ಕೆಲವೊಮ್ಮೆ ಎಂತೆಂಥಾ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ, ಅದು ಹೊಡೆದಾಟದವರೆಗೆ ತಲುಪುತ್ತದೆ. ಅದೂ ಹೊರಗಿನವರೊಂದಿಗೆ ಅಲ್ಲ. ಕುಟುಂಬದಲ್ಲೇ, ಬಂಧುಬಳಗದವರ ಮಧ್ಯೆಯೇ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ನಿಲ್ಲುತ್ತದೆ. ಉತ್ತರ ಪ್ರದೇಶದ (Uttar Pradesh News) ಬಾರಾಬಂಕಿಯಲ್ಲೂ ಹೀಗೆ. ಒಂದು ಸಣ್ಣ ಕಾರಣಕ್ಕೆ ನಿಂದನೆ, ಹೊಡೆದಾಟ ನಡೆದಿದೆ. ಗರ್ಭಿಣಿಯ ತಂದೆ, ಸಹೋದರ ಎಲ್ಲ ಸೇರಿ, ಆಕೆಯ ಗಂಡನ ಮನೆಯವರಿಗೆ ಮನಬಂದಂತೆ ಥಳಿಸಿದ್ದಾರೆ. ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವಿಡಿಯೊ ವೈರಲ್ (Viral Video) ಆಗಿದೆ.
ಯುವತಿ ತುಂಬು ಗರ್ಭಿಣಿ. ಆಕೆಗೆ ಹೆರಿಗೆ ನೋವು ಶುರುವಾದ ಕಾರಣ ಗಂಡನ ಮನೆಯವರೆಲ್ಲ ಸೇರಿ ಸಿವಿಲ್ ಲೈನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಕೆಯ ಮಾವ ರಾಮ್ಕುಮಾರ್ ಅವರೇ ಎಲ್ಲ ವ್ಯವಸ್ಥೆ ಮಾಡಿದ್ದರು. ಸೊಸೆಗೆ ಹೆರಿಗೆ ಮಾಡಿಸಲು ಆಸ್ಪತ್ರೆಗೆ ಬಿಲ್ ಕೂಡ ಕಟ್ಟಿದ್ದರು. ಅಷ್ಟರಲ್ಲಿ ಮಗಳಿಗೆ ಹೊಟ್ಟೆನೋವು ಬಂದ ಸುದ್ದಿ ಕೇಳಿ ಆಕೆಯ ಅಪ್ಪ-ಅಮ್ಮ, ಸೋದರನೂ ಆಸ್ಪತ್ರೆಗೆ ಬಂದರು. ಆದರೆ ಆಸ್ಪತ್ರೆಗೆ ಬಂದವರೇ ಮಗಳನ್ನು ಎಸಿ (ಹವಾನಿಯಂತ್ರಿತ) ಇರುವ ವಾರ್ಡ್ಗೆ ಅಡ್ಮಿಟ್ ಮಾಡಲಿಲ್ಲ ಎಂಬ ಕಾರಣ ತೆಗೆದು ಅವಳ ಅಪ್ಪ ಬೈಯ್ಯಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಯುವತಿಯ ಮಾವ, ಪತ್ನಿ, ಅವರ ಇಬ್ಬರು ಹೆಣ್ಣು ಮಕ್ಕಳಿಗೆಲ್ಲ ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೊ ಆಸ್ಪತ್ರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Murder Case : ಪ್ರೀತಿಸಿದ ಪತ್ನಿಯನ್ನೇ ಕೊಂದ ಗಂಡ; 45 ದಿನದ ಮಗುವನ್ನು ಹೆಣದ ಜತೆ ಬಿಟ್ಟು ಪರಾರಿ
ಜಗಳ ವಿಕೋಪಕ್ಕೆ ಹೋಗಿ, ಎರಡೂ ಕುಟುಂಬಗಳವರೂ ಪರಸ್ಪರರಿಗೆ ಹೊಡೆದುಕೊಂಡಿದ್ದಾರೆ. ತಮ್ಮ ಮಗಳನ್ನು ಎಸಿ ಇರುವ ರೂಮಿನಲ್ಲಿ ಅಡ್ಮಿಟ್ ಮಾಡಿಡಬೇಕಿತ್ತು ಎಂಬುದು ಆಕೆಯ ತಂದೆ-ತಾಯಿಯ ವಾದ. ವಾಗ್ವಾದ ಬಗೆಹರಿಯದೆ ಇದ್ದಾಗ, ಮಹಿಳೆಯ ಪತಿಯ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆಯರ ಕುಟುಂಬದವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆಕೆಗೆ ಹೆರಿಗೆಯಾಯಿಯೋ ಇಲ್ಲವೋ ಗೊತ್ತಿಲ್ಲ, ಪ್ರಕರಣವಂತೂ ಠಾಣೆ ಮೆಟ್ಟಿಲೇರಿತು.
#Barabanki में बहू के लिए अस्पताल में AC रूम न बुक करने पर मायके वालों ने की ससुराल पक्ष के लोगों की पिटाई, विडियो वायरल। pic.twitter.com/bfuKZ5j4uA
— Priya singh (@priyarajputlive) July 5, 2023