ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಶನಿವಾರ ಶಾಂತಿಯುತವಾಗಿ ಮತದಾನ (Himachal Pradesh Polls) ನಡೆದಿದ್ದು, ಶೇ.67ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಿದರು. ಇದರೊಂದಿಗೆ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಡಿಸೆಂಬರ್ 8ರಂದು ಪ್ರಕಟವಾಗುವ ಫಲಿತಾಂಶ ಕುತೂಹಲ ಕೆರಳಿಸಿದೆ.
ಒಟ್ಟು 68 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 412 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಮತ್ತೆ ಗದ್ದುಗೆ ಏರುವ ತವಕವಿದ್ದರೆ, ಕಾಂಗ್ರೆಸ್‌ಗೆ ಪುಟಿದೇಳುವ ವಿಶ್ವಾಸವಿದೆ. ಅತ್ತ, ಪಂಜಾಬ್‌ನಂತೆ ಹಿಮಾಚಲ ಪ್ರದೇಶದಲ್ಲೂ ಆಪ್ ಪ್ರಾಬಲ್ಯ ಸಾಧಿಸಲು ವಿವಿಧ ರಣತಂತ್ರ ರೂಪಿಸಿದೆ. ಹಾಗಾಗಿ, ಫಲಿತಾಂಶದ ಮೇಲೆ ಎಲ್ಲರ ಕಣ್ಣು ನಟ್ಟಿವೆ.
ಜೈರಾಮ್ ಠಾಕೂರ್ ಸಿಎಂ ಆಗಿ ಮುಂದುವರಿಕೆ ಎಂದ ನಡ್ಡಾ
ಜೈರಾಮ್ ಠಾಕೂರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ. “ಜೈರಾಮ್ ಠಾಕೂರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ” ಎಂದು ತಿಳಿಸಿದ್ದಾರೆ. ಜೈರಾಮ್ ಠಾಕೂರ್ ಬದಲು ಬೇರೆಯವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಡ್ಡಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | Himachal Pradesh Polls | ವಿಶ್ವದಲ್ಲೇ ಅತಿ ಎತ್ತರದ ಸ್ಥಳದಲ್ಲಿ ಮತಗಟ್ಟೆ ಹೊಂದಿದ ರಾಜ್ಯ ಹಿಮಾಚಲ ಪ್ರದೇಶ; ಅಲ್ಲಿರುವ ಮತದಾರರು ಎಷ್ಟು?