ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ೧೯೯೦ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ಹಿಂಸಾಚಾರದ ಕುರಿತ ಕಥಾಹಂದರವಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದೇಶಾದ್ಯಂತ ಹಿಟ್ ಆದ, ಕೆಲವೊಂದಿಷ್ಟು ವಿವಾದಕ್ಕೂ ಕಾರಣವಾದ ಬೆನ್ನಲ್ಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ದಿ ಕಾಶ್ಮೀರ್ ಫೈಲ್ಸ್ ಪಾರ್ಟ್ ೨ ಘೋಷಿಸಿದ್ದಾರೆ.
ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ ಜ್ಯೂರಿ, ಇಸ್ರೇಲ್ ಸಿನಿಮಾ ನಿರ್ದೇಶಕ ನಡಾವ್ ಲ್ಯಾಪಿಡ್ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ‘ಪ್ರಪಗಂಡ’ ಇರುವ ಸಿನಿಮಾ ಎಂದು ಟೀಕಿಸಿದ ಬೆನ್ನಲ್ಲೇ ಅಗ್ನಿಹೋತ್ರಿ ಅವರು, “ದಿ ಕಾಶ್ಮೀರ್ ಫೈಲ್ಸ್: ಅನ್‌ರಿಪೋರ್ಟೆಡ್” ಎಂಬ ಸಿನಿಮಾ ಘೋಷಿಸಿದ್ದಾರೆ.
ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸಾಚಾರದ ಸಂಪೂರ್ಣ ಚಿತ್ರ ಇದರಲ್ಲಿ ಇರಲಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. ಆದರೆ, ಯಾವಾಗ ಸಿನಿಮಾ ಸೆಟ್ಟೇರುತ್ತದೆ, ಪಾತ್ರಧಾರಿಗಳು ಸೇರಿ ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ. ದಿ ಕಾಶ್ಮೀರ್ ಫೈಲ್ಸ್ ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಉತ್ತಮ ಪ್ರದರ್ಶನ ಕಂಡಿತ್ತು.
ಇದನ್ನೂ ಓದಿ | The Kashmir Files | ಕಾಶ್ಮೀರ್ ಫೈಲ್ಸ್‌ಗೆ ನಿರ್ಮಾಪಕನ ಅವಹೇಳನ: ಭಾರತೀಯರ ಕ್ಷಮೆಯಾಚಿಸಿದ ಇಸ್ರೇಲ್ ರಾಯಭಾರಿ