ಲಕ್ನೋ, ಉತ್ತರ ಪ್ರದೇಶ: ಮದುವೆ ವೇಳೆ ಮದುಮಗಳು ಕೇವಲ 5 ಸೆಕೆಂಡ್‌ನಲ್ಲಿ 4 ಸುತ್ತು ಗುಂಡು ಹಾರಿಸಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಪರಿಣಾಮ ಆ ಮದುಮಗಳ ವಿರುದ್ಧ ಪೊಲೀಸರ್ ಕೇಸ್ ದಾಖಲಿಸಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ(Viral Video).
ಉತ್ತರ ಪ್ರದೇಶದ ಹತ್ರಾಸ್ ಜಂಕ್ಷನ್ ಪ್ರದೇಶದ ಸಲೇಂಪುರ್ ಹಳ್ಳಿಯಲ್ಲಿ ಮದುವೆಯನ್ನು ಆಯೋಜಿಸಲಾಗಿತ್ತು. ಈ ವೇಳೆ, ಗುಂಡು ಹಾರಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಗುಂಡು ತುಂಬಿದ ರಿವಾಲ್ವರ್‌ವನ್ನು ವಧುಗೆ ನೀಡಲಾಗುತ್ತದೆ. ಆಕೆಯ ಪಕ್ಕದಲ್ಲೇ ವರ ಕೂಡ ಕುಳಿತಿದ್ದಾನೆ. ಆಗ, ವಧು ರಿವಾಲ್ವರ್‌ವನ್ನು ತೆಗೆದುಕೊಂಡು ಮೇಲೆ ನೋಡಿ, ನಾಲ್ಕು ಬಾರಿ ಗನ್‌ನಿಂದ ಫಾಸ್ಟ್ ಆಗಿ ಗುಂಡು ಹಾರಿಸುತ್ತಾಳೆ, ಆದರೆ ವರನು ನಿರಾಳವಾಗಿ ಮುಂದೆ ನೋಡುತ್ತಾನೆ. ಆತನಿಗೆ ಯಾವುದೇ ಉದ್ವೇಗವಾಗಲಿ ಏನೂ ಇಲ್ಲದಿರುವುದು ಕಾಣುತ್ತದೆ. ಫೈರ್ ಮಾಡಿದ ಬಳಿಕ ಮಹಿಳೆ ಆ ರಿವಾಲ್ವರ್‌ವನ್ನು ಮತ್ತೆ ಹಿಂತಿರುಗಿಸುತ್ತಾಳೆ. ಇಷ್ಟೆಲ್ಲ ಘಟನೆಯು ನಡೆಯುತ್ತಿರುವಾಗ ಹಿನ್ನೆಲೆಯಲ್ಲಿ ಮತ್ತೊಬ್ಬ ವ್ಯಕ್ತಿ ನಗುತ್ತಾ ನಿಂತಿರುವುದನ್ನು ಕಾಣಬಹುದು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಫೈರಿಂಗ್ ಘಟನೆಯ ಮದುವೆ ಕಾರ್ಯಕ್ರಮದಲ್ಲಿ ಜೈಮಾಲಾ ಪದ್ಧತಿಯು ಮುಗಿದ ಬಳಿಕ ನಡೆದಿದೆ. ಜೈಮಾಲಾ ಪದ್ಧತಿಯಲ್ಲಿ ವಧು ವರರಿಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ಹಿರಿಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಕೊನೆಗೆ ಕ್ಯಾಮೆರಾಗೆ ಪೋಸು ನೀಡುತ್ತಾರೆ. ಬಳಿಕ ವೇದಿಕೆಯನ್ನು ಏರಿ, ವಧು ವರರಿಬ್ಬರು ಅಕ್ಕ ಪಕ್ಕ ಕುಳಿತುಕೊಳ್ಳುತ್ತಾರೆ.
ಹತ್ರಾಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಅಶೋಕ್ ಕುಮಾರ್ ಸಿಂಗ್ ಅವರು, ವಿಡಿಯೋ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಬಂದೂಕು ಹಿಡಿದಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Video Viral: ದಿಲ್ಲಿ ಮೆಟ್ರೋದಲ್ಲಿ ಬಿಕಿನಿ ರೀತಿ ಬಟ್ಟೆ ತೊಟ್ಟ ಯುವತಿಯ ವಿಡಿಯೋ ವೈರಲ್! ಡಿಎಂಆರ್‌ಸಿ ಹೇಳಿದ್ದೇನು?