ಚಂಡೀಗಢ: ಸಾಮಾನ್ಯವಾಗಿ ಯಾವುದೇ ಪೊಲೀಸ್ ಪೇದೆಗಳು ಅವರ ಹಿರಿಯ ಅಧಿಕಾರಿಗಳ ವಿರುದ್ಧ ತಿರುಗಿಬೀಳುವುದಿಲ್ಲ. ಹಿರಿಯ ಅಧಿಕಾರಿಗಳು ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಆದರೆ, ಪಂಜಾಬ್‌ನಲ್ಲಿ ಪೊಲೀಸ್ ಪೇದೆಯೊಬ್ಬರು (Punjab Police) ಹಿರಿಯ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಹೆದ್ದಾರಿಯಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಪ್ರತಿಭಟನೆ ನಡೆಸಿರುವ ವಿಡಿಯೊ (Viral Video) ವೈರಲ್ ಆಗಿದೆ.
ಹೌದು, ಪೊಲೀಸ್ ಪೇದೆಯೊಬ್ಬರು ಜಲಂಧರ್‌ನಲ್ಲಿ ಹೆದ್ದಾರಿಯಲ್ಲಿ ಹಗ್ಗ ಕಟ್ಟಿ, ಹೆದ್ದಾರಿಯನ್ನು ಬಂದ್ ಮಾಡಿ ಹಿರಿಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. “ನಾನು ಕಳ್ಳರನ್ನು ಹಿಡಿದುಕೊಂಡು ಬರುತೇನೆ. ಆದರೆ, ಅವರು (ಹಿರಿಯ ಅಧಿಕಾರಿಗಳು) ಲಂಚ ಪಡೆದು ಅವರನ್ನು ಜೈಲಿನಿಂದ ಬಿಡುಗಡೆ ಮಾಡುತ್ತಾರೆ” ಎಂದು ಪೇದೆಯು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶದಿಂದ ಅವರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ
‘Jehra mai chor fad ke liauna oh Thane Wale paise laike chadi jande’
— Harpinder Singh (@HarpinderTohra) July 22, 2023
रिश्वतखोरी से दुखी हो कर पुलिस मुलाजिम ने #jalandhar के भोगपुर में रोड जाम कर विरोध प्रदर्शन किया। #PunjabPolice pic.twitter.com/QyajO37Cvd
ಗೃಹ ರಕ್ಷಣೆ ದಳದ ಸಿಬ್ಬಂದಿಯಾಗಿರುವ ಪೇದೆಯು ಹಿರಿಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿಡಿಯೊ ವೈರಲ್ ಆಗುತ್ತಲೇ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಯೊಬ್ಬರು ಅವರ ಮನವೊಲಿಸಲು ಯತ್ನಿಸಿದ್ದಾರೆ. ಇಷ್ಟಾದರೂ ಸುಮ್ಮನಿರದ ಪೇದೆಯು, ವಾಹನಗಳಿಗೆ ಅಡ್ಡ ಮಲಗುವ ಮೂಲಕ ಹಿರಿಯ ಅಧಿಕಾರಿಯನ್ನು ಮತ್ತಷ್ಟು ಕೆರಳಿಸಿದ್ದಾರೆ. ಆಗ ಹಿರಿಯ ಅಧಿಕಾರಿಯು ಪೇದೆಗೆ ಒದ್ದಿರುವುದು ವಿಡಿಯೊದಲ್ಲಿ ಸರೆಯಾಗಿದೆ.
ಇದನ್ನೂ ಓದಿ: ನಾನು ಬಂದಾಗ ನೀವು ಯಾಕೆ ಇರಲಿಲ್ಲ ಎಂದ ಬಾಸ್ಗೆ ಈ ಉದ್ಯೋಗಿ ಕೊಟ್ಟ ಉತ್ತರ ಈಗ ಫುಲ್ ವೈರಲ್!
ಪೇದೆಯ ಪ್ರತಿಭಟನೆಯಿಂದ ಜಲಂಧರ್ ಹೆದ್ದಾರಿಯಲ್ಲಿ ಕೆಲ ಗಂಟೆಗಳವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೆ, ಪ್ರತಿಭಟನೆ ನಡೆಸಿದ್ದು ಪೊಲೀಸರಿಗೂ ಮುಜುಗರ ತಂದಿತು. ಹಾಗಾಗಿ, ಪೇದೆಯನ್ನು ಬಂಧಿಸಿ, ಭೋಗಪುರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ವಿಡಿಯೊ ವೈರಲ್ ಆಗುತ್ತಲೇ ಜನ ಪ್ರತಿಕ್ರಿಯಿಸಿದ್ದಾರೆ. “ಇದು ನಮ್ಮ ಪೊಲೀಸ್ ವ್ಯವಸ್ಥೆ” ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದರೆ, “ಪೇದೆಯ ಧೈರ್ಯ ಮೆಚ್ಚಬೇಕು” ಎಂದು ಮತ್ತೊಬ್ಬರು ಹೇಳಿದ್ದಾರೆ.