ಚೆನ್ನೈ: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ (Annamalai) ಅವರ ದುಬಾರಿ ವಾಚ್ ಪ್ರಕರಣವು ತಿರುವು ಪಡೆದುಕೊಂಡಿದೆ. ಅವರು ಈ ದುಬಾರಿ ವಾಚ್ ಅನ್ನು ದೇಶಭಕ್ತಿಯ ಪ್ರತೀಕವಾಗಿ ಧರಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ತಮ್ಮ ಸಾವಿನ ತನಕವೂ ಅದು ತಮ್ಮ ಬಳಿಯೇ ಇರಲಿದೆ ಎಂದು ಹೇಳಿದ್ದಾರೆ.
ಕೇವಲ ಐದು ಆಡುಗಳನ್ನು ಹೊಂದಿರುವ ವ್ಯಕ್ತಿಯು 5 ಲಕ್ಷ ರೂ. ಮೌಲ್ಯದ ಬೆಲ್ ಆ್ಯಂಡ್ ರಾಸ್ ಲಿಮಿಟೆಡ್ ಎಡಿಷನ್ ರಫೇಲ್ ವಾಚ್ ಧರಿಸಲು ಹೇಗೆ ಸಾಧ್ಯ? ಈ ವಾಚ್ ಖರೀದಿಯ ರಶೀದಿ ಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಡಿಎಂಕೆ ಸಚಿವ ಸೇಂಥಿಲ್ ಬಾಲಾಜಿ ಅವರು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಲು ಹೋಗಿ ಅಣ್ಣಾ ಮಲೈ ಅವರು ರಂಜನೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್‌ಫ್ಯಾಕ್ಟ್, ಈ ಪ್ರಶ್ನೆಗೆ ಉತ್ತರಿಸುವ ಅಗತ್ಯವಿರಲಿಲ್ಲ ಎಂದು ಬಿಜೆಪಿಯೊಳಗಿನ ನಾಯಕರೇ ಹೇಳಿದರೂ, ದುಬಾರಿ ವಾಚ್ ಅನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರು ಮಾಡುತ್ತಿದ್ದಾರೆ.
ಈ ವಾಚ್ ಅನ್ನು ರಫೇಲ್ ಮಟಿರಿಯಲ್‌ಗಳಿಂದ ಮಾಡಲಾಗಿದೆ. ನನಗಂತೂ ರಫೇಲ್ ಜೆಟ್ ಹಾರಿಸಲು ಸಾಧ್ಯವಿಲ್ಲ. ಹಾಗಾಗಿ, ದೇಶಭಕ್ತಿಯ ಪ್ರತೀಕವಾಗಿ ನಾನು ಈ ದುಬಾರಿ ವಾಚ್ ಧರಿಸುತ್ತಿದ್ದೇನೆ. ಇದು ನನ್ನ ಕೊನೆಯ ತನಕ ನನ್ನ ಬಳಿಯೇ ಇರಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ತಾವು ಈ ವಾಚ್ ಅನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷನಾಗುವುದಕ್ಕಿಂತ ಮುಂಚೆಯೇ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಖರೀದಿಯ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ | Bell & Ross Watch | ನೀವು ಧರಿಸುವ ದುಬಾರಿ ವಾಚ್ ಖರೀದಿಯ ರಶೀದಿ ತೋರಿಸಿ: ಬಿಜೆಪಿ ನಾಯಕ ಅಣ್ಣಾಮಲೈಗೆ ಡಿಎಂಕೆ ಸವಾಲು