ಬೆಂಗಳೂರು: ಭಾರತದ ಐತಿಹಾಸಿಕ ಬಾಹ್ಯಾಕಾಶ ಯೋಜನೆಯಾಗಿರುವ ಚಂದ್ರಯಾನ 3 (Chandrayaan 3) ಕೆಲವೇ ಕ್ಷಣಗಳಲ್ಲಿ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರನ ದಕ್ಷಿಣ ಧ್ರುವದಲ್ಲಿ (south pole) ಸಲೀಸಾಗಿ (soft landing) ಲ್ಯಾಂಡ್ ಆಗುವ ನಿರೀಕ್ಷೆಯಿದೆ. ವಿಕ್ರಮ್ ಲ್ಯಾಂಡರ್ (Vikram Lander) ಮತ್ತು ರೋವರ್ ಚಂದಿರನ ನೆಲಸ್ಪರ್ಶ ಮಾಡುವ ಲೈವ್ ಅನ್ನು ನೀವು ಈ ಕೆಳಗಿನ ತಾಣಗಳಲ್ಲಿ ವೀಕ್ಷಿಸಬಹುದು.
ಚಂದ್ರಯಾನದ ಲ್ಯಾಡಿಂಗ್ ಪ್ರಕ್ರಿಯೆಯನ್ನು ವಿಸ್ತಾರ ನ್ಯೂಸ್ನ ಯೂಟ್ಯೂಬ್ ಚಾನೆಲ್ ಮೂಲಕ ನೇರವಾಗಿ ವೀಕ್ಷಣೆ ಮಾಡಬಹುದು. ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರತಿ ಕ್ಷಣವನ್ನೂ ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಐತಿಹಾಸಿಕ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಲಿದೆ. ಇದನ್ನು ಸಂಜೆ 5:27ರಿಂದ ಇಲ್ಲಿ ನೋಡಬಹುದು
- ISRO ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ ಅಥವಾ ಹುಡುಕಿ- https://isro.gov.in
- ISRO ಅಧಿಕೃತ YouTube ಚಾನಲ್: ಇಲ್ಲಿ ಕ್ಲಿಕ್ ಮಾಡಿ ಅಥವಾ ಹುಡುಕಿ- https://www.youtube.com/watch?v=DLA_64yz8Ss
- ISRO ಅಧಿಕೃತ Facebook ಚಾನಲ್: ಇಲ್ಲಿ ಕ್ಲಿಕ್ ಮಾಡಿ ಅಥವಾ ಹುಡುಕಿ- https://www.facebook.com/ISRO
- ಡಿಡಿ ರಾಷ್ಟ್ರೀಯ ಟಿವಿ
- ವಿಸ್ತಾರ ನ್ಯೂಸ್ ಸೇರಿದಂತೆ ಹಲವು ಟಿವಿ ಚಾನೆಲ್ಗಳು
ಭಾರತದ ಈ ಐತಿಹಾಸಿಕ ಕ್ಷಣಕ್ಕೆ ಇನ್ನು ಕೆಲವೇ ನಿಮಿಷಗಳು ಉಳಿದಿವೆ. ಲ್ಯಾಂಡರ್ ಮಾಡ್ಯೂಲ್- ವಿಕ್ರಮ್ ಲ್ಯಾಂಡರ್- ಲ್ಯಾಂಡಿಂಗ್‌ಗಾಗಿ ಚಂದ್ರನ ಮೇಲ್ಮೈಯಲ್ಲಿ ಸರಿಯಾದ ಸ್ಥಳವನ್ನು ಪತ್ತೆಹಚ್ಚುತ್ತಿವೆ. ಎಲ್ಲವೂ ಯೋಜನೆಯ ಪ್ರಕಾರ ಯಶಸ್ವಿಯಾಗಿ ನಡೆದರೆ, ಭಾರತವು ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಲಿದೆ.
ಇದನ್ನೂ ಓದಿ: Chandrayaan -3 : ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ಮತ್ತು ರೋವರ್ ಏನು ಮಾಡಲಿದೆ?
ಜುಲೈ 14ರಂದು ISRO ಸಂಸ್ಥೆಯು LVM3 M4 l ವೆಹಿಕಲ್ ಮೂಲಕ ಚಂದ್ರಯಾನ ನೌಕೆಯನ್ನು ಉಡಾಯಿಸಿತ್ತು. ಆಗಸ್ಟ್ 5ರಂದು ಅದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ನಂತರ ಚಂದ್ರನ ಕಕ್ಷೆಯಲ್ಲಿ ಐದು ಸುತ್ತು ಬಂದಿತ್ತು. ಆಗಸ್ಟ್ 17ರಂದು ನೌಕೆಯ ಪ್ರೊಪಲ್ಷನ್ ಸಿಸ್ಟಮ್‌ನಿಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್ ಬೇರ್ಪಟ್ಟಿತ್ತು. ಆ.18ರಂದು ಮಾಡ್ಯೂಲ್ ಚಂದ್ರನ ಅತಿ ಹತ್ತಿರದ ಕಕ್ಷೆಗೆ (30 ಕಿಮೀ) ಇಳಿದಿತ್ತು.