Site icon Vistara News

Bajrang Dal: ಎಲ್ಲ ಮಸೀದಿಗಳನ್ನು ಬಜರಂಗದಳ ಕಚೇರಿಗಳನ್ನಾಗಿ ಮಾಡುತ್ತೇವೆ; ಸಂಘಟನೆ ನಾಯಕ ಶಪಥ

Bajrang Dal Leader Against Mosques

We will convert all mosques into Bajrang Dal offices in Sehore; Outfit Leader Warns

ಭೋಪಾಲ್:‌ ಕರ್ನಾಟಕದಲ್ಲಿ ಬಜರಂಗದಳ ನಿಷೇಧದ ಕುರಿತು ಕಾಂಗ್ರೆಸ್‌ ಪ್ರಣಾಳಿಕೆ ಹೊರಡಿಸಿದ ಬಳಿಕ ಭಾರಿ ವಿವಾದ ಸೃಷ್ಟಿಯಾಗಿತ್ತು. ಹಿಂದು ಸಂಘಟನೆಯ ನಿಷೇಧದ ಕುರಿತು ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ, ಮಧ್ಯಪ್ರದೇಶದಲ್ಲಿ ಬಜರಂಗದಳ (Bajrang Dal) ಸಂಘಟನೆಯ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯಲ್ಲಿರುವ ಎಲ್ಲ ಮಸೀದಿಗಳನ್ನು ಬಜರಂಗದಳದ ಕಚೇರಿಗಳನ್ನಾಗಿ ಮಾಡುತ್ತೇವೆ” ಎಂದು ಹೇಳಿರುವ ವಿಡಿಯೊ ಈಗ ವೈರಲ್‌ ಆಗಿದೆ.

ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯಲ್ಲಿ ಇಸ್ಲಾಂಗೆ ಮತಾಂತರ ಹಾಗೂ ಲವ್‌ ಜಿಹಾದ್‌ ನಡೆಯುತ್ತಿವೆ ಎಂದು ಜೂನ್‌ 25ರಂದು ವಿಶ್ವ ಹಿಂದು ಪರಿಷತ್‌ ಹಾಗೂ ಬಜರಂಗದಳ ಸಂಘಟನೆಗಳು ʼಹಿಂದು ಜಾಗರಣ ಯಾತ್ರೆʼ ನಡೆಸಿದ್ದಾರೆ. ಆ ಮೂಲಕ ಮತಾಂತರ ಹಾಗೂ ಲವ್‌ ಜಿಹಾದ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಜರಂಗದಳದ ನಾಯಕರೊಬ್ಬರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಇಲ್ಲಿದೆ ವೈರಲ್‌ ಆದ ವಿಡಿಯೊ

“ನಾನು ಈ ಸಂದರ್ಭದಲ್ಲಿ ಎಲ್ಲರಿಗೂ ಒಂದೇ ಮಾತು ಹೇಳಲು ಇಷ್ಟಪಡುತ್ತೇನೆ. ಮುಂದಿನ ದಿನಗಳಲ್ಲಿ ನಾವು ಸೆಹೋರ್‌ ಜಿಲ್ಲೆಯಲ್ಲಿರುವ ಎಲ್ಲ ಮಸೀದಿಗಳನ್ನು ಬಜರಂಗದಳದ ಕಾರ್ಯಾಲಯಗಳನ್ನಾಗಿ ಮಾಡುತ್ತೇವೆ” ಎಂದು ಆಕ್ರೋಶಭರಿತವಾಗಿ ಹೇಳಿದ್ದಾರೆ. ಬಜರಂಗದಳದ ನಾಯಕ ಹೀಗೆ ಹೇಳುತ್ತಲೇ ಸುತ್ತಮುತ್ತ ಇದ್ದವರೆಲ್ಲ ಘೋಷಣೆ ಕೂಗಿದ್ದಾರೆ. ಆದರೆ, ಬಜರಂಗದಳದ ನಾಯಕ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Eid al Adha: ಬಕ್ರೀದ್‌ ದಿನ ಮಂಗಳೂರಲ್ಲಿ ಗೋವುಗಳ ಮಾರಣಹೋಮ ಆತಂಕ; ಜಿಲ್ಲಾಡಳಿತಕ್ಕೆ ಬಜರಂಗದಳ ಮೊರೆ

ಸೆಹೋರ್‌ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮತಾಂತರ ಹಾಗೂ ಲವ್‌ ಜಿಹಾದ್‌ ಜಾಸ್ತಿಯಾಗಿದೆ ಎಂದು ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ, ಲವ್‌ ಜಿಹಾದ್‌ ಹಾಗೂ ಮತಾಂತರದ ವಿರುದ್ಧ ಹಿಂದು ಸಂಘಟನೆಗಳು ಹಿಂದು ಜಾಗರಣ ಯಾತ್ರೆ ನಡೆಸಿವೆ. ಸೆಹೋರ್‌ ಜಿಲ್ಲೆಯ 130 ಗ್ರಾಮಗಳಲ್ಲಿ 130 ಕಿಲೋಮೀಟರ್‌ ಸಂಚರಿಸಿ ಲವ್‌ ಜಿಹಾದ್‌ ಹಾಗೂ ಮತಾಂತರದ ಕುರಿತು ಜಾಗೃತಿ ಮೂಡಿಸಿವೆ. ಕಳೆದ ತಿಂಗಳು ತಿಂಗಳು ಮಸೀದಿ ಬಳಿ ಆರ್‌ಎಸ್‌ಎಸ್‌ ಕುರಿತು ವಿವಾದಾತ್ಮಕ ಭಿತ್ತಿಪತ್ರ ಅಂಟಿಸಿದ ಕಾರಣ 10 ಜನರ ವಿರುದ್ಧ ಕೇಸ್‌ ದಾಖಲಿಸಲಾಗಿತ್ತು.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version