ಮಾತ್ರ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ (Priyanka Vadra) ಅವರು ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ ಸರ್ಕಾರ ನಡೆಸಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ಪಟ್ಟಿ ಓದಲು ತಡಕಾಡಿದ್ದಾರೆ. ಹಾಗೆಯೇ, ವಿಡಿಯೊ (Viral Video) ವೈರಲ್‌ ಆಗಿದೆ.

ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ ವಾದ್ರಾ ಅವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ರ‍್ಯಾಲಿ ನಡೆಸಿದ್ದಾರೆ. ಇದೇ ವೇಳೆ ಅವರು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ, ಬಿಜೆಪಿಯು ಭ್ರಷ್ಟಾಚಾರದ ಕೂಪವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರದ ಸುಳಿಗೆ ಸಿಲುಕಿ ಜನ ನಲುಗಿಹೋಗಿದ್ದಾರೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಿ ಎಂದು ಜನರಿಗೆ ಕರೆ ಮಾಡಿದ್ದಾರೆ.

ಇದೇ ವೇಳೆ, ಪ್ರಿಯಾಂಕಾ ವಾದ್ರಾ ಅವರು ಬಿಜೆಪಿ ಎಸಗಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ಪಟ್ಟಿಯನ್ನು ಓದಲು ಮುಂದಾಗಿದ್ದಾರೆ. ಆದರೆ, ಪಟ್ಟಿ ಓದಲು ತಡಕಾಡಿದ ಅವರು ಕೊನೆಗೂ ಭ್ರಷ್ಟಾಚಾರ ಪ್ರಕರಣಗಳನ್ನು ಜನರಿಗೆ ತಿಳಿಸಲಿಲ್ಲ. “ಬಿಜೆಪಿ ಎಸಗಿದ ಭ್ರಷ್ಟಾಚಾರ ಪ್ರಕರಣಗಳ ಪಟ್ಟಿ ದೊಡ್ಡದಿದೆ. ಅದನ್ನು ಓದಲು ಕೂಡ ಆಗುವುದಿಲ್ಲ. ಬಿಜೆಪಿಯ ಎಲ್ಲ ಹಗರಣಗಳನ್ನು ನಾನು ಬಳಿಕ ನಿಮಗೆ ಹೇಳುತ್ತೇನೆ” ಎಂದು ಪ್ರಿಯಾಂಕಾ ವಾದ್ರಾ ನುಣುಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ರೆಸ್ಟೋರೆಂಟ್‌ನಲ್ಲಿ ಆರ್ಡರ್‌ ಮಾಡಿದ ಚಿಕನ್‌ನಲ್ಲಿ ಸಿಕ್ಕಿತು ಸತ್ತ ಇಲಿ; ವಿಡಿಯೊ ವೈರಲ್‌

1,600 ನಿರುದ್ಯೋಗಿಗಳು

ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವ ಭರದಲ್ಲಿ ಪ್ರಿಯಾಂಕಾ ವಾದ್ರಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. “ಮಧ್ಯಪ್ರದೇಶದಲ್ಲಿ 1,600 ನಿರುದ್ಯೋಗಿಗಳಿದ್ದಾರೆ” ಎಂದು ಹೇಳುವ ಮೂಲಕ ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. “8.5 ಕೋಟಿ ಜನಸಂಖ್ಯೆ ಇರುವ ಮಧ್ಯಪ್ರದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಕೇವಲ 1,600 ಇದೆ ಎಂದರೆ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರದ್ದು ಅದ್ಭುತ ಸಾಧನೆ” ಎಂದು ಜಾಲತಾಣಗಳಲ್ಲಿ ಜನ ಕುಟುಕಿದ್ದಾರೆ.

Exit mobile version