ನವದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೊ ರೈಲುಗಳು ಬೆಂಗಳೂರಿನ ಕಬ್ಬನ್ ಪಾರ್ಕ್ ರೀತಿ ಆಗಿವೆ. ಪ್ರಿಯತಮೆಗೆ ಮುತ್ತು ಕೊಡುವುದು, ಲಿಪ್‌ಲಾಕ್ ಮಾಡುವುದು, ತಬ್ಬಿಕೊಂಡೇ ನಿಲ್ಲುವುದು, ಡಾನ್ಸ್ ಮಾಡುವುದು, ರೀಲ್ಸ್ ಮಾಡುವುದು ಸೇರಿ ಹತ್ತಾರು ಚಟುವಟಿಕೆಗಳಿಗೆ ದೆಹಲಿ ಮೆಟ್ರೊ (Delhi Metro) ರೈಲುಗಳು ಸಾಕ್ಷಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಯುವಕನೊಬ್ಬ ಗರ್ಲ್‌ಫ್ರೆಂಡ್‌ಗೆ ಚಲಿಸುವ ಮೆಟ್ರೊದಲ್ಲೇ ಮುತ್ತು ಕೊಟ್ಟಿದ್ದಾನೆ. ಈ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಹೌದು, ಯುವಕ-ಯುವತಿಯು ಬಾಗಿಲ ಬಳಿಯೇ ನಿಂತಿದ್ದಾರೆ. ಇದೇ ವೇಳೆ ಯುವಕನು ಆಕೆಯನ್ನು ಮೆಲ್ಲಗೆ ತಬ್ಬಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸಿಹಿ ಮುತ್ತೊಂದನ್ನೂ ನೀಡಿದ್ದಾನೆ. ಇದೇ ವೇಳೆ, ಯುವತಿಯು ಆತನನ್ನು ಕೊಲ್ಲುವಂತೆ ನೋಡಿದ್ದಾಳೆ. ಆಕೆ ಕೊಲ್ಲುವಂತೆ ನೋಡಿದ್ದೇ ಇನ್ನೊಂದು ಮುತ್ತಿಗೆ ಸನ್ನೆ ಎಂದು ಭಾವಿಸಿದ ಯುವಕ ಮತ್ತೊಂದು ಬಾರಿ ಕಿಸ್ ಕೊಟ್ಟಿದ್ದಾನೆ.
ಇಲ್ಲಿದೆ ವೈರಲ್ ವಿಡಿಯೊ
After massive public demand
— Hasna Zaroori Hai 🇮🇳 (@HasnaZarooriHai) July 24, 2023
Entertainment in Delhi Metro is back !!!!!!!
😂😂😂🤣🤣🤣🤣 pic.twitter.com/kzkSFKi7Ql
ಈ ಸರಸ ಸಲ್ಲಾಪದ ವಿಡಿಯೊ ವೈರಲ್ ಆಗುತ್ತಲೇ ಜನ ಎಂದಿನಂತೆ ಹತ್ತಾರು ರೀತಿ ಪ್ರತಿಕ್ರಿಯಿಸಿದ್ದಾರೆ. “ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಿದರೆ ಪೈಸಾ ವಸೂಲ್” ಎಂದು ತರಲೆಯೊಬ್ಬ ಪ್ರತಿಕ್ರಿಯಿಸಿದರೆ, “ದೆಹಲಿ ಮೆಟ್ರೊದಲ್ಲಿ ಇಂತಹ ಅನುಚಿತ ವರ್ತನೆಗಳನ್ನು ತಡೆಯಬೇಕು. ಅನುಚಿತವಾಗಿ ವರ್ತಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Namma Metro : ನೀವು ನಂಬ್ತೀರಾ? ಇನ್ನು ಸ್ವಲ್ಪ ದಿನ ಹೋದ್ರೆ ಚಾಲಕನಿಲ್ಲದೆಯೇ ಓಡುತ್ತಂತೆ ನಮ್ಮ ಮೆಟ್ರೊ!
ಕೆಲ ತಿಂಗಳಿಂದ ದೆಹಲಿ ಮೆಟ್ರೊಗಳಲ್ಲಿ ಹತ್ತಾರು ಚಟುವಟಿಕೆಗಳು ನಡೆಯುತ್ತಿವೆ. ಇತ್ತೀಚೆಗೆ ಹೆಣ್ಣುಮಕ್ಕಳು ಜೋರಾಗಿ ಜಗಳವಾಡಿದ, ಪುರುಷರು ಗಲಾಟೆ ಮಾಡಿದ, ಯುವತಿಯೊಬ್ಬಳು ಹೇರ್ ಡ್ರೈ ಮಾಡಿಕೊಂಡ, ಮತ್ತೊಬ್ಬ ಯುವತಿಯು ಡಾನ್ಸ್ ಮಾಡಿದ ವಿಡಿಯೊಗಳು ವೈರಲ್ ಆಗಿದ್ದವು.