Site icon Vistara News

Wayanad Landslide: ವಯನಾಡು ಹಿಂದೆ ಹೇಗಿತ್ತು? ಈಗ ಹೇಗಿದೆ? ದುರಂತ ಸ್ಥಳದ ದೃಶ್ಯ ಸೆರೆ ಹಿಡಿದ ಇಸ್ರೋ

Wayanad landslides

ಹೈದರಾಬಾದ್‌: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ(Wayanad Landslide)ದ ಭೀಕರ ದೃಶ್ಯವನ್ನು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸೆರೆ ಹಿಡಿದಿದೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌(NRSC) ಹೈ ರೆಸೊಲ್ಯೂಶನ್‌ ಉಪಗ್ರಹದ ಚಿತ್ರವನ್ನು ಬಿಡುಗಡೆ ಮಾಡಿದೆ. ಭೀಕರ ದುರಂತ ಸಂಭವಿಸಿದ ವಯನಾಡ್‌ ಜಿಲ್ಲೆಯ ಚೂರಲ್‌ಮಾಲದ ದುರಂತಕ್ಕೂ ಮುನ್ನ ಮತ್ತು ನಂತರದ ಚಿತ್ರವನ್ನು NRSC ಇಸ್ರೋ ರಿಲೀಸ್‌ ಮಾಡಿದೆ.

ಕಾರ್ಟೊಸ್ಯಾಟ್ 3 ಉಪಗ್ರಹವು ಮೇ 22 ರಂದು ಒಂದು ಚಿತ್ರವನ್ನು ತೆಗೆದುಕೊಂಡಿತು ಮತ್ತು ಜುಲೈ 31 ರಂದು ಭೂಕುಸಿತದ ಒಂದು ದಿನದ ನಂತರ RISAT ಉಪಗ್ರಹವು ಮತ್ತೊಂದು ಚಿತ್ರವನ್ನು ತೆಗೆದಿದೆ. ಬರೋಬ್ಬರಿ 86,000 ಚದರ ಮೀಟರ್‌ಗಳಷ್ಟು ಭೂಮಿ ಹಾನಿಗೊಳಗಾಗಿರುವುದನ್ನು ಸ್ಯಾಟಲೈಟ್‌ ಚಿತ್ರದಲ್ಲಿ ಕಾಣಬಹುದಾಗಿದೆ. ಸುಮಾರು ಎಂಟು ಕಿ.ಮೀಗಳಷ್ಟು ಭೂಮಿ ಸಂಪೂರ್ಣವಾಗಿ ನಾಶವಾಗಿದೆ.

ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ ಮೃತರ ಸಂಖ್ಯೆ ಈಗ 300ದಾಟಿದೆ. ಇನ್ನು ನಾಪತ್ತೆಯಾದವರ ಸಂಖ್ಯೆ ಅದೆಷ್ಟೋ… ಹೈ-ರೆಸಲ್ಯೂಷನ್‌ ಉಪಗ್ರಹ ಚಿತ್ರಗಳನ್ನು ರಿಲೀಸ್‌ ಮಾಡಿರುವ ಇಸ್ರೋ, ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ತೋರಿಸಿದೆ.

ಉಪಗ್ರಹ ಚಿತ್ರಗಳ ಪ್ರಕಾರ ಸಮುದ್ರ ಮಟ್ಟದಿಂದ 1500 ಮೀಟರ್‌ ಎತ್ತರದಲ್ಲಿರುವ ಗುಡ್ಡದ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದೆ. ಇನ್ನು ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ಉಪಗ್ರಹದ ಮಾಹಿತಿಯ ಪ್ರಕಾರ ಈ ಹಿಂದೆ ಭೂ ಕುಸಿತ ಸಂಭವಿಸಿದ ಅದೇ ಸ್ಥಳದಲ್ಲೇ ಭೂ ಕುಸಿತವಾಗಿದೆ ಎಂದು ಹೇಳಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಯನಾಡ್‌ ಭೂಕುಸಿದ ಉಪಗ್ರಹ ಚಿತ್ರವನ್ನು ಬಿಡುಗಡೆಗೊಳಿಸಿ ಹಾನಿಯ ವ್ಯಾಪ್ತಿಯನ್ನು ತಿಳಿಸಿದೆ.

ಭಾರೀ ದೊಡ್ಡ ಪ್ರಮಾಣದ ಕುಸಿತ ಎಂಬುದು ಚಿತ್ರಗಳ ಮೂಲಕ ಸ್ಪಷ್ಟವಾಗಿದೆ.
ಭೂಕುಸಿತ ವಿನಾಶವನ್ನು ಸೆರೆಹಿಡಿಯಲು, ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಇಸ್ರೋದ ಸುಧಾರಿತ ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹ ಮತ್ತು ಮೋಡದ ಹೊದಿಕೆಯನ್ನು ಭೇದಿಸಬಲ್ಲ RISAT ಉಪಗ್ರಹದ ಸಹಾಯದಿಂದ ಇಂ ಚಿತ್ರವನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Exit mobile version