Site icon Vistara News

India Canada Row: ‘ಖಾಸಗಿ ಮಾತುಕತೆ ನಡೆಸೋಣ ಬನ್ನಿ’; ಎದುರೇಟಿಗೆ ಏದುಸಿರು ಬಿಟ್ಟ ಕೆನಡಾ ಮನವಿ

Narendra Modi And Justin Trudeau

ಒಟ್ಟಾವ: ‘ಕೆನಡಾದಲ್ಲಿರುವ ಭಾರತ ವಿರೋಧಿ ಕೃತ್ಯಗಳನ್ನು ನಿಗ್ರಹಿಸಿ’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದ ಒಂದೇ ಒಂದು ಮಾತಿನಿಂದ ಇಲ್ಲಸಲ್ಲದ ಆರೋಪ ಮಾಡಿದ ಕೆನಡಾಗೆ (India Canada Row) ಭಾರತ ಹಲವು ರೀತಿಯಲ್ಲಿ ಎದುರೇಟು ನೀಡಿದ ಬಳಿಕ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಕೊನೆಗೂ ಥಂಡಾ ಹೊಡೆದಿದ್ದಾರೆ. “ಭಾರತದ ಜತೆ ನಾವು ಖಾಸಗಿಯಾಗಿ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಲು ಬಯಸುತ್ತೇವೆ” ಎಂದು ಕೆನಡಾ ಸಚಿವರೊಬ್ಬರು ಪ್ರಸ್ತಾಪಿಸಿರುವುದೇ ಕೆನಡಾ ಮೆತ್ತಗಾಗಿರುವುದಕ್ಕೆ ಸಾಕ್ಷಿಯಾಗಿದೆ.

“ಭಾರತದ ಜತೆಗಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಕೆನಡಾ ಬಯಸುತ್ತದೆ. ನಾವು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರಿಗಳ ಸುರಕ್ಷತೆಯು ಕೆನಡಾ ಆದ್ಯತೆಯಾಗಿದೆ. ಹಾಗೆಯೇ, ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಖಾಸಗಿಯಾಗಿ ಮಾತುಕತೆ ನಡೆಸುವುದು ಕೆನಡಾ ಉದ್ದೇಶವಾಗಿದೆ. ಇದಕ್ಕಾಗಿ ಭಾರತ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ” ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜೋಲಿ (Melanie Joly) ಹೇಳಿದ್ದಾರೆ.

ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಾಗ ಜಸ್ಟಿನ್‌ ಟ್ರುಡೋ ಜತೆ ಮಾತುಕತೆ ನಡೆಸಿದ್ದ ಪ್ರಧಾನಿ ಮೋದಿ, ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂಬುದಾಗಿ ಕೋರಿದ್ದರು. ಇಷ್ಟಕ್ಕೇ ಮುನಿಸಿಕೊಂಡ ಜಸ್ಟಿನ್‌ ಟ್ರುಡೋ, ಕೆನಡಾದಲ್ಲಿ ಕಳೆದ ಜೂನ್‌ನಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಹಾಗೆಯೇ, ಕೆನಡಾದಲ್ಲಿರುವ ಭಾರತದ ರಾಯಭಾರಿಗಳ ಉಚ್ಚಾಟನೆ, ಭಾರತದ ಜತೆಗಿನ ಒಪ್ಪಂದ ಮುಂದೂಡಿಕೆ ಸೇರಿ ಹಲವು ಉದ್ಧಟತನದ ನಿರ್ಧಾರ ತೆಗೆದುಕೊಂಡಿದ್ದರು.

ಇದನ್ನೂ ಓದಿ: India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

ಇದಕ್ಕೆ ಸರಿಯಾಗಿಯಾಗಿಯೇ ತಿರುಗೇಟು ನೀಡಿದ್ದ ಕೇಂದ್ರ ಸರ್ಕಾರವು, ಭಾರತದಲ್ಲಿರುವ ಕೆನಡಾ ರಾಯಭಾರಿಗಳನ್ನು ಉಚ್ಚಾಟನೆ ಮಾಡಿತ್ತು. ಹಾಗೆಯೇ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಮಾಡಿರುವ ಆರೋಪಗಳಿಗೆ ಸಾಕ್ಷ್ಯ ಒದಗಿಸಬೇಕು ಎಂದು ಆಗ್ರಹಿಸಿತ್ತು. ಹಾಗೆಯೇ, ಭಾರತದಲ್ಲಿರುವ ಕೆನಡಾದ 41 ರಾಜತಾಂತ್ರಿಕ ಅಧಿಕಾರಿಗಳು ಅಕ್ಟೋಬರ್‌ 10ರೊಳಗೆ ವಾಪಸ್‌ ಕರೆದುಕೊಳ್ಳಿ ಎಂಬುದಾಗಿಯೂ ಗಡುವು ನೀಡಿದೆ. ಇದರ ಬೆನ್ನಲ್ಲೇ, “ನಾವು ಇನ್ನುಮುಂದೆ ಭಾರತದ ಜತೆ ಜಗಳ ಆಡಲ್ಲ” ಎಂದು ಜಸ್ಟಿನ್‌ ಟ್ರುಡೋ ಅವರೇ ಹೇಳಿದ್ದಾರೆ.

Exit mobile version