Site icon Vistara News

Narendra Modi: ‘ಮನೆ’ಯೊಳಗೆ ನುಗ್ಗಿ ಹೊಡೆಯುತ್ತೇವೆ, ದೇಶದ ಸುರಕ್ಷತೆಗಾಗಿ ನಾವು ಏನು ಮಾಡಲೂ ಸಿದ್ಧ: ಸಂಸತ್ತಲ್ಲಿ ಮೋದಿ ಗುಡುಗು

Narendra Modi

We keep India first in policy and governance: Says Narendra Modi In Lok Sabha

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ (Lok Sabha) ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನರೇಂದ್ರ ಮೋದಿ (Narendra Modi) ಮಾತನಾಡಿದರು. ಇದೇ ವೇಳೆ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಜತೆಗೆ ದೇಶದ ಸುರಕ್ಷತೆಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ ಎಂಬುದಾಗಿ ಹೇಳಿದರು. “ಕಳೆದ 10 ವರ್ಷಗಳಲ್ಲಿ ಭಾರತದ ಸಾಮರ್ಥ್ಯವು ಬದಲಾಗಿದೆ. ನಾವು ದೇಶದ ಸುರಕ್ಷತೆಯನ್ನೇ ಧ್ಯೇಯವನ್ನಾಗಿಸಿಕೊಂಡು ಆಡಳಿತ ನಡೆಸಿದ್ದೇವೆ. ಮನೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ನಾವು ರೂಪಿಸಿಕೊಂಡಿದ್ದೇವೆ” ಎಂದರು.

ಪ್ರತಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು. “2014ರಲ್ಲಿ ದೇಶದ ಜನ ಸಂಕಷ್ಟದಲ್ಲಿದ್ದರು. ಜನರಿಗೆ ಸರಿಯಾದ ಮನೆ ಇರಲಿಲ್ಲ, ಒಂದು ಗ್ಯಾಸ್‌ ಕನೆಕ್ಷನ್‌ ಇರಲಿಲ್ಲ. ಪ್ರತಿಯೊಂದು ಸರ್ಕಾರದ ಕೆಲಸಕ್ಕೂ ಲಂಚ ನೀಡಬೇಕಿತ್ತು. ಪ್ರತಿಯೊಂದು ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ದೇಶದ ಯುವಕರು ಭರವಸೆಯನ್ನೇ ಕಳೆದುಕೊಂಡು, ನಿರಾಶೆಯ ಮಡುವಿನಲ್ಲಿ ಸಿಲುಕಿದ್ದರು. ಆದರೆ, ಈಗ ದೇಶವು ಬದಲಾಗಿದೆ. ಭ್ರಷ್ಟಾಚಾರವು ನಿರ್ಮೂಲನೆಯಾಗಿದೆ. ನಾವು ವಿಕಸಿತ ಮಾರ್ಗದಲ್ಲಿ ಸಾಗುತ್ತಿದೆ” ಎಂದು ಹೇಳಿದರು.

“2014ಕ್ಕೂ ಮೊದಲು ದೇಶದ ಸಂಪತ್ತನ್ನು ಕೇವಲ ಕುಟುಂಬಗಳು ತಮ್ಮ ಸ್ವತ್ತೇನೋ ಎಂಬಂತೆ ಕೊಳ್ಳೆ ಹೊಡೆಯುತ್ತಿದ್ದವು. ದೊಡ್ಡ ದೊಡ್ಡದವರ ಕೈಗಳು ಇದರಲ್ಲಿ ಇದ್ದವು. ಆದರೆ, ನಾವು 5ಜಿ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಂಡು, ದೇಶಾದ್ಯಂತ ವಿಸ್ತರಣೆ ಮಾಡಿದ್ದೇವೆ. ಕಲ್ಲಿದ್ದಲು ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲಿ ಪಾರದರ್ಶಕತೆ ಮೂಡಿದೆ. ದೇಶದಲ್ಲಿ ದಾಳಿಯಾದರೆ ಆಡಳಿತಾರೂಢ ಸರ್ಕಾರವು ಬಾಯಿಮುಚ್ಚಿಕೊಂಡು ಕೂರುತ್ತಿತ್ತು. ಆದರೆ, ಈಗ ದೇಶದ ಸಾಮರ್ಥ್ಯ ಬದಲಾಗಿದೆ. ಮನೆಗೆ ನುಗ್ಗಿ ಹೊಡೆಯುವ, ಸರ್ಜಿಕಲ್‌ ಸ್ಟ್ರೈಕ್‌, ವಾಯುದಾಳಿ, ಮಾವೋವಾದಿಗಳ ನಿಗ್ರಹ ಈಗ ಸಾಧ್ಯವಾಗಿದೆ. ಭಾರತದ ಸುರಕ್ಷತೆಗೆ ಸರ್ಕಾರವು ಏನು ಬೇಕಾದರೂ ಮಾಡುತ್ತದೆ ಎಂಬುದನ್ನು ಜಗತ್ತೇ ನೋಡಿದೆ” ಎಂದು ಹೇಳಿದರು.

“ಕಳೆದ 10 ವರ್ಷಗಳ ಉತ್ತಮ ಆಡಳಿತವನ್ನು ನೋಡಿ ದೇಶದ ಜನ ನಮಗೆ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಹೊರಗೆ ತಂದಿದ್ದು ಸೇರಿ ಹಲವು ಉತ್ತಮ ಕೆಲಸಗಳು ನಮ್ಮ ಗೆಲುವಿಗೆ ಕಾರಣವಾಗಿವೆ. 2014ರಲ್ಲಿ ನಾವು ಒಂದು ವಿಷಯ ಹೇಳಿದ್ದೆವು. ಭ್ರಷ್ಟಾಚಾರದ ವಿರುದ್ಧ ನಾವು ಶೂನ್ಯ ಸಹಿಷ್ಣುಗಳಾಗಿರುತ್ತೇವೆ ಎಂದಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಿದೆವು. ಶೂನ್ಯ ಸಹಿಷ್ಣುತೆಯನ್ನು ತೋರಿಸಿದ ಕಾರಣಕ್ಕಾಗಿ ಜನ ಬೆಂಬಲ ನೀಡಿದ್ದಾರೆ” ಎಂದರು.

ಭಾಷಣದುದ್ದಕ್ಕೂ ಪ್ರತಿಪಕ್ಷಗಳ ಗಲಾಟೆ

ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಪ್ರತಿಪಕ್ಷಗಳು ಗಲಾಟೆ ನಡೆಸಿದವು. ಭಾಷಣದುದ್ದಕ್ಕೂ ನಮಗೆ ನ್ಯಾಯ ಬೇಕು, ಮಣಿಪುರದ ಜನರಿಗೆ ನ್ಯಾಯ ದೊರಕಿಸಬೇಕು, ಗೂಂಡಾಗಿರಿ ಈಗ ನಡೆಯುವುದಿಲ್ಲ, ಶೇಮ್‌ ಶೇಮ್‌ ಎಂಬುದು ಸೇರಿ ಹಲವು ಘೋಷಣೆಗಳ ಮೂಲಕ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು

Exit mobile version