Site icon Vistara News

Viral Video: ‘ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ; ವಾಗ್ವಾದದಲ್ಲಿ ಗೆದ್ದಿದ್ದು ಯಾರು?

Delhi Metro Women Arguement

Viral Video: Two Women get into heated argument in Delhi Metro

ನವದೆಹಲಿ: ಮೆಟ್ರೊ ರೈಲು ಎಂದರೆ ಏನು ನೆನಪಾಗುತ್ತದೆ? ಸಮಯಕ್ಕೆ ಸರಿಯಾಗಿ ಬರುವ ರೈಲು, ಸ್ವಚ್ಛತೆ, ತುಸು ಗದ್ದಲ ಇದ್ದರೂ ಸರಿಯಾದ ಸಮಯಕ್ಕೆ ಅಂದುಕೊಂಡ ಜಾಗ ತಲುಪುತ್ತೇವೆ ಎಂಬ ವಿಶ್ವಾಸ ನೆನಪಿಗೆ ಬರುತ್ತದೆ. ಆದರೆ, ದೆಹಲಿ ಮೆಟ್ರೊ ರೈಲು (Delhi Metro) ಎಂದರೆ ಇತ್ತೀಚೆಗೆ ಇದ್ಯಾವುದೂ ನೆನಪಿಗೆ ಬರುವುದಿಲ್ಲ. ಪ್ರೇಮಿಗಳಿಬ್ಬರ ಸರಸ ಸಲ್ಲಾಪ, ಲಿಪ್‌ಲಾಕ್‌, ಯುವತಿಯರು ರೀಲ್ಸ್‌ ಮಾಡುವುದು, ಯುವಕರು ಜಗಳ ಆಡುವುದು, ಮಹಿಳೆಯರು ವಾಗ್ವಾದ ನಡೆಸುವ ಚಟುವಟಿಕೆಗಳು ಸುದ್ದಿಯಾಗುತ್ತಿವೆ. ಇದರ ಬೆನ್ನಲ್ಲೇ, ಚಲಿಸುತ್ತಿದ್ದ ಮೆಟ್ರೊದಲ್ಲಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ದೆಹಲಿ ಮೆಟ್ರೊದಲ್ಲಿ ಇಬ್ಬರು ಮಹಿಳೆಯರ ಮಧ್ಯೆ ಭಾರಿ ವಾಗ್ವಾದ ನಡೆದಿದೆ. ನೀನು ಬಾಯಿ ಮುಚ್ಚು ಎಂದು ಒಬ್ಬ ಮಹಿಳೆ ಗದರಿದರೆ, ನೀನೇಕೆ ಕಿರುಚುತ್ತಿದ್ದೀಯಾ, ನೀನು ಸುಮ್ಮನಾಗು ಎಂದು ಮತ್ತೊಬ್ಬ ಮಹಿಳೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಇಬ್ಬರೂ ಹೀಗೆ, ನೀನು ಸುಮ್ಮನಾಗು, ನೀನು ಸುಮ್ಮನಾಗು ಎಂದು ಕಿರುಚಾಡಿದ್ದು, ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಅಳುಕಿಲ್ಲದೆ ಇಬ್ಬರೂ ವಾಕ್ಸಮರ ನಡೆಸಿದ್ದಾರೆ.

ಜಗಳದ ವಿಡಿಯೊ ನೋಡಿ

ಇದೇ ವೇಳೆ ಯುವಕನೊಬ್ಬ ಮಹಿಳೆಯೊಬ್ಬರನ್ನು ಸಮಾಧಾನಪಡಿಸಿ, ಜಗಳ ನಿಲ್ಲಿಸಲು ಬಂದಿದ್ದು, ಮತ್ತೊಬ್ಬ ಮಹಿಳೆಯು ಯುವಕನ ಮೇಲೂ ಕೋಪ ವ್ಯಕ್ತಪಡಿಸಿದ್ದಾರೆ. ಹೀಗೆ, ಕೆಲವು ನಿಮಿಷಗಳವರೆಗೆ ಇಬ್ಬರ ಮಧ್ಯೆ ನಡೆದ ಜಗಳವು ಅಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ಮೆಟ್ರೊದಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜನ ಆಗ್ರಹಿಸಿದರೆ, ಮತ್ತೊಂದಿಷ್ಟು ಜನ ಮಹಿಳೆಯರ ಜಗಳ ನೋಡಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ

ಕೆಲ ತಿಂಗಳಿಂದ ದೆಹಲಿ ಮೆಟ್ರೊಗಳಲ್ಲಿ ಹತ್ತಾರು ಚಟುವಟಿಕೆಗಳು ನಡೆಯುತ್ತಿವೆ. ಇತ್ತೀಚೆಗೆ ಹೆಣ್ಣುಮಕ್ಕಳು ಜೋರಾಗಿ ಜಗಳವಾಡಿದ, ಪುರುಷರು ಗಲಾಟೆ ಮಾಡಿದ, ಯುವತಿಯೊಬ್ಬಳು ಹೇರ್‌ ಡ್ರೈ ಮಾಡಿಕೊಂಡ, ಮತ್ತೊಬ್ಬ ಯುವತಿಯು ಡಾನ್ಸ್‌ ಮಾಡಿದ ವಿಡಿಯೊಗಳು ವೈರಲ್‌ ಆಗಿದ್ದವು. ಕೆಲವೇ ದಿನಗಳ ಹಿಂದೆ ಯುವಕ-ಯುವತಿಯು ಲಿಪ್‌ಲಾಕ್‌ ಮಾಡಿದ್ದ ವಿಡಿಯೊ ಕೂಡ ಭಾರಿ ವೈರಲ್‌ ಆಗಿತ್ತು.

Exit mobile version