ಮುಂಬೈ: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ತೊಟ್ಟಿದ್ದು, ಕೇಸರಿಯನ್ನು ಬೇಷರಂ ಎಂಬುದಾಗಿ ಕರೆಯಲಾಗಿದೆ ಎಂಬುದು ದೇಶಾದ್ಯಂತ ವಿವಾದ ಉಂಟಾಗಿದೆ. ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿವೆ. ಇನ್ನು, ಬೇಷರಂ ಹಾಡನ್ನು ಟೀಕಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಟೀಕಿಸಿದ್ದರು. ಆದರೀಗ, ವಿವೇಕ್ ಅಗ್ನಿಹೋತ್ರಿ ಅವರ ಪುತ್ರಿಯೇ (Vivek Agnihotri Daughter) ಕೇಸರಿ ತುಂಡುಡುಗೆ ತೊಟ್ಟು ದುಬೈ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದು, ನಿರ್ದೇಶಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ನಿರ್ದೇಶಕರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.
ವಿವೇಕ್ ಅಗ್ನಿಹೋತ್ರಿ ಪುತ್ರಿ ಮಲ್ಲಿಕಾ ಅಗ್ನಿಹೋತ್ರಿ ಅವರು ದುಬೈನ ಬೀಚ್‌ನಲ್ಲಿ ಗೆಳತಿಯರೊಂದಿಗೆ ನಲಿದಾಡುತ್ತಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅವರು ಕೇಸರಿ ತುಂಡುಡುಗೆ ಧರಿಸಿರುವುದು ಈಗ ಟ್ರೋಲ್ ಆಗುತ್ತಿದೆ. ಜನ ವಿವೇಕ್ ಅಗ್ನಿಹೋತ್ರಿ ಅವರನ್ನು ಉಲ್ಲೇಖಿಸಿ ವ್ಯಂಗ್ಯ ಮಾಡಿದ್ದಾರೆ. ಹಾಗೆಯೇ,
ಬೇಷರಂ ರಂಗ್ ಹಾಡಿನ ವಿಡಿಯೊವನ್ನು ಬಾಲಕಿಯೊಬ್ಬಳು ಟೀಕಿಸುತ್ತಿದ್ದ, ತುಂಡುಡುಗೆಯನ್ನು ವಿರೋಧಿಸುತ್ತಿದ್ದ ವಿಡಿಯೊವನ್ನು ವಿವೇಕ್ ಅಗ್ನಿಹೋತ್ರಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಇದಕ್ಕೂ ಜನ ತಿರುಗೇಟು ನೀಡಿದ್ದು, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೇಟ್ ಸ್ಟೋರಿ ಸಿನಿಮಾದ ಪೋಸ್ಟರ್‌ಅನ್ನು ಷೇರ್ ಮಾಡಿದ್ದಾರೆ. ಹೇಟ್ ಸ್ಟೋರಿ ಪೋಸ್ಟರ್‌ನಲ್ಲಿ ಹೀರೊಯಿನ್ ಟಾಪ್‌ಲೆಸ್ ಆಗಿರುವ ಫೋಟೊಗಳನ್ನು ರಿಟ್ವೀಟ್ ಮಾಡಿ ಟೀಕಿಸಿದ್ದಾರೆ. ಒಟ್ಟಿನಲ್ಲಿ ಬೇಷರಂ ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ವಿವೇಕ್ ಅಗ್ನಿಹೋತ್ರಿ ಅವರ ಇಬ್ಬಂದಿತನವನ್ನು ಜನ ಬಯಲು ಮಾಡಿದ್ದಾರೆ.