Site icon Vistara News

Chhattisgarh CM: ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ ಸಾಯಿ ಅಧಿಕಾರ ಸ್ವೀಕಾರ

Vishnu Deo Sai sworn in as Chhattisgarh Chief Minister and two dcm

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗ ವಿಷ್ಣುದೇವ್ ಸಾಯಿ (Chhattishgar CM Vishnu Deo Sai) ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ, ಪಕ್ಷದ ಹಿರಿಯ ಸಚಿವರು, ನಾಯಕರು ಕೂಡ ಹಾಜರಿದ್ದರು. ಇದೇ ವೇಳೆ, ಬಿಜೆಪಿ ನಾಯಕರಾದ ಅರುಣ್ ಸಾವೋ (DCM Arun Sao) ಮತ್ತು ವಿಜಯ್ ಶರ್ಮಾ (DCM Vijay Sharma) ಅವರು ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು.

ಬಿಜೆಪಿಯ ಪ್ರಮುಖ ಬುಡಕಟ್ಟು ಮುಖವಾಗಿರುವ ವಿಷ್ಣು ದೇವ್ ಸಾಯಿ ಅವರನ್ನು ಪಕ್ಷವು ಛತ್ತೀಸ್‌ಗಢದ ಹೊಸ ಮುಖ್ಯಮಂತ್ರಿಯಾಗಿ ಹೆಸರಿಸಿದ್ದು, ಒಂದು ವಾರದ ಸಸ್ಪೆನ್ಸ್‌ಗೆ ಅಂತ್ಯ ಹಾಡಿದೆ. 1990ರಿಂದಲೂ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಸಾಯಿ ಅವರು, ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷ ಸೇರಿದಂತೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ನರೇಂದ್ರ ಮೋದಿ ಅವರ ಮೊದಲನೇ ಅವಧಿಯಲ್ಲಿ ಸಾಯಿ ಅವರು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ರಾಜ್ಯದಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿಯ ಅತ್ಯುತ್ತಮ ತೋರಿತ್ತು. ಇದರಿಂದಾಗಿಯೇ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಅವರನ್ನು ನೇಮಿಸುವ ನಿರ್ಧಾರವನ್ನು ಪಕ್ಷವು ಮಾಡಿತು. ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾಗಿದ್ದ 29 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಪಕ್ಷವು ಗೆದ್ದುಕೊಂಡಿತು, ಇದು ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ಬರದಂತೆ ಮಾಡಿತು.

ವಿಷ್ಣು ದೇವ ಸಾಯಿ ಅವರು ಕುಂಕುರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 87,604 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಮಾಜಿ ರಾಜ್ಯ ಮುಖ್ಯಸ್ಥರಾದ ದೇವ್ ಸಾಯಿ ಅವರು ಬುಡಕಟ್ಟು ಮುಖವನ್ನು ಆಯ್ಕೆ ಮಾಡಿದರೆ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಮೊದಲ ಆಯ್ಕೆಯಾಗುತ್ತಾರೆ ಎಂದು ಊಹಿಸಲಾಗಿತ್ತು.

ವಿಷ್ಣದೇವ್ ಸಾಯ ಅವರು ಈ ಮೊದಲು ಮೋದಿ ಸಂಪುಟದಲ್ಲ ಕೇಂದ್ರ ಉಕ್ಕು ಇಲಾಖೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 16 ನೇ ಲೋಕಸಭೆಯಲ್ಲಿ ಛತ್ತೀಸ್‌ಗಢದ ರಾಯಗಢ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಿಷ್ಣು ದೇವ ಸಾಯಿ ಅವರು 2020ರಿಂದ 2022ರವರೆಗೆ ಛತ್ತೀಸ್‌ಗಢ ಬಿಜೆಪಿ ಅಧಯಕ್ಷರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಯಶಸ್ವಿಯಾಗಿದೆ. ಮಧ್ಯಪ್ರದೇಶವನ್ನು ಭರ್ಜರಿ ಜಯದೊಂದಿಗೆ ಉಳಿಸಿಕೊಂಡಿದೆ. ಇದು ಕೇಸರಿ ಪಕ್ಷವು ಹಿಂದಿಯ ಹೃದಯಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸುವುದಕ್ಕೆ ಕಾರಣವಾಯಿತು ಮತ್ತು 2024 ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊಡ್ಡ ಉತ್ತೇಜನವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Mohan Yadav: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಪ್ರಮಾಣ ವಚನ, ಮೋದಿ ಉಪಸ್ಥಿತಿ

Exit mobile version