ಹೊಸದಿಲ್ಲಿ: ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ವಿಸ್ತಾರ ಏರ್‌ಲೈನ್ಸ್ (Vistara airlines news) ವಿಮಾನದಲ್ಲಿ ಬಹುತೇಕ ಉಸಿರು ನಿಲ್ಲಿಸಿದ ಮಗುವೊಂದಕ್ಕೆ (Vistara flight baby) ಅಗತ್ಯ ವೈದ್ಯಕೀಯ ಕ್ರಮಗಳ ಮೂಲಕ ಜೀವ ಉಳಿಸಿ (Child Rescue) ಕರೆತಂದ ಘಟನೆ ನಡೆದಿದೆ. ಮಗುವಿನ ಜೀವ ಉಳಿಯುವಂತೆ ಮಾಡಿದವರು ಏಮ್ಸ್ (AIIMS delhi) ವೈದ್ಯರು.
ಬೆಂಗಳೂರು- ದಿಲ್ಲಿ ನಡುವೆ ಸಂಚರಿಸುತ್ತಿದ್ದ Vistara Airline flight UK-814- A ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರ ನಡುವೆ ಇದ್ದ 2 ವರ್ಷದ ಮಗುವೊಂದರ ಸ್ಥಿತಿ ಇದ್ದಕ್ಕಿದ್ದಂತೆ ಉಲ್ಬಣಿಸಿತು. ಹೃದಯದ ಸಮಸ್ಯೆ ಹೊಂದಿದ್ದ ಈ ಮಗುವಿಗೆ ಅದಾಗಲೇ ಒಂದು ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ವಿಮಾನ ಮಧ್ಯಮಾರ್ಗದಲ್ಲಿದ್ದಂತೆ ಅದಕ್ಕೆ ಪ್ರಜ್ಞೆ ತಪ್ಪಿತು. ಉಸಿರು ಏರಿಳಿಯದೆ ಮೈ ನೀಲಿಗಟ್ಟಿತು.
ಕೂಡಲೇ ವಿಮಾನದಲ್ಲಿ ತುರ್ತು ಕರೆ ನೀಡಲಾಯಿತು. ವಿಮಾನದಲ್ಲಿ ಪ್ರಯಣಿಸುತ್ತಿದ್ದ ಐವರು ಏಮ್ಸ್ ವೈದ್ಯರು ಕೂಡಲೇ ಸಹಾಯಕ್ಕೆ ಧಾವಿಸಿದರು. ಮಗುವಿನ ನಾಡಿ ಮಿಡಿತ ನಿಂತಿತ್ತು. ದೇಹ ಶೀತಲವಾಗುತ್ತಿತ್ತು. ತುಟಿಗಳು ನೀಲಿಗಟ್ಟಿ, ಉಸಿರು ನಿಂತುಹೋಗಿತ್ತು.
#Always available #AIIMSParivar
— AIIMS, New Delhi (@aiims_newdelhi) August 27, 2023
While returning from ISVIR- on board Bangalore to Delhi flight today evening, in Vistara Airline flight UK-814- A distress call was announced
It was a 2 year old cyanotic female child who was operated outside for intracardiac repair , was… pic.twitter.com/crDwb1MsFM
ಕೂಡಲೇ ವೈದ್ಯರು ಅಗತ್ಯ ಸಿಪಿಆರ್ ಕ್ರಮಗಳನ್ನು ಜರುಗಿಸಿದರು. ವಿಮಾನದಲ್ಲಿ ಲಭ್ಯವಿರುವ ಸೀಮಿತ ಉಪಕರಣಗಳಲ್ಲೇ, ಮಗುವಿಗೆ ತುರ್ತು ಕೇರ್ ಯುನಿಟ್ ಸೃಷ್ಟಿಸಿ, ಐವಿ ಕ್ಯಾನ್ಯುಲಾ ಅಳವಡಿಸಲಾಯಿತು. ಉಸಿರಾಟದ ನಾಳ ಕ್ಲಿಯರ್ ಮಾಡಲಾಯಿತು. ಉಸಿರಾಟವನ್ನು ಮರಳಿಸಲಾಯಿತು. ಆದರೆ ಇದೇ ಹೊತ್ತಿಗೆ ಸಂಭವಿಸಿದ ಇನ್ನೊಂದು ಹೃದಯಾಘಾತ ಮಗುವಿನ ಚಿಕಿತ್ಸೆಯನ್ನು ಇನ್ನಷ್ಟು ಬಿಗಡಾಯಿಸಿತು. ಸುಮಾರು 45 ನಿಮಿಷಗಳ ಹೋರಾಟ, ಸಂಘಟಿತ ಪ್ರಯತ್ನದ, ವೈದ್ಯರ ಪರಿಶ್ರಮದ ಬಳಿಕ ಮಗುವಿನ ಜೀವ ಮರಳಿತು.
ವಿಮಾನವನ್ನು ನಾಗ್ಪುರದಲ್ಲಿಯೇ ಇಳಿಸಿ, ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಹೃದಯ ಹಾಗೂ ಮಕ್ಕಳ ಆರೈಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಮ್ಸ್‌ನ ಈ ಐವರು ವೈದ್ಯರ ಹೆಸರು: ಡಾ. ನವದೀಪ್ ಕೌರ್ (ಎಸ್ಆರ್ ಅರಿವಳಿಕೆ), ಡಾ. ದಮನ್‌ದೀಪ್ ಸಿಂಗ್ (SR ಕಾರ್ಡಿಯಾಕ್ ರೇಡಿಯಾಲಜಿ), ಡಾ. ರಿಷಬ್ ಜೈನ್ (ಮಾಜಿ SR AIIMS ರೇಡಿಯಾಲಜಿ), ಡಾ. ಓಶಿಕಾ (SR OBG), ಡಾ. ಅವಿಚಲ ತಕ್ಸಾಕ್ (ಎಸ್ಆರ್ ಕಾರ್ಡಿಯಾಕ್ ರೇಡಿಯಾಲಜಿ). ವೈದ್ಯರ ಪ್ರಸಂಗಾವಧಾನತೆ, ಸ್ವಾರ್ಥರಹಿತ ಪರಿಶ್ರಮ, ಅನುಭವಸಹಿತ ತುರ್ತು ಚಿಕಿತ್ಸೆಗಳಿಗೆ ಶ್ಲಾಘನೆಯ ಮಹಾಪೂರ ವ್ಯಕ್ತವಾಗಿದೆ.
ಇದನ್ನೂ ಓದಿ: Vistara airlines news : ದೆಹಲಿಯಲ್ಲಿ ವಿಸ್ತಾರ ಏರ್‌ಲೈನ್ಸ್ ಹಾಗೂ ಮತ್ತೊಂದು ವಿಮಾನದ ನಡುವೆ ತಪ್ಪಿದ ಅವಘಡ