Site icon Vistara News

Modi Yogi Sisters: ಪಿಎಂ ಮೋದಿ, ಸಿಎಂ ಯೋಗಿ ಸಹೋದರಿಯರ ಭೇಟಿ; ಇವರೆಷ್ಟು ಸಿಂಪಲ್‌ ನೋಡಿ

Modi Yogi Sisters

Viral Video: Sisters of PM Modi, Yogi Adityanath meet at Uttarakhand temple

ಡೆಹ್ರಾಡೂನ್:‌ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇರುವುದೇ ಹಾಗೆ. ಅವರು ತಮ್ಮ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತಂದಿಲ್ಲ. ಯಾವುದೋ ಕ್ಷೇತ್ರದಲ್ಲಿ ಟಿಕೆಟ್‌ ಕೊಟ್ಟು, ರಾಜ್ಯಸಭೆಗೆ ಆಯ್ಕೆ ಮಾಡಿ, ಯಾವಾಗಲೂ ತಮ್ಮ ಸುತ್ತ ಕುಟುಂಬಸ್ಥರು ಇರುವಂತೆ ಮಾಡಿಲ್ಲ. ಇಬ್ಬರ ಕುಟುಂಬಸ್ಥರೂ ಜನಸಾಮಾನ್ಯರಂತೆ ಬದುಕುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್‌ ಅವರ ಸಹೋದರಿಯರು (Modi Yogi Sisters) ಉತ್ತರಾಖಂಡದಲ್ಲಿ ಭೇಟಿಯಾಗಿದ್ದು, ಅವರ ಸಿಂಪ್ಲಿಸಿಟಿಯು ಗಮನ ಸೆಳೆದಿದೆ.

ಹೌದು, ಉತ್ತರಾಖಂಡದ ನೀಲಕಂಠ ಧಾಮ ದೇವಾಲಯದಲ್ಲಿ ನರೇಂದ್ರ ಮೋದಿ ಅವರ ಸಹೋದರಿ ವಾಸಂತಿಬೆನ್‌ ಹಾಗೂ ಯೋಗಿ ಆದಿತ್ಯನಾಥ್‌ ಅವರ ಸಹೋದರಿ ಶಶಿ ದೇವಿ ಅವರು ಭೇಟಿಯಾಗಿದ್ದಾರೆ. ಇಬ್ಬರೂ ತಬ್ಬಿಕೊಂಡು ಉಭಯ ಕುಶಲೋಪರಿ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಾಮಾನ್ಯ ಸೀರೆ ಧರಿಸಿದ, ಯಾವುದೇ ಆಡಂಬರವಿಲ್ಲದ, ದೇಶದ ಸಾಂಪ್ರದಾಯಿಕ ಗೃಹಿಣಿಯರಂತೆ ಕಾಣುವ ಅವರ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವೈರಲ್‌ ಆದ ವಿಡಿಯೊ

“ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್‌ ಅವರು ಮಹಾನ್‌ ವ್ಯಕ್ತಿಗಳು. ಅವರ ಕುಟುಂಬಸ್ಥರನ್ನು ನೋಡುವುದೇ ಧನ್ಯತಾ ಭಾವ ಮೂಡಿಸುತ್ತದೆ” ಎಂದು ಒಬ್ಬರು ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. “ಇಬ್ಬರ ಸರಳತೆಯೇ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಒಬ್ಬರು ಪ್ರಧಾನಿಯ ಸಹೋದರಿ. ಮತ್ತೊಬ್ಬರು ಮುಖ್ಯಮಂತ್ರಿಯ ಸಹೋದರಿ. ಹೀಗಿದ್ದರೂ ಇವರು ನಮ್ಮ-ನಿಮ್ಮಂತೆ ಇದ್ದಾರೆ ಎಂಬುದೇ ಗ್ರೇಟ್”‌ ಎಂದು ಇನ್ನೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Prahlad Modi | ಬಂಡೀಪುರಕ್ಕೆ ಹೊರಟಿದ್ದ ಮೋದಿ ಸಹೋದರನ ಕುಟುಂಬದ ಕಾರು ಅಪಘಾತ; ಮಗುವಿನ ಕಾಲು ಮೂಳೆ ಕಟ್‌, ಉಳಿದವರು ಪಾರು

ಒಬ್ಬ ವ್ಯಕ್ತಿ ಶಾಸಕನಾದರೂ ಆತನ ಸುತ್ತಲೂ ಕುಟುಂಬಸ್ಥರೇ ಜೋತುಬಿದ್ದಿರುತ್ತಾರೆ. ಮುಖ್ಯಮಂತ್ರಿಗಳ ಪಕ್ಕದಲ್ಲಿ ಯಾವಾಗಲೂ ಅವರ ಮಕ್ಕಳು, ಸಹೋದರರು ಇರುತ್ತಾರೆ. ಅಧಿಕಾರದಲ್ಲಿ ಮೂಗು ತೂರಿಸುತ್ತಾರೆ. ಆದರೆ, ಪ್ರಧಾನಿ, ಮುಖ್ಯಮಂತ್ರಿಯ ಸಹೋದರಿಯರು ಇಷ್ಟೊಂದು ಸರಳ ಜೀವನ ನಡೆಸುವುದು, ಅವರ ಪಕ್ಕ ಬಿಡಿ, ಮಾಧ್ಯಮಗಳಲ್ಲಿಯೇ ಕಾಣಿಸದಿರುವುದು ಜನರ ಅಚ್ಚರಿಗೆ ಕಾರಣವಾಗುತ್ತದೆ.

Exit mobile version