Site icon Vistara News

Viral Video: ನೋಡದೆಯೇ ಆಂಜನೇಯನ ಅದ್ಭುತ ಚಿತ್ರ ಬಿಡಿಸಿದ ಮಹಿಳೆ; ಜೈ ಬಜರಂಗ್ ಬಲಿ ಎಂದ ಜನ

Woman draws Lord Hanuman

Viral Video: Woman draws Lord Hanuman using chalk with both hands without looking

ನವದೆಹಲಿ: ಭಾರತದಲ್ಲಿ ಪ್ರತಿಭೆಗಳೇನೂ ಕಡಿಮೆ ಇಲ್ಲ. ಕಲೆ, ನಟನೆ, ಅಧ್ಯಯನ ಸೇರಿ ಸಕಲ ಕ್ಷೇತ್ರಗಳಲ್ಲೂ ಅಗಾಧ ಪ್ರತಿಭೆಗಳಿವೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಅದ್ಭುತ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ, ಅವಕಾಶ ಸಿಗುವುದಿಲ್ಲ. ಆದರೇನಂತೆ, ಸಾಮಾಜಿಕ ಜಾಲತಾಣಗಳು ಬಂದಮೇಲೆ ನಗರ, ಗ್ರಾಮೀಣ ಎನ್ನದೆ ಎಲ್ಲ ಕಲಾವಿದರು ತಮ್ಮ ಕಲೆ ಪ್ರದರ್ಶಿಸಲು ಸಾಧ್ಯವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಗ್ರಾಮೀಣ ಮಹಿಳೆಯೊಬ್ಬರು ಕಪ್ಪುಹಲಗೆ ಮೇಲೆ (Black Board) ನೋಡದೆಯೇ ಆಂಜನೇಯನ ಅದ್ಭುತ ಚಿತ್ರವನ್ನು ಬಿಡಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ಗ್ರಾಮೀಣ ಮಹಿಳೆಯರು ಕಪ್ಪುಹಲಗೆ ಮುಖ ಮಾಡಿರುವ ಕಡೆಗೇ ನಿಂತು, ಎರಡೂ ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿ, ಒಂದು ಚೂರೂ ನೋಡದೆಯೇ ಆಂಜನೇಯನ ಅದ್ಭುತ ಚಿತ್ರವನ್ನು ಚಾಕ್‌ಪೀಸ್‌ ಮೂಲಕ ಬಿಡಿಸಿದ್ದಾರೆ. ಪೂನಂ ಆರ್ಟ್‌ ಅಕಾಡೆಮಿ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ವಿಡಿಯೊವನ್ನು ಅಪ್‌ಲೋಡ್‌ ಮಾಡಲಾಗಿದೆ. ವಿಡಿಯೊಗೆ ಸಾವಿರಾರು ಜನ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಗ್ರಾಮೀಣ ಮಹಿಳೆಯ ಕಲೆಯನ್ನು ಮೆಚ್ಚಿದ್ದಾರೆ.

ಇಲ್ಲಿದೆ ವೈರಲ್‌ ಆದ ವಿಡಿಯೊ

ವಿಡಿಯೊವನ್ನು ನೋಡಿದ ವ್ಯಕ್ತಿಯೊಬ್ಬರು ʼಜೈ ಬಜರಂಗ್‌ ಬಲಿʼ ಎಂದು, ಮತ್ತೊಬ್ಬರು ʼಜೈ ಶ್ರೀರಾಮ್‌ʼ ಎಂದೂ ಪ್ರತಿಕ್ರಿಯಿಸಿದ್ದಾರೆ. ʼಇನ್‌ಸ್ಟಾಗ್ರಾಂನಲ್ಲಿ ಯಾವುದ್ಯಾವುದೋ ವಿಡಿಯೊಗಳನ್ನು ನೋಡುವ ಬದಲು ಇಂತಹ ವಿಡಿಯೊ ನೋಡಬೇಕು. ಉಪಯೋಗಕ್ಕೆ ಬಾರದ ವಿಡಿಯೊಗಳಿಗೆ ಪ್ರೋತ್ಸಾಹಿಸದೆ, ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕುʼ ಎಂದು ಮಗದೊಬ್ಬರು ಹೇಳಿದ್ದಾರೆ. ವಿಡಿಯೊವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಹಾಗೆಯೇ, ಸಾವಿರಾರು ಜನ ಮಹಿಳೆಯ ಪ್ರತಿಭೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯುಟ್ಯೂಬ್‌ ಸೇರಿ ಹಲವು ಸಾಮಾಜಿಕ ಜಾಲತಾಣಗಳಿಂದಾಗಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಮುನ್ನೆಲೆಗೆ ಬರುತ್ತಿವೆ. ಗ್ರಾಮೀಣ ಪ್ರದೇಶದಲ್ಲೂ ಕಾಮಿಡಿ, ಅಡುಗೆ, ಶಾರ್ಟ್‌ ಮೂವಿಗಳನ್ನು ನಿರ್ಮಿಸುವ ಮೂಲಕ ಕೈತುಂಬ ಹಣವನ್ನೂ ಗಳಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕವಂತೂ ಸ್ಟಾರ್‌ಗಳಾಗುತ್ತಿದ್ದಾರೆ. ಇದಕ್ಕೆ ಈ ಮಹಿಳೆಯ ಕಲೆಗೆ ಸಾವಿರಾರು ಜನ ಮೆಚ್ಚುಗೆ ಸೂಚಿಸಿರುವುದೇ ಸಾಕ್ಷಿಯಾಗಿದೆ.

ಇದನ್ನೂ ಓದಿ: Viral Video: ‌ಹೌ ಡೇರ್‌ ಯೂ… ವಿಮಾನದಲ್ಲಿ ಮಗಳನ್ನು ಮುಟ್ಟಿದ ಪುಂಡನ ಚಳಿ ಬಿಡಿಸಿದ ತಂದೆ; ವಿಡಿಯೊ ವೈರಲ್

Exit mobile version