Site icon Vistara News

VISTARA TOP 10 NEWS: ಪಟಾಕಿ ದುರಂತ ಸಿಐಡಿ ತನಿಖೆಗೆ; ಪ್ಯಾಲೆಸ್ತೀನ್ ವಿರುದ್ಧ ಯುದ್ಧ ಘೋಷಿಸಿದ ಇಸ್ರೇಲ್ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1. ಅತ್ತಿಬೆಲೆ ಪಟಾಕಿ ದುರಂತದ ಸಿಐಡಿ ತನಿಖೆ: ಸಿದ್ದರಾಮಯ್ಯ ಘೋಷಣೆ
ಆನೇಕಲ್/ಬೆಂಗಳೂರು: ಆನೇಕಲ್‌ನ ಅತ್ತಿಬೆಲೆ ಪಟಾಕಿ ಗೋದಾಮು ಅಗ್ನಿ ದುರಂತ (Attibele Fire Accident) ಪ್ರಕರಣದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು (Safety measures) ತೆಗೆದುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ, ಈ ಪ್ರಕರಣದ ಸಂಪೂರ್ಣ ತನಿಖೆ ಹೊಣೆಯನ್ನು ಸಿಐಡಿಗೆ (CID investigation) ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ :  ರಾಜ್ಯಾದ್ಯಂತ ಪಟಾಕಿ ಗೋದಾಮುಗಳ ಸುರಕ್ಷತಾ ಸಮೀಕ್ಷೆ: ಡಿ.ಕೆ. ಶಿವಕುಮಾರ್

2, ಪ್ಯಾಲೆಸ್ತೀನ್ ಮೇಲೆ ಅಧಿಕೃತ ಯುದ್ಧ ಘೋಷಿಸಿದ ಇಸ್ರೇಲ್! ವೈಮಾನಿಕ ದಾಳಿ ಶುರು
ಜೆರುಸಲೇಂ: ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ರಣಭೀಕರ ಸಮರ (Israel Palestine War) ಸಾರಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳ ದಾಳಿ ಜತೆಗೆ ನೂರಾರು ಉಗ್ರರು ಇಸ್ರೇನ್‌ ನಗರಗಳಲ್ಲಿ ಗುಂಡಿನ ದಾಳಿ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೆ ಸಿಕ್ಕಸಿಕ್ಕವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್‌ ಉಗ್ರರ (Hamas Terrorists) ದಾಳಿಗೆ ಇದುವರೆಗೆ ಇಸ್ರೇಲ್‌ನ 500ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. 1800 ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, “ಹಮಾಸ್‌ ಉಗ್ರರು ಇಸ್ರೇಲ್‌ನ 100ಕ್ಕೂ ಅಧಿಕ ನಾಗರಿಕರು ಹಾಗೂ ಯೋಧರನ್ನು ಅಪಹರಣ ಮಾಡಿದ್ದಾರೆ” ಎಂದು ಇಸ್ರೇಲ್‌ ತಿಳಿಸಿದೆ. ಈ ಮಧ್ಯೆ, ಹಮಾಸ್ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲ್, ಗಾಜಾಪಟ್ಟಿಯಲ್ಲಿ ಅಧಿಕೃತವಾಗಿ ಯುದ್ಧವನ್ನು ಘೋಷಣೆ ಮಾಡಿದೆ ಮತ್ತು ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಇಸ್ರೇಲ್‌ನಲ್ಲಿ ಸಿಲುಕಿದ್ದ ನಟಿ ನುಶ್ರತ್ ಭರುಚ್ಚಾ ಅವರು ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಹಮಾಸ್ ಜತೆಗೆ ಹೆಜ್ಬುಲ್ಲಾ ಉಗ್ರರೂ ಕೂಡಾ ದಾಳಿ ಮಾಡುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಹಮಾಸ್‌ ದಾಳಿಗೆ 300 ಸಾವು; ಇಸ್ರೇಲ್‌ನಲ್ಲಿ ಭಾರತದ ವಿದ್ಯಾರ್ಥಿಗಳು ಅತಂತ್ರ!
ಇಸ್ರೇಲ್‌ನಲ್ಲಿನ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್‌
ಏನಿದು ಐರನ್ ಡೋಮ್? ಇಸ್ರೇಲ್‌ನ ಈ ವ್ಯವಸ್ಥೆ ಕ್ಷಿಪಣಿ ದಾಳಿಯನ್ನು ಹೇಗೆ ತಡೆಯುತ್ತದೆ?

3. 5 ಲಕ್ಷ ಹಳ್ಳಿಗಳಿಗೆ ಅಕ್ಷತೆ ರವಾನೆ! ರಾಮ ದೇವರ ಪ್ರತಿಷ್ಠಾಪನೆಯ ವಿವರ ಬಹಿರಂಗ
ನವದೆಹಲಿ: ಅಯೋಧ್ಯೆಯಲ್ಲಿ (Ayodhya) ಭವ್ಯವಾದ ರಾಮಮಂದಿರ (Ram Temple) ನಿರ್ಮಾಣದ ಉಸ್ತುವಾರಿ ವಹಿಸಿರುವ ಟ್ರಸ್ಟ್ (Shri Ram Janmabhoomi Teerth Kshetra Trust) ಮುಂದಿನ ಜನವರಿಯಲ್ಲಿ ನಡೆಯಲಿರುವ ದೇವರ ಪ್ರತಿಷ್ಠಾಪನೆ (consecration ceremony of the deity) ಸಮಾರಂಭದ ಮೊದಲು ದೇಶದಾದ್ಯಂತ 500,000 ಹಳ್ಳಿಗಳಿಗೆ ರಾಮ ಜನ್ಮಭೂಮಿಯಲ್ಲಿ ದೇವರಿಗೆ ಅರ್ಪಿಸುವ ಪವಿತ್ರ ಧಾನ್ಯದ ಅಕ್ಕಿ (ಅಕ್ಷತೆ) ವಿತರಿಸಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

4. ಅ.9ರಿಂದ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಮೆಟ್ರೋ ಸೇವೆ
ನೇರಳೆ ಮಾರ್ಗದ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್ ನ್ಯೂಸ್ ನೀಡಿದೆ. ನೇರಳೆ ಮಾರ್ಗದ ಚಲ್ಲಘಟ್ಟ-ವೈಟ್‌ಫೀಲ್ಡ್‌ ನಡುವೆ ಪೂರ್ಣ ಪ್ರಮಾಣದ ವಾಣಿಜ್ಯ ಸೇವೆ ಅ.9ರಂದು ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದ್ದು, ಇದರಿಂದ ವೈಟ್‌ಫೀಲ್ಡ್‌ ಭಾಗಕ್ಕೆ ತೆರಳುವ ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ನೆರವಾಗಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

5.ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಿ; ಮಠಾಧೀಶರ ಹಕ್ಕೊತ್ತಾಯ
ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡಲಾಯಿತು. ಮೀಸಲಾತಿ (OBC Reservation) ಬಗ್ಗೆ ಕೇಂದ್ರ ‌ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮಠಾಧೀಶರು ಹಾಗೂ ಸಮಾಜದ ಮುಖಂಡರು ಒತ್ತಾಯ ಮಾಡಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

6. ವಿಶ್ವ ಕಪ್​ನಲ್ಲಿ ಭಾರತ ತಂಡದ ಶುಭಾರಂಭ, ಆಸ್ಟ್ರೇಲಿಯಾ ವಿರುದ್ಧ ಗೆಲುವು ತಂದುಕೊಟ್ಟ ಕೊಹ್ಲಿ, ರಾಹುಲ್​
ಚೆನ್ನೈ: ಸ್ಟಾರ್ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ (85) ಹಾಗೂ ಕೆ. ಎಲ್​ ರಾಹುಲ್​ (ಅಜೇಯ 97) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್​ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Ind vs Aus) ವಿರುದ್ಧ 6 ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ತನ್ನ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ನಲ್ಲಿ ಶುಭಾರಂಭ ಮಾಡಿತು. ಬಲಿಷ್ಠ ತಂಡವನ್ನೇ ಮಣಿಸಿ ಪ್ರಶಸ್ತಿ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಿತು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

7. ಬಿಗ್​ ಬಾಸ್​​ ಹತ್ತನೇ ಸೀಸನ್​ ಗ್ರ್ಯಾಂಡ್​ ಓಪನ್​, ಸ್ನೇಕ್ ಶ್ಯಾಮ್​ ಸೇರಿ ಹಲವರಿಂದ ದೊಡ್ಮನೆ ಪ್ರವೇಶ
ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ನ ಗ್ರ್ಯಾಂಡ್​ ಓಪನಿಂಗ್​ ಭಾನುವಾರ ಸಂಜೆ ನಡೆಯಿತು. ಕಿಚ್ಚ ಸುದೀಪ್​ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಹಲವರು ದೊಡ್ಮನೆ ಪ್ರವೇಶ ಮಾಡಿದರು. ಸ್ಪರ್ಧಿಗಳು ವೇದಿಕೆಗೆ ಬಂದ ಬಳಿಕ ವೋಟಿಂಗ್ ಮೂಲಕ ಅವರನ್ನು ಆಯ್ಕೆ ಮಾಡಲಾಯಿತು. ಬಿಗ್​ಬಾಸ್​ ಕುರಿತ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

8. 2024ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ಜತೆ ಇನ್ನೆಂದೂ ಕೈಜೋಡಿಸಲ್ಲ: ಎಚ್‌ಡಿಕೆ
ರಾಮನಗರ: ಪಬ್ಲಿಕ್‌ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು. ಡಿ.ಕೆ. ಶಿವಕುಮಾರ್‌ ಜತೆ ಇನ್ನೆಂದೂ ಕೈಜೋಡಿಸಲಾರೆ. ಅವರು ತಿಹಾರ್‌ ಜೈಲಿಗೆ ಹೋಗುವುದು ಖಚಿತ. ಇನ್ನು 2024ಕ್ಕೆ ವಿಧಾನಸಭಾ ಚುನಾವಣೆ (Assembly election) ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (Deputy CM DK Shivakumar) ಅವರ ವಿರುದ್ಧ ಹರಿಹಾಯ್ದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಮಹತ್ತರ ಬದಲಾವಣೆಗಳಾಗಲಿವೆ ಎಂಬ ಸುಳಿವನ್ನು ನೀಡಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಜೆಡಿಎಸ್ – ಬಿಜೆಪಿ ಮೈತ್ರಿಗೆ ರಾಮನಗರ ಮುಖಂಡರ ಸಮ್ಮತಿ; ಡಿವಿಜನ್‌ ಮಟ್ಟದ ಸಭೆಗೆ ಎಚ್‌ಡಿಕೆ ಮುಂದು

9. ಅಫಘಾನಿಸ್ತಾನದಲ್ಲಿ ಸರಣಿ ಭೂಕಂಪ, ಮೃತರ ಸಂಖ್ಯೆ 2000ಕ್ಕೆ ಏರಿಕೆ
ಕಾಬೂಲ್: ಅಫಘಾನಿಸ್ತಾನದ (Afghanistan) ಹೆರಾತ್‌ನಲ್ಲಿ (Herat) ಶನಿವಾರ ಸಂಭವಿಸಿದ ಸರಣಿ ಭೂಕಂಪದಲ್ಲಿ (Afghan Earthquake) ಮೃತಪಟ್ಟವರ ಸಂಖ್ಯೆಯು 2000ಕ್ಕೆ ಏರಿಕೆಯಾಗಿದೆ. ಅಲ್ಲದೇ, ಇನ್ನೂ ಸಾಕಷ್ಟು ಜನರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿದೆ. ತಾಲಿಬಾನ್ (Taliban Administration) ಆಡಳಿತದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮಾನವೀಯ ಬಿಕ್ಕಟ್ಟು ಎದುರಿಸುತ್ತಿರುವ ಅಫಘಾನಿಸ್ತಾನಕ್ಕೆ ಈ ಭೂಕಂಪವು ಭಾರೀ ಹೊಡೆತ ನೀಡಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

10. ಟ್ರಕ್‌ ಕ್ಯಾಬಿನ್‌ನಲ್ಲಿ ಹೆಬ್ಬಾವು ಪ್ರತ್ಯಕ್ಷ; ವಾಹನ ಚಲಾಯಿಸುವ ಮುನ್ನ ಎಚ್ಚರ ಎಂದ ನೆಟ್ಟಿಗರು
ನೋಯ್ಡಾ: ಹಾವು ಎಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ? ಅದರಲ್ಲೂ ಹೆಬ್ಬಾವು (Python) ಕಂಡರೆ ಮಾರು ದೂರ ಓಡಿ ಹೋಗುವವರೇ ಹೆಚ್ಚು. ಹಿಂದೆಲ್ಲ ಕಾಡು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದ ಹಾವುಗಳು ಇತ್ತೀಚೆಗೆ ನಗರ ಪ್ರದೇಶಗಳಿಗೂ ಲಗ್ಗೆ ಇಡುತ್ತಿವೆ. ಫ್ಲ್ಯಾಟ್‌, ಬೈಕ್‌ ನೀಟಿನ ಅಡಿ, ಶೂ ಒಳಗೆ ಹೀಗೆ ಹಾವುಗಳ ಅಡಗುತಾಣ ಹಲವು. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಟ್ರಕ್‌ ಒಂದರಲ್ಲಿ 8 ಅಡಿ ಉದ್ದದ ಬೃಹತ್‌ ಗಾತ್ರದ ಹೆಬ್ಬಾವು ಕಂಡುಬಂದಿದ್ದು, ಅದನ್ನು ಪೊಲೀಸರು ರಕ್ಷಿಸಿದ ವಿಡಿಯೊ ವೈರಲ್‌ (Viral Video) ಆಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

Exit mobile version