Site icon Vistara News

Wagh Nakh: ಭಾರತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ ನಖ’ ಆಯುಧ ವಾಪಸ್! ಏನಿದರ ಮಹತ್ವ?

Wagh nakh of Chhatrapati Shivaji set to return India

ಮುಂಬೈ: ಲಂಡನ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji) ವಾಘ ನಖ(Wagh Nakh – ಹುಲಿಯ ಪಂಜ) ಆಯುಧವು ಭಾರತಕ್ಕೆ ವಾಪಸ್ ಬರಲಿದೆ. ಶಿವಾಜಿ ಮಹಾರಾಜರು 1659ರಲ್ಲಿ ಬಿಜಾಪುರದ ಸುಲ್ತಾನ್ ಸೇನಾಧಿಪತಿ ಅಫ್ಜಲ್ ಖಾನ್ (Bijapur Sultanate Afzal Khan) ಅವರನ್ನು ಈ ವಾಘ ನಖ ಬಳಸಿಕೊಂಡು ಹತ್ಯೆ ಮಾಡಿದದ್ದರು. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ (London Victoria and albert museum) ಹುಲಿ ಪಂಜದ ಆಯುಧವನ್ನು ಮರಳಿ ಭಾರತಕ್ಕೆ ತರಲಾಗುತ್ತಿದೆ.

ವಾಘ ನಖ ವಾಪಸ್ ತರಿಸಿಕೊಳ್ಳುವ ಪ್ರಕ್ರಿಯೆ ಪೂರೈಸಲು ಮಹಾರಾಷ್ಟ್ರ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಆಗಮಿಸಲಿದ್ದಾರೆ. ಈ ವೇಳೆ ಅವರು, ಮ್ಯೂಸಿಯಮ್ ಜತೆಗೆ ಒಪ್ಪಂದಕ್ಕೆ ಅಂಕಿತ ಹಾಕಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿಯನ್ನೂ ಓದಿ: Shivaji Maharaj Jayanti: ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಸ್ಫೂರ್ತಿ ಎಂದ ಪ್ರಧಾನಿ ನರೇಂದ್ರ ಮೋದಿ

ಮೊದಲ ಹಂತದಲ್ಲಿ ನಾವು ವಾಘ ನಖ ಆಯುಧವನ್ನು ವಾಪಸ್ ತರುತ್ತಿದ್ದೇವೆ. ಇದಕ್ಕಾಗಿ ತಿಳಿವಳಿಕಾ ಒಪ್ಪಂದಕ್ಕೆ ಅಂಕಿತ ಹಾಕುತ್ತಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಬಗೆದ ದಿನದಂದೇ ಆಯುಧವನ್ನು ವಾಪಸ್ ಕರೆ ತರುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತಕ್ಕೆ ವಾಪಸ್ ತರಲಾಗುತ್ತಿರುವ ಈ ವಾಘ ನಖ ಆಯುಧವನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಮ್‌ನಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

ಮರಾಠ ಸಾಮ್ರಜ್ಯವನ್ನು ವಿಸ್ತರಿಸುವಲ್ಲಿ 1659ರಲ್ಲಿ ನಡೆದ ಪ್ರತಾಪಗಢ ಯುದ್ಧದ ಗೆಲವು ನಿರ್ಣಯಾಕ ಪಾತ್ರವನ್ನು ವಹಿಸಿದೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮರಾಠರು, ಬಿಜಾಪುರದ ಆದಿಲ್ ಶಾಹಿ ಪಡೆಯ ನೇತೃತ್ವ ವಹಿಸಿದ್ದ ಅಫ್ಜಲ್ ಖಾನ್ ಸೇನೆಯನ್ನು ಸೋಲಿಸುತ್ತಾರೆ. ಆ ಮೂಲಕ ಛತ್ರಪತಿ ಶಿವಾಜಿ ಅವರು ಸೇನಾ ನಿಪುಣರಾಗಿ ಗುರುತಿಸಿಕೊಳ್ಳುತ್ತಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version