Site icon Vistara News

Vistara Airlines news: ವೈದ್ಯರ ಪ್ರಯತ್ನದಿಂದಾಗಿ ವಿಸ್ತಾರ ವಿಮಾನದಲ್ಲಿ ಬದುಕುಳಿದಿದ್ದ ಮಗು ಕೊನೆಗೂ ಉಸಿರು ಚೆಲ್ಲಿತು!

Vistara Airlines news and toddler dies at hospital which was treated early at vistara flights

ನವದೆಹಲಿ: ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ವಿಸ್ತಾರ ಏರ್‌ಲೈನ್ಸ್‌ (Vistara airlines news) ವಿಮಾನದಲ್ಲಿ ಬಹುತೇಕ ಉಸಿರು ನಿಲ್ಲಿಸಿದ ಮಗುವೊಂದಕ್ಕೆ (Vistara flight baby) ಅಗತ್ಯ ವೈದ್ಯಕೀಯ ಕ್ರಮಗಳ ಮೂಲಕ ಏಮ್ಸ್ ವೈದ್ಯರು (AIIMS Delhi Doctors) ಜೀವ ಉಳಿಸಿದ ಮಾನವೀಯ ಘಟನೆ ಭಾರೀ ಸುದ್ದಿಯಾಗಿತ್ತು. ಆದರೆ, ಆ ಮಗು ಮೂರು ದಿನಗಳ ಬಳಿಕ ಈಗ ಮೃತಪಟ್ಟಿದೆ. ಈ ಕುರಿತು ನಾಗ್ಪುರದ ಕಿಮ್ಸ್-ಕಿಂಗ್ಸ್‌ವೇ ಹಾಸ್ಪಿಟಲ್ಸ್ (KIMS-Kingsway Hospitals) ಅಧಿೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಮೂರು ದಿನಗಳ ನಿರಂತರ ಪ್ರಯತ್ನಗಳ ಹೊರತಾಗಿಯೂ 15 ತಿಂಗಳ ಮಗು ಆಗಸ್ಟ್ 31, ಬೆಳಗಿನ ಜಾವ 3.15 ಅಸುನೀಗಿತು. ವಿಮಾನದಲ್ಲಿದ್ದಾಗ ಮತ್ತು ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಗಳಿಗೆ ವರ್ಗಾವಣೆಯ ಸಮಯದಲ್ಲಿ ಮಗವನ್ನು ಬದುಕಿಸುವ ಹಲವಾರು ಪ್ರಯತ್ನಗಳ ಬಳಿಕವೂ ಮಗು ಗಂಭೀರ ಸ್ಥಿತಿಯಲ್ಲಿತ್ತು. ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಏಮ್ಸ್ ವೈದ್ಯರ ತಂಡವು ಈ ಮಗುವಿಗೆ ತುರ್ತು ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ನಾಗ್ಪುರ ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು ಮತ್ತು ಮಗುವನ್ನು ಚಿಕಿತ್ಸೆಗಾಗಿ ಕಿಮ್ಸ್-ಕಿಂಗ್ಸ್ ವೇ ಆಸ್ಪತ್ರೆ ದಾಖಲಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನದು ಘಟನೆ? ಮಗುವಿಗೆ ಏನಾಗಿತ್ತು?

ಬೆಂಗಳೂರು- ದಿಲ್ಲಿ ನಡುವೆ ಸಂಚರಿಸುತ್ತಿದ್ದ Vistara Airline flight UK-814- A ವಿಮಾನದಲ್ಲಿ 15 ತಿಂಗಳ ಮಗೊಂದು ತೀವ್ರ ಅಸ್ವಸ್ಥಗೊಂಡಿತ್ತು. ಹೃದಯದ ಸಮಸ್ಯೆ ಹೊಂದಿದ್ದ ಈ ಮಗುವಿಗೆ ಅದಾಗಲೇ ಒಂದು ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ವಿಮಾನ ಮಧ್ಯಮಾರ್ಗದಲ್ಲಿದ್ದಂತೆ ಅದಕ್ಕೆ ಪ್ರಜ್ಞೆ ತಪ್ಪಿತು. ಉಸಿರು ಏರಿಳಿಯದೆ ಮೈ ನೀಲಿಗಟ್ಟಿತು. ಕೂಡಲೇ ವಿಮಾನದಲ್ಲಿ ತುರ್ತು ಕರೆ ನೀಡಲಾಯಿತು. ವಿಮಾನದಲ್ಲಿ ಪ್ರಯಣಿಸುತ್ತಿದ್ದ ಐವರು ಏಮ್ಸ್‌ ವೈದ್ಯರು ಕೂಡಲೇ ಸಹಾಯಕ್ಕೆ ಧಾವಿಸಿದರು. ಮಗುವಿನ ನಾಡಿ ಮಿಡಿತ ನಿಂತಿತ್ತು. ದೇಹ ಶೀತಲವಾಗುತ್ತಿತ್ತು. ತುಟಿಗಳು ನೀಲಿಗಟ್ಟಿ, ಉಸಿರು ನಿಂತುಹೋಗಿತ್ತು.

ಈ ಸುದ್ದಿಯನ್ನೂ ಓದಿ: Birth On Plane | ಗರ್ಭಿಣಿ ಎಂಬುದೂ ಗೊತ್ತಿರದ ಮಹಿಳೆ ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮವಿತ್ತಳು!

ಕೂಡಲೇ ವೈದ್ಯರು ಅಗತ್ಯ ಸಿಪಿಆರ್‌ ಕ್ರಮಗಳನ್ನು ಜರುಗಿಸಿದರು. ವಿಮಾನದಲ್ಲಿ ಲಭ್ಯವಿರುವ ಸೀಮಿತ ಉಪಕರಣಗಳಲ್ಲೇ, ಮಗುವಿಗೆ ತುರ್ತು ಕೇರ್‌ ಯುನಿಟ್‌ ಸೃಷ್ಟಿಸಿ, ಐವಿ ಕ್ಯಾನ್ಯುಲಾ ಅಳವಡಿಸಲಾಯಿತು. ಉಸಿರಾಟದ ನಾಳ ಕ್ಲಿಯರ್‌ ಮಾಡಲಾಯಿತು. ಉಸಿರಾಟವನ್ನು ಮರಳಿಸಲಾಯಿತು. ಆದರೆ ಇದೇ ಹೊತ್ತಿಗೆ ಸಂಭವಿಸಿದ ಇನ್ನೊಂದು ಹೃದಯಾಘಾತ ಮಗುವಿನ ಚಿಕಿತ್ಸೆಯನ್ನು ಇನ್ನಷ್ಟು ಬಿಗಡಾಯಿಸಿತು. ಸುಮಾರು 45 ನಿಮಿಷಗಳ ಹೋರಾಟ, ಸಂಘಟಿತ ಪ್ರಯತ್ನದ, ವೈದ್ಯರ ಪರಿಶ್ರಮದ ಬಳಿಕ ಮಗುವಿನ ಜೀವ ಮರಳಿತು. ವಿಮಾನವನ್ನು ನಾಗ್ಪುರದಲ್ಲಿಯೇ ಇಳಿಸಿ, ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಹೃದಯ ಹಾಗೂ ಮಕ್ಕಳ ಆರೈಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version